ಮುಂಬೈ: ಭಾರತ ತಂಡದ ಅನುಭವಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ಗೆ ಅವರ ಸಾಮರ್ಥ್ಯ ಸಾಬೀತುಪಡಿಸಲು ಟಿ-20 ತಂಡದಲ್ಲಿ ಮತ್ತೊಂದು ಅವಕಾಶ ನೀಡಬೇಕೆಂದು ಮಾಜಿ ಬ್ಯಾಟ್ಸ್ಮನ್ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 2 ವರ್ಷಗಳಿಂದ ಆಯ್ಕೆಗಾರರು ಆಶ್ವಿನ್ಗಿಂತಲೂ ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ಗೆ ಹೆಚ್ಚಿನ ಅವಕಾಶ ನೀಡುತ್ತಿದ್ದಾರೆ. ಅಶ್ವಿನ್ರನ್ನು ಕೇವಲ ಟೆಸ್ಟ್ಗೆ ಮಾತ್ರ ಪರಿಗಣಿಸಲಾಗುತ್ತಿದೆ. ಆದರೆ ಡೆಲ್ಲಿ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಮೊಹಮ್ಮದ್ ಕೈಫ್ 2021ರಲ್ಲಿ ಅಶ್ವಿನ್ರ ಬೌಲಿಂಗ್ಅನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹಾಗಾಗಿ ಭಾರತ ತಂಡದಲ್ಲಿ ಅವರ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ನೀಡಬೇಕೆಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ.
-
Virat, Rohit, Pollard, Gayle, Warner, QDK, Karun, Buttler, Smith, Paddikal, Pooran. Read and re-read @ashwinravi99’s list of big scalps from IPL 13, mostly in power plays. Feel Ash can still be a valuable asset for India in T20Is.
— Mohammad Kaif (@MohammadKaif) November 18, 2020 " class="align-text-top noRightClick twitterSection" data="
">Virat, Rohit, Pollard, Gayle, Warner, QDK, Karun, Buttler, Smith, Paddikal, Pooran. Read and re-read @ashwinravi99’s list of big scalps from IPL 13, mostly in power plays. Feel Ash can still be a valuable asset for India in T20Is.
— Mohammad Kaif (@MohammadKaif) November 18, 2020Virat, Rohit, Pollard, Gayle, Warner, QDK, Karun, Buttler, Smith, Paddikal, Pooran. Read and re-read @ashwinravi99’s list of big scalps from IPL 13, mostly in power plays. Feel Ash can still be a valuable asset for India in T20Is.
— Mohammad Kaif (@MohammadKaif) November 18, 2020
ವಿರಾಟ್ ಕೊಹ್ಲಿ, ಪೊಲಾರ್ಡ್, ಕ್ರಿಸ್ ಗೇಲ್, ವಾರ್ನರ್, ಡಿಕಾಕ್, ಕರುಣ್, ಬಟ್ಲರ್, ಸ್ಮಿತ್, ಪಡಿಕ್ಕಲ್, ಪೂರನ್ 13ನೇ ಐಪಿಎಲ್ನಲ್ಲಿ ರವಿಚಂದ್ರನ್ ಅಶ್ವಿನ್ ಪಡೆದಿರುವ ದೊಡ್ಡ ವಿಕೆಟ್ಗಳು. ಅದರಲ್ಲೂ ಪವರ್ ಪ್ಲೇನಲ್ಲಿ ಹೆಚ್ಚು. ಅಶ್ವಿನ್ ಭಾರತ ಟಿ-20 ತಂಡದ ಮೌಲ್ಯಯುತ ಆಸ್ತಿ ಎಂದು ನಾನು ಭಾವಿಸುತ್ತೇನೆ ಎಂದು ಕೈಫ್ ಟ್ವೀಟ್ ಮಾಡಿದ್ದಾರೆ.
ಪೀಲ್ಡಿಂಗ್ನಲ್ಲಿ ನಿಬಂಧನೆಗಳಿರುವ ಸಂದರ್ಭದಲ್ಲಿ ಅಶ್ವಿನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಬಿಸಿಸಿಐ ಅವರಿಗೆ ಮತ್ತೊಂದು ಅವಕಾಶ ನೀಡಬೇಕಿದೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.
2020ರ ಐಪಿಎಲ್ನಲ್ಲಿ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ಪರ 15 ಪಂದ್ಯಗಳಿಂದ 13 ವಿಕೆಟ್ ಪಡೆದಿದ್ದರು. ಅಶ್ವಿನ್ ಭಾರತ ಪರ ಟಿ-20 ಕ್ರಿಕೆಟ್ನಲ್ಲಿ 46 ಪಂದ್ಯಗಳಿಂದ 52 ವಿಕೆಟ್ ಪಡೆದಿದ್ದಾರೆ.