ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್ಸಿಬಿ 8 ಪ್ಲೇಯರ್ಸ್ ಖರೀದಿ ಮಾಡಿದ್ದು, ಪ್ರಮುಖವಾಗಿ ಕೈಲ್ ಜ್ಯಾಮಿಸನ್ (15 ಕೋಟಿ ರೂ), ಗ್ಲೇನ್ ಮ್ಯಾಕ್ಸ್ವೆಲ್ (14.25 ಕೋಟಿ ರೂ) ಸೇರಿದಂತೆ ಉತ್ತಮ ಪ್ಲೇಯರ್ಸ್ ಖರೀದಿ ಮಾಡಿ ತಂಡವನ್ನು ಮತ್ತಷ್ಟು ಬಲಿಷ್ಠ ಮಾಡಿಕೊಂಡಿದೆ.
-
“I just want to say it again, to the best fanbase... We look forward to your support”- Captain Kohli addresses RCB fans and shares his views about the recently concluded #IPLAuction and our #ClassOf2021@imVkohli#PlayBold #WeAreChallengers pic.twitter.com/qUxt9xTVSj
— Royal Challengers Bangalore (@RCBTweets) February 20, 2021 " class="align-text-top noRightClick twitterSection" data="
">“I just want to say it again, to the best fanbase... We look forward to your support”- Captain Kohli addresses RCB fans and shares his views about the recently concluded #IPLAuction and our #ClassOf2021@imVkohli#PlayBold #WeAreChallengers pic.twitter.com/qUxt9xTVSj
— Royal Challengers Bangalore (@RCBTweets) February 20, 2021“I just want to say it again, to the best fanbase... We look forward to your support”- Captain Kohli addresses RCB fans and shares his views about the recently concluded #IPLAuction and our #ClassOf2021@imVkohli#PlayBold #WeAreChallengers pic.twitter.com/qUxt9xTVSj
— Royal Challengers Bangalore (@RCBTweets) February 20, 2021
ಹೊಸ ತಂಡ ರಚನೆಯಾಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾತನಾಡಿದ್ದು, ಆರ್ಸಿಬಿ ಪ್ರಾಂಚೈಸಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವೀಟರ್ನಲ್ಲಿ ಹಾಕಿಕೊಂಡಿದೆ.
ಆರ್ಸಿಬಿ ಪ್ರಾಂಚೈಸಿ ಖರೀದಿ ಮಾಡಿರುವ ಪ್ಲೇಯರ್ಸ್ ಬಗ್ಗೆ ವಿರಾಟ್ ಮೆಚ್ಚುಗೆ ಮಾತುಗಳನ್ನಾಡಿದ್ದು, ನಮಗೆ ಬೇಕಾದುದನ್ನು ಪಡೆದುಕೊಂಡಿದ್ದೇವೆ. ಹಿಂದಿನ ಆವೃತ್ತಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಮುಂದಿನ ಆವೃತ್ತಿಯಲ್ಲೂ ಅದು ಮುಂದುವರೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ಓದಿ: ಐಪಿಎಲ್ ಹರಾಜಿನಲ್ಲಿ 8 ಪ್ಲೇಯರ್ಸ್ ಖರೀದಿ ಮಾಡಿದ ಆರ್ಸಿಬಿ... ಕೊಹ್ಲಿ ಪಡೆಯಲ್ಲಿನ ಆಟಗಾರರು ಇವರು!
ಮೊನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್ಸಿಬಿ ಕೈಲ್ ಜ್ಯಾಮಿಸನ್ (15 ಕೋಟಿ ರೂ), ಗ್ಲೇನ್ ಮ್ಯಾಕ್ಸ್ವೆಲ್ (14.25 ಕೋಟಿ ರೂ), ಡಾನ್ ಕ್ರಿಶ್ಚಿಯನ್ (4.8 ಕೋಟಿ ರೂ), ಸಚಿನ್ ಬೇಬಿ ( 20 ಲಕ್ಷ ರೂ), ರಜತ್ ಪಟಿದರ್ (20 ಲಕ್ಷ ರೂ), ಮೊಹಮ್ಮದ್ ಅಜರುದ್ದೀನ್ (20 ಲಕ್ಷ ರೂ), ಪ್ರಭು ದೇಸಾಯಿ (20 ಲಕ್ಷ ರೂ), ಕೆ.ಎಸ್. ಭರತ್ (20 ಲಕ್ಷ ರೂ) ಅವರನ್ನು ಖರೀದಿ ಮಾಡಿದೆ.