ETV Bharat / sports

ಹೈದರಾಬಾದ್​​ನಲ್ಲೂ ನಿಖಿಲ್​ ಎಲ್ಲಿದ್ದೀಯಪ್ಪ ಹವಾ...! ತೆಲುಗುನಾಡಲ್ಲೂ ಕುಮಾರಪುತ್ರ ಸೆನ್ಸೇಷನ್​...!! - ನಿಖಿಲ್ ಎಲ್ಲಿದ್ದೀಯಪ್ಪ

ಭಾನುವಾರ ಸಂಜೆ ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ನಡುವೆ ಪಂದ್ಯದಲ್ಲಿ ನಿಖಿಲ್​ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.

ನಿಖಿಲ್​ ಎಲ್ಲೀದ್ದೀಯಪ್ಪ
author img

By

Published : Apr 1, 2019, 5:07 PM IST

ಹೈದರಾಬಾದ್: ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕಾರಣಿಗಳ ಕೆಲ ವಿಚಾರಗಳು ಟ್ರೋಲಿಗರ ಆಹಾರವಾಗುತ್ತಿವೆ. ವಾರಗಳ ಹಿಂದೆ ಸಖತ್ ಸುದ್ದಿ ಮಾಡಿದ್ದ ನಿಖಿಲ್ ಎಲ್ಲಿದ್ದೀಯಪ್ಪ ಎನ್ನುವ ಡೈಲಾಗ್​ನ ಹವಾ ಇನ್ನೂ ತಣ್ಣಗಾಗಿಲ್ಲ.

ಹೈದರಾಬಾದ್​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಸಂಜೆ ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ನಡುವೆ ಪಂದ್ಯದಲ್ಲಿ ನಿಖಿಲ್​ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.

ಲೋಕಸಭಾ ಚುನಾವಣೆಯ ಬಿರುಸಿನ ಪ್ರಚಾರದ ನಡುವೆ ನಿಖಿಲ್ ಹೈದರಾಬಾದ್ ಯಾವಾಗ ಹೋದ್ರು ಅನ್ಕೋಬೇಡಿ. ಅಸಲಿ ಮ್ಯಾಟರ್​ ಏನಂದ್ರೆ ನಿಖಿಲ್ ಎಲ್ಲಿದ್ದೀಯಪ್ಪ ಎನ್ನುವ ಬರಹ ಹೊಂದಿದ್ದ ಭಿತ್ತಿಪತ್ರವನ್ನು ಆರ್​ಸಿಬಿ ಅಭಿಮಾನಿ ಒಬ್ಬ ಹಿಡಿದುಕೊಂಡಿದ್ದರು. ಇದರ ವಿಡಿಯೋ ಒಂದು ವರ್ತಮಾನದಲ್ಲಿ ಯಾವ ಪರಿ ವೈರಲ್ ಆಗುತ್ತೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಎನ್ನಬಹುದು.

Nikhil Kumar
ನಿಖಿಲ್​ ಎಲ್ಲೀದ್ದೀಯಪ್ಪ ಹಾಗೂ ಕೊಹ್ಲಿ ಕಪ್​ ಎಲ್ಲಪ್ಪ ಎನ್ನುವ ಭಿತ್ತಿಪತ್ರ ಹಿಡಿದಿರುವ ಆರ್​​ಸಿಬಿ ಅಭಿಮಾನಿಗಳು

ನಿಖಿಲ್ ಎಲ್ಲಿದ್ದೀಯಪ್ಪ ಭಿತ್ತಿಪತ್ರದ ಜೊತೆಗೆ ಕೊಹ್ಲಿ ಕಪ್​ ಎಲ್ಲಪ್ಪಾ ಎನ್ನುವ ಭಿತ್ತಿಪತ್ರವೂ ಗಮನ ಸೆಳೆಯುತ್ತಿತ್ತು. ಆರ್​ಸಿಬಿ ಅಭಿಮಾನಿಗಳ ಅಭೂತಪೂರ್ವ ಬೆಂಬಲದ ಹೊರತಾಗಿಯೂ ನಿನ್ನೆಯ ಪಂದ್ಯವನ್ನೂ ಹೀನಾಯವಾಗಿ ಕೈಚೆಲ್ಲಿದ್ದು ಈ ಮೂಲಕ ಹ್ಯಾಟ್ರಿಕ್ ಸೋಲಿನ ಮುಖಭಂಗ ಅನುಭವಿಸಿದೆ.

Intro:Body:

sjkjkl

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.