ಅಬುಧಾಬಿ: ಅಂಬಾಟಿ ರಾಯುಡು ಹಾಗೂ ಅನುಭವಿ ಫಾಫ್ ಡು ಪ್ಲೆಸಿಸ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಸಿಎಸ್ಕೆ 13ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ 5 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.
ಮುಂಬೈ ನೀಡಿದ 163 ರನ್ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಇನ್ನು 4 ಎಸೆತಗಳು ಬಾಕಿಯಿರುವಂತೆ ಗೆಲುವಿನ ನಗೆ ಬೀರಿದೆ. ಅಂಬಾಟಿ ರಾಯುಡು 71 ರನ್ ಸಿಡಿಸಿದರೆ, ಫಾಫ್ ಡು ಪ್ಲೆಸಿಸ್ ಔಟಾಗದೆ 58 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
-
Half-centuries from Faf du Plessis and Ambati Rayudu propel #ChennaiSuperKings to a 5 wicket win in the season opener of #Dream11IPL
— IndianPremierLeague (@IPL) September 19, 2020 " class="align-text-top noRightClick twitterSection" data="
Scorecard - https://t.co/HAaPi3BpDG #MIvCSK pic.twitter.com/6ebpiThrja
">Half-centuries from Faf du Plessis and Ambati Rayudu propel #ChennaiSuperKings to a 5 wicket win in the season opener of #Dream11IPL
— IndianPremierLeague (@IPL) September 19, 2020
Scorecard - https://t.co/HAaPi3BpDG #MIvCSK pic.twitter.com/6ebpiThrjaHalf-centuries from Faf du Plessis and Ambati Rayudu propel #ChennaiSuperKings to a 5 wicket win in the season opener of #Dream11IPL
— IndianPremierLeague (@IPL) September 19, 2020
Scorecard - https://t.co/HAaPi3BpDG #MIvCSK pic.twitter.com/6ebpiThrja
ಚೇಸಿಂಗ್ ಆರಂಭಿಸುತ್ತಿದ್ದಂತಯೆ ಸಿಎಸ್ಕೆ ತನ್ನ ಆರಂಭಿಕರಾಗಿ ಕಣಕ್ಕಿಳಿದಿದ್ದ ಮುರುಳಿ ವಿಜಯ್(1) ಹಾಗೂ ಶೇನ್ ವಾಟ್ಸನ್ (4) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಆದರೆ ಫಾಫ್ ಡು ಪ್ಲೆಸಿಸ್ ಮತ್ತು ಅಂಬಾಟಿ ರಾಯಡು ಮೂರನೇ ವಿಕೆಟ್ ಬರೋಬ್ಬರಿ 116 ರನ್ಗಳ ಜೊತೆಯಾಟ ನಡೆಸಿ ಸೋಲಿನ ಸುಳಿಯಲ್ಲಿದ್ದ ತಂಡವನ್ನು ಗೆಲುವನತ್ತ ಕೊಂಡೊಯ್ದರು.
48 ಎಸೆತಗಳನ್ನೆದುರಿಸಿದ ರಾಯುಡು 3 ಸಿಕ್ಸರ್ಸ್ ಹಾಗೂ 6 ಬೌಂಡರಿಗಳ ಸಹಿತ 71 ರನ್ ಸಿಡಿಸಿ ಔಟಾದರು. ನಂತರ ಬಂದ ಜಡೇಜಾ 5 ಎಸೆತಗಳಲ್ಲಿ 10, ಸ್ಯಾಮ್ ಕರ್ರನ್ 6 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 18 ರನ್ ಸಿಡಿಸಿ ಗೆಲುವಿನ ಸನಿಹ ತಂದು ಔಟಾದರು.
-
Bahubali Returns! 🦁💛 #WhistleFromHome #WhistlePodu #Yellove #MIvCSK pic.twitter.com/eoIUK0wFK9
— Chennai Super Kings (@ChennaiIPL) September 19, 2020 " class="align-text-top noRightClick twitterSection" data="
">Bahubali Returns! 🦁💛 #WhistleFromHome #WhistlePodu #Yellove #MIvCSK pic.twitter.com/eoIUK0wFK9
— Chennai Super Kings (@ChennaiIPL) September 19, 2020Bahubali Returns! 🦁💛 #WhistleFromHome #WhistlePodu #Yellove #MIvCSK pic.twitter.com/eoIUK0wFK9
— Chennai Super Kings (@ChennaiIPL) September 19, 2020
ಕೊನೆಯವರೆಗೂ ತಾಳ್ಮೆಯಿಂದ ಆಡಿದ ಫಾಫ್ ಡು ಪ್ಲೆಸಿಸ್ 44 ಎಸೆತಗಳಲ್ಲಿ 6 ಬೌಂಡರಿ ಸಹಿತ 58 ರನ್ಗಳಿಸಿ ತಂಡವನ್ನು ಗೆಲುವಿನ ದಡ ದಾಟಿಸಿದರು.
ಮುಂಬೈ ಇಂಡಿಯನ್ಸ್ ಪರ ಬೌಲ್ಟ್ 23ಕ್ಕೆ 1, ಪ್ಯಾಟಿನ್ಸನ್ 27ಕ್ಕೆ 1, ಬುಮ್ರಾ 43 ಕ್ಕೆ1, ಕೃನಾಲ್ ಪಾಂಡ್ಯ 37ಕ್ಕೆ1 ಹಾಗೂ ರಾಹುಲ್ ಚಹಾರ್ 36ಕ್ಕೆ 1 ವಿಕೆಟ್ ಪಡೆದರು.
ಇದಕ್ಕು ಮುನ್ನ ಬ್ಯಾಟಿಂಗ್ ನಡೆಸಿದ್ದ ಮುಂಬೈ ಇಂಡಿಯನ್ಸ್ ಡಿಕಾಕ್ 33ರನ್, ಸೌರಭ್ ತಿವಾರಿ 42 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ಗಳಿಸಿತ್ತು.
ಸಿಎಸ್ಕೆ ಪರ ಲುಂಗಿ ಎಂಗಿಡಿ 38ಕ್ಕೆ 3, ದೀಪಕ್ ಚಹಾರ್ 32ಕ್ಕೆ 2, ರವೀಂದ್ರ ಜಡೇಜಾ 42ಕ್ಕೆ 2 ಸ್ಯಾಮ್ ಕರನ್ ಹಾಗೂ ಚಾವ್ಲಾ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ದರು.
ಬೌಲಿಂಗ್ನಲ್ಲಿ 1 ವಿಕೆಟ್ ಹಾಗೂ ಬ್ಯಾಟಿಂಗ್ನಲ್ಲಿ 6 ಎಸೆತಗಳಲ್ಲಿ 18 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಯಾಮ್ ಕರ್ರನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.