ಮುಂಬೈ: ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವರ ಗುತ್ತಿಗೆ ಸೇವಾ ಅವಧಿಯನ್ನ ಬಿಸಿಸಿಐ 45 ದಿನಗಲ ಕಾಲ ವಿಸ್ತರಣೆ ಮಾಡಿದೆ.
ಈ ಹಿಂದಿನ ಒಪ್ಪಂದದ ಪ್ರಕಾರ ವಿಶ್ವಕಪ್ ಮುಗಿದ ನಂತರ ರವಿಶಾಸ್ತ್ರಿ ಅವರ ಗುತ್ತಿಗೆ ಅವಧಿ ಮುಕ್ತಾಯವಾಗುತ್ತಿತ್ತು. ಆದ್ರೆ, ಒಪ್ಪಂದದ ಅವಧಿಯನ್ನ ಬಿಸಿಸಿಐ 45 ದಿನಗಳ ಕಾಲ ವಿಸ್ತರಣೆ ಮಾಡಿದೆ.
ರವಿಶಾಸ್ತ್ರಿ ಜೊತೆಯಲ್ಲೇ ತರಬೇತುದಾರರ ತಂಡದ ಅವಧಿಯನ್ನ ಕೂಡ ಬಿಸಿಸಿಐ 45 ದಿನಗಳ ಕಾಲ ವಿಸ್ತರಣೆ ಮಾಡಿದೆ. ಅನಿಲ್ ಕುಂಬ್ಳೆ ನಂತರ 2017ರಲ್ಲಿ ಭಾರತ ತಂಡದ ತರಬೇತುದಾರರಾಗಿ ರವಿಶಾಸ್ತ್ರಿಯವರನ್ನ ಬಿಸಿಸಿಐ ಆಯ್ಕೆ ಮಾಡಿತ್ತು.
ವಿಶ್ವಕಪ್ ಟೂರ್ನಿ ನಂತರ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಸರಣಿ ಮುಗಿದ ಬಳಿಕ ಮುಖ್ಯ ತರಬೇತುದಾರರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗುವ ಸಾಧ್ಯತೆ ಇದೆ.