ಚೆನ್ನೈ: ಕೆಫೆ ಕಾಫಿ ಡೇ ಸಂಸ್ಥಾಪಕ ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ಮರುಕ ವ್ಯಕ್ತಪಡಿಸಿರುವ ಭಾರತ ತಂಡದ ಕ್ರಿಕೆಟಿಗ ಆರ್ ಅಶ್ವಿನ್, ತಮ್ಮ ಟ್ವಿಟರ್ನಲ್ಲಿ ಹೃದಯ ಸ್ಪರ್ಶಿ ಸಂದೇಶ ರವಾನಿಸಿದ್ದಾರೆ.
ಎಸ್ ಎಂ ಕೃಷ್ಣ ಅವರ ಅಳಿಯರಾಗಿರುವ 58 ವರ್ಷದ ವಿ ಜಿ ಸಿದ್ಧಾರ್ಥ್ ಸೋಮವಾರ ನೇತ್ರಾವತಿ ನದಿ ಬಳಿ ಕಾಣೆಯಾಗಿದ್ದರು. ಅವರ ಶವ 35 ಗಂಟೆಗಳ ನಂತರ ನೇತ್ರಾವತಿ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. ಈ ಘಟನೆ ರಾಜ್ಯದಲ್ಲಷ್ಟೇ ಅಲ್ಲದೆ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ರಾಜಕೀಯ ನಾಯಕರು, ಉದ್ಯಮಿಗಳು ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿದ್ದರು.
-
My first memories of going out with friends and having a cup of coffee happened only with the inception of cafe coffee day. Sad news #RIPSiddhartha #cafecofeeday
— Ashwin Ravichandran (@ashwinravi99) July 31, 2019 " class="align-text-top noRightClick twitterSection" data="
">My first memories of going out with friends and having a cup of coffee happened only with the inception of cafe coffee day. Sad news #RIPSiddhartha #cafecofeeday
— Ashwin Ravichandran (@ashwinravi99) July 31, 2019My first memories of going out with friends and having a cup of coffee happened only with the inception of cafe coffee day. Sad news #RIPSiddhartha #cafecofeeday
— Ashwin Ravichandran (@ashwinravi99) July 31, 2019
ಭಾರತ ತಂಡದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತಮ್ಮ ಟ್ವಿಟರ್ನಲ್ಲಿ" ನನಗೆ ಸ್ನೇಹಿತರೊಂದಿಗೆ ಹೊರ ಹೋದರೆ ಮೊದಲು ನೆನಪಿಗೆ ಬರುವ ಸ್ಥಳ ಕಾಫಿ ಡೇ, ಅಲ್ಲಿ ಒಂದು ಕಾಫಿ ಕುಡಿದ ನಂತರ ನಮ್ಮ ದಿನ ಆರಂಭವಾಗುತ್ತಿತ್ತು, ಇದೊಂದು ದುಃಖದ ಸುದ್ದಿ" ಎಂದು ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
ಕೆಫೆ ಕಾಫಿ ಡೇ ಎಂಬ ಹೆಸರಿನ ಮೂಲಕ ಇಡೀ ದೇಶದಲ್ಲಿ ಕರ್ನಾಟಕದ ಹೆಸರನ್ನು ಖ್ಯಾತಿಗೊಳಿಸಿದ್ದ ಸಿದ್ಧಾರ್ಥ್ ಸಾವಿರಾರು ಕನ್ನಡಿಗರಿಗೆ ಉದ್ಯೋಗ ನೀಡಿದ್ದರು. ಇವರ ದುರಂತ ಅಂತ್ಯ ನಿಜಕ್ಕೂ ದುಃಖದ ಸಂಗತಿಯಾಗಿದೆ.