ETV Bharat / sports

ರಾಹುಲ್​, ಗೇಲ್​ ಅವರನ್ನು ವಾಪಸ್ ಕಳುಹಿಸಿ: ಆರ್​ಸಿಬಿ ಅಭಿಮಾನಿಗೆ ವಾಸೀಮ್ ಜಾಫರ್ ಉತ್ತರ ನೋಡಿ - ವಾಸೀಮ್ ಜಾಫರ್ ಲೇಟೆಸ್ಟ್ ನ್ಯೂಸ್

ಆರ್​ಸಿಬಿ ಅಭಿಮಾನಿಯೊಬ್ಬ, ಕೆ.ಎಲ್ ರಾಹುಲ್ ಅವರನ್ನು ಆರ್​ಸಿಬಿ ತಂಡಕ್ಕೆ ಹಿಂದಿರುಗಿಸಿ ಎಂದು ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ವಾಸೀಮ್​ ಜಾಫರ್ ಅವರಿಗೆ ಮನವಿ ಮಾಡಿದ್ದಾನೆ.

RCB fans ask KXIP batting coach Wasim Jaffer to return KL Rahul, Chris Gayle
ಆರ್​ಸಿಬಿ ಅಭಿಮಾನಿಗೆ ವಾಸೀಮ್ ಜಾಫರ್ ಉತ್ತರ ನೋಡಿ
author img

By

Published : Jan 22, 2021, 12:38 PM IST

ಹೈದರಾಬಾದ್: ಕಳೆದ ಕೆಲವು ದಿನಗಳಿಂದ, ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ಐಪಿಎಲ್ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗಾಗಿ ಈಗಾಗಲೆ ಹಲವು ಆಟಗಾರರನ್ನು ರಿಲೀಸ್ ಮಾಡಿರುವ ತಂಡಗಳು, ಸಮರ್ಥ ಆಟಗಾರರನ್ನು ಖರೀದಿಸುವತ್ತ ಗಮನ ಹರಿಸಿವೆ.

ಜಾಲತಾಣದಲ್ಲಿ ಐಪಿಎಲ್​ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಆರ್​ಸಿಬಿ ಅಭಿಮಾನಿಯೊಬ್ಬ, ಕೆ.ಎಲ್ ರಾಹುಲ್ ಅವರನ್ನು ಆರ್​ಸಿಬಿ ತಂಡಕ್ಕೆ ಹಿಂದಿರುಗಿಸಿ ಎಂದು ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ವಾಸೀಮ್​ ಜಾಫರ್ ಅವರಿಗೆ ಮನವಿ ಮಾಡಿದ್ದಾನೆ.

ಆತನ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ವಾಸೀಮ್​ ಜಾಫರ್, ರಾಹುಲ್​ ಅವರನ್ನು ಕಳುಹಿಸಿ ಕೊಟ್ಟರೆ ನಮ್ಮ ಬಳಿ ಏನು ಉಳಿಯುತ್ತದೆ? ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಮತ್ತೋರ್ವ ಅಭಿಮಾನಿ, ಗೇಲ್ ಅವರನ್ನಾದರೂ ಕಳುಹಿಸಿ ಎಂದಿದ್ದಾರೆ. ಈ ಟ್ವೀಟ್​ಗೂ ಪ್ರತಿಕ್ರಿಯಿಸಿರುವ ಜಾಫರ್, ಗೇಲ್ ಗಂಟೆ ಬಾರಿಸುತ್ತಿರುವ ಫೋಟೋ ಟ್ವೀಟ್ ಮಾಡುವ ಮೂಲಕ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹಲವು ಸೀಸನ್​ಗಳ ಕಾಲ ಆರ್​ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಗೇಲ್, ಐಪಿಎಲ್​ನಲ್ಲಿ ಅಬ್ಬರಿಸಿದ್ದರು. ಬೆಂಗಳೂರು ತಂಡದಲ್ಲಿದ್ದಾಗ ಯೂನಿವರ್ಸ್ ಬಾಸ್ ಹಲವು ದಾಖಲೆ ಬರೆದಿದ್ದರು. ಉತ್ತಮ ಪ್ರದರ್ಶನ ತೋರದ ಕಾರಣ ಆರ್​ಸಿಬಿ ರಾಹುಲ್​ ಅವರನ್ನೂ ತಂಡದಿಂದ ಕೈಬಿಟ್ಟಿತ್ತು. ಆದರೆ, ಪಂಜಾಬ್ ತಂಡ ಸೇರಿಕೊಂಡು ಅಬ್ಬರಿಸುತ್ತಿರುವ ರಾಹುಲ್, ಕಳೆದ ಸೀಸನ್​ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.