ದುಬೈ : ತುಂಬಾ ವರ್ಷಗಳ ನಂತರ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ ವಿಕೆಟ್ ಕೀಪಿಂಗ್‌ಗೆ ಮರಳುವ ಸಾಧ್ಯತೆಯಿದೆ. ಇದಕ್ಕೆ ಪೂರಕವೆಂಬಂತೆ ಮಿಸ್ಟರ್ 360 ಖ್ಯಾತಿಯ ಎಬಿಡಿ ಗ್ರೌಂಡ್ನಲ್ಲಿ ದೀರ್ಘ ಸಮಯ ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸಿದ್ದಾರೆ.
3 ಬಾರಿ ಐಪಿಎಲ್ ಫೈನಲ್ನಲ್ಲಿ ಸೋತಿರುವ ಆರ್ಸಿಬಿ ಕಳೆದ ಮೂರು ಆವೃತ್ತಿಗಳಿಂದ ಪ್ಲೇ ಆಫ್ ಹಂತಕ್ಕೇರಲು ಹರಸಾಹಸ ಪಡುತ್ತಿದೆ. ಈ ಬಾರಿ ಸಂಪೂರ್ಣ ಐಪಿಎಲ್ ಯುಎಇನಲ್ಲಿ ನಡೆಯುತ್ತಿರುವುದರಿಂದ, ಇದರ ಲಾಭ ಪಡೆದುಕೊಳ್ಳಲು ಕೊಹ್ಲಿ ಟೀಮ್ ಬಯಸಿದೆ. ಹಾಗಾಗಿ ವಿಲಿಯರ್ಸ್ ದೀರ್ಘ ಸಮಯದ ನಂತರ ಮತ್ತೆ ಗ್ಲೌಸ್ ತೊಡಲಿದ್ದಾರೆ.
ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ಆರ್ಸಿಬಿ ಬ್ಯಾಟಿಂಗ್ ಲೈನ್ಅಪ್ ಬಲಿಷ್ಠವಾಗಿದೆ. ಆದ್ದರಿಂದ ಪಾರ್ಥೀವ್ ಪಟೇಲ್ ಬದಲು ಕರ್ನಾಟಕದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ಗೆ ಈ ಬಾರಿ ಆಡುವ 11ರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.
ಪಡಿಕ್ಕಲ್ ಆಗಮನದಿಂದ ಬ್ಯಾಟ್ಸ್ಮನ್ಗಳ ಸಂಖ್ಯೆಯೂ ಹೆಚ್ಚಾಗಲಿರುವುದರಿಂದ ಪಾರ್ಥೀವ್ ಪಟೇಲ್ ಬದಲಿಗೆ ಎಬಿಡಿ ನಾಲ್ಕನೇ ಕ್ರಮಾಂಕ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುವ ಸಾಧ್ಯತೆ ದಟ್ಟವಾಗಿದೆ. ಪೂರಕವೆಂಬಂತೆ ಎಬಿಡಿ ಕೂಡ ಭಾನುವಾರ ಬ್ಯಾಟಿಂಗ್ ಬದಲು ಹೆಚ್ಚು ಕೀಪಿಂಗ್ ಅಭ್ಯಾಸ ನಡೆಸಿದ್ದಾರೆ.
-
We think that this is something you’ve all been waiting to see! 🤩🧤 #PlayBold #IPL2020 #WeAreChallengers pic.twitter.com/IXKdillpfC
— Royal Challengers Bangalore (@RCBTweets) August 30, 2020 " class="align-text-top noRightClick twitterSection" data="
">We think that this is something you’ve all been waiting to see! 🤩🧤 #PlayBold #IPL2020 #WeAreChallengers pic.twitter.com/IXKdillpfC
— Royal Challengers Bangalore (@RCBTweets) August 30, 2020We think that this is something you’ve all been waiting to see! 🤩🧤 #PlayBold #IPL2020 #WeAreChallengers pic.twitter.com/IXKdillpfC
— Royal Challengers Bangalore (@RCBTweets) August 30, 2020
ಆರ್ಸಿಬಿ ಕೋಚ್ ಸೈಮನ್ ಕ್ಯಾಟಿಚ್ ಕೂಡ ಯುವ ಆಟಗಾರನ ಮೇಲೆ ಸಾಕಷ್ಟು ಭರವಸೆಗಳನ್ನಿಟ್ಟುಕೊಂಡಿದ್ದು, ಐಪಿಎಲ್ನಲ್ಲಿ ಅವಕಾಶ ನೀಡುವುದಾಗಿ ಮುನ್ಸೂಚನೆ ನೀಡಿದ್ದರು. ಇದೀಗ ಅದು ಪಕ್ಕ ಆದಂತಿದೆ. 19 ವರ್ಷದ ಪಡಿಕ್ಕಲ್ ಕಳೆದ ವರ್ಷ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ 4 ಅರ್ಧಶತಕ ಸಹಿತ 310ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.
ಬಿಸಿಸಿಐ ಆಯೋಜನೆ ಮಾಡುವ ವಿಜಯ್ ಹಜಾರೆ(ಏಕದಿನ) ಟ್ರೋಫಿಯಲ್ಲೂ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್ ನಡೆಸಿ 2 ಶತಕ ಹಾಗೂ 5 ಅರ್ಧಶತಕ ಸಹಿತ 609 ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್ಮನ್ ಆಗಿದ್ದರೆ, ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ಬರೋಬ್ಬರಿ 580 ರನ್ ಗಳಿಸಿ ಮಿಂಚಿದ್ದರು.