ETV Bharat / sports

ಬೆಂಗಳೂರು ಕೈ ಬಿಟ್ಟ ಆರ್​ಸಿಬಿ.. ಟ್ವಿಟರ್​ನಲ್ಲಿ ಕೆರಳಿದ ಕನ್ನಡಿಗರು! - ಆರ್​ಸಿಬಿ ವಿರುದ್ಧ ಅಭಿಮಾನಿಗಳ ಆಕ್ರೋಶ

ಟ್ವಿಟರ್​ ಖಾತೆಯಲ್ಲಿ ಆರ್​ಸಿಬಿ ತಂಡ ಬೆಂಗಳೂರು ಎಂಬ ಹೆಸರನ್ನ ಕೈ ಬಿಟ್ಟಿದ್ದು ಅಭಿಮಾನಿಗಳು ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು ಕೈ ಬಿಟ್ಟ ಆರ್​ಸಿಬಿ
author img

By

Published : Nov 25, 2019, 2:26 PM IST

Updated : Nov 25, 2019, 3:02 PM IST

ಬೆಂಗಳೂರು: ಇಂಡಿಯನ್ ಪ್ರೀಮಿಯರ್​ ಲೀಗ್​ನ ಕಳೆದ 12 ಆವೃತ್ತಿಗಳಲ್ಲಿ ಕಪ್​ ಗೆಲ್ಲದಿದ್ದರೂ ಅತಿಹೆಚ್ಚು ಅಭಿಮಾನಿಗಳನ್ನ ಸಂಪಾದಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಡಿಕೊಂಡಿರುವ ಎಡವಟ್ಟಿಗೆ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ.

ಆರ್​ಸಿಬಿ ತಂಡಕ್ಕೆ ಅಭಿಮಾನಿಗಳೇ ಆಧಾರ. ಪ್ರತಿ ಐಪಿಎಲ್​ನಲ್ಲೂ ಕಪ್​ ಗೆಲ್ಲದಿದ್ದಾಗ ನಾವು ನಿಮ್ಮೊಂದಿಗಿದ್ದೇವೆ ಎಂದು ಬೆಂಬಲ ಸೂಚಿಸುತಿದ್ದ ಅಭಿಮಾನಿಗಳು ಇದೀಗ ಆರ್​ಸಿಬಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದಕ್ಕೆ ಕಾರಣ ಟ್ವಿಟರ್​ ಖಾತೆಯಲ್ಲಿ ಬೆಂಗಳೂರು ಎಂಬ ಹೆಸರನ್ನ ತೆಗೆದು ಹಾಕಿರುವುದು.

Royal Challengers Bangalore ಎಂದು ಟ್ವಿಟರ್​ ಖಾತೆ ಹೆಸರು ಹೊಂದಿದ್ದ ಆರ್​ಸಿಬಿ ತಂಡ, ತನ್ನ ಟ್ವಿಟರ್​ ಖಾತೆಯಿಂದ Bangalore ತೆಗುದು ಹಾಕಿದೆ. ಇದಕ್ಕೆ ಕನ್ನಡಿಗರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  • ಒಂದು ಕಪ್ ಗೆಲ್ಲದಿದ್ದರೂ
    ಒಬ್ಬ ಕನ್ನಡಿಗನನ್ನೂ ಆಡಿಸದಿದ್ದರೂ
    ನಾವು ನಿಮ್ಮನ್ನು ಇಷ್ಟಪಡಲು ಕಾರಣ,ನಿಮ್ಮೊಳ ರಾಯಲ್ ಚಾಲೆಂಜರ್ ಅಲ್ಲ.
    ನಿಮ್ಮ ಊರು,ಸೂರು,ಕ್ರೀಡಾಂಗಣ&ನೀವೆ ಆಗಿದ್ದ "ಬೆಂಗಳೂರು"
    ಈಗ ಅದನ್ನೇ ಬಿಟ್ಟು ಮುನ್ನೆಡೆಯಲು ಹೊರಟರೆ ಅಭಿಮಾನಿಗಳ ಕೆಂಗಣ್ಣು ಬಿದ್ದೀತು
    ದಯವಿಟ್ಟು ಬೆಂಗಳೂರು ಸೇರಿಸಿ,
    ಸೋಲೋ ಗೆಲುವೋ ಜೊತೆಗಂತು ಇರುತ್ತೇವೆ. pic.twitter.com/BTkw4IYHl3

    — ಸುನಿ/SuNi (@SimpleSuni) November 24, 2019 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ನಿರ್ದೇಶಕ ಸಿಂಪಲ್ ಸುನಿ 'ಒಂದು ಕಪ್ ಗೆಲ್ಲದಿದ್ದರೂ, ಒಬ್ಬ ಕನ್ನಡಿಗನನ್ನೂ ಆಡಿಸದಿದ್ದರೂ ನಾವು ನಿಮ್ಮನ್ನು ಇಷ್ಟಪಡಲು ಕಾರಣ, ನಿಮ್ಮೊಳಗಿನ ರಾಯಲ್ ಚಾಲೆಂಜರ್ ಅಲ್ಲ. ನಿಮ್ಮ ಊರು, ಸೂರು, ಕ್ರೀಡಾಂಗಣ ಮತ್ತು ನೀವೆ ಆಗಿದ್ದ "ಬೆಂಗಳೂರು". ಈಗ ಅದನ್ನೇ ಬಿಟ್ಟು ಮುನ್ನೆಡೆಯಲು ಹೊರಟರೆ ಅಭಿಮಾನಿಗಳ ಕೆಂಗಣ್ಣು ಬಿದ್ದೀತು ದಯವಿಟ್ಟು ಬೆಂಗಳೂರು ಸೇರಿಸಿ, ಸೋಲೋ ಗೆಲುವೋ ಜೊತೆಗಂತು ಇರುತ್ತೇವೆ'. ಎಂದು ಆಗ್ರಹಿಸಿದ್ದಾರೆ.

  • Super sir...@SimpleSuni ನಾವು RCB ನಾ support ಮಾಡೊದು ಯಾವದೊ star ಆಟಗಾರ ಇದಾರೆ ಅಂತ ಅಲ್ಲಾ RCB ಅಲ್ಲಿ ನಮ್ಮ ಹೆಮ್ಮೆಯ ಬೆಂಗಳೂರು ಇದೆ ಅಂತ ಅಷ್ಟೆ...ಈ ಅಭಿಮಾನ ಇನ್ನೂ ನೂರು ವರುಷ ಕಳೆದರು ಹೀಗೆ ಇರುತ್ತೆ
    ಈ ಸಲಾ ಕಪ್ ನಮ್ದೆ 🔥🔥

    — Ajit toogudeep (@Ajit77489499) November 24, 2019 " class="align-text-top noRightClick twitterSection" data=" ">
  • Well said sir, ನಾವು ಇವರೀಗೆ ಬೆಂಬಲಾ ಕೊಟ್ಟಿದ್ದು ಯಾರೋ ತುಕಾಲಿ captain @imVkohli ನಾ ಅಥವಾ ಯಾರೋ ಒಬ್ಬ player @ABdeVilliers17 ನಾ ನೋಡಿ ಅಲ್ಲ #RCB ಇದರಲ್ಲಿರೋ ನಮ್ಮ ಉರನ್ನ ನೋಡಿ,, ಅದೇ ಅವರೀಗೆ ಬೇಡ ಅಂದ್ರೆ ನಮಗೂ #RC ಇದು ಬೆಡಾ..

    — Aakash Jaje (@AkashJaje) November 25, 2019 " class="align-text-top noRightClick twitterSection" data=" ">

ಆರ್​ಸಿಬಿ ನಡೆಯಿಂದ ಕೆರಳಿರುವ ಅಭಿಮಾನಿಗಳು ನಾವು ಇಷ್ಟು ದಿನ ಬೆಂಬಲ ನೀಡಲು ಕಾರಣ ಬೆಂಗಳೂರು ಎಂಬ ಹೆಸರು. ಈಗ ಅದನ್ನೇ ಕೈ ಬಿಟ್ಟಿರುವ ನಿಮ್ಮ ತಂಡಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಗುಡುಗಿದ್ದಾರೆ. ಈವರೆಗೆ ಯಾವ ತಂಡವೂ ನಗರದ ಹೆಸರನ್ನ ಕೈ ಬಿಟ್ಟಿಲ್ಲ. ಆದರೆ, ಆರ್​ಸಿಬಿ ನಡೆ ಬೇಸರ ತರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವರು ಆರ್​ಸಿಬಿ ಟ್ವಿಟರ್​ ಖಾತೆಯನ್ನ ಅನ್​ಫಾಲೋ ಮಾಡುವ ಮೂಲಕ ಆರ್​ಸಿಬಿಗೆ ನಮ್ಮ ಬೆಂಬಲವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Intro:Body:

sports

Conclusion:
Last Updated : Nov 25, 2019, 3:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.