ETV Bharat / sports

ಇನ್ಮುಂದೆ ರಣಜಿ ಕ್ರಿಕೆಟ್​ನಲ್ಲೂ ಡಿಆರ್​ಎಸ್: ಬಿಸಿಸಿಐನಿಂದ ಗ್ರೀನ್​​ ಸಿಗ್ನಲ್​​ - ಕರ್ನಾಟಕ- ಬೆಂಗಾಲ್​

ಕರ್ನಾಟಕ-ಬೆಂಗಾಲ್​, ಗುಜರಾತ್-ಸೌರಾಷ್ಟ್ರಗಳ ನಡುವೆ ಶನಿವಾರದಿಂದ ನಡೆಯಲಿರುವ ರಣಜಿ ಸೆಮಿಫೈನಲ್​ ಪಂದ್ಯಗಳಿಂದಲೇ ಡಿಆರ್​ಎಸ್​ ನಿಯಮ ಜಾರಿಗೆ ಬರಲಿದೆ.​

DRS in  Ranji Trophy
ರಣಜಿ ಕ್ರಿಕೆಟ್​ನಲ್ಲೂ ಡಿಆರ್​ಎಸ್
author img

By

Published : Feb 25, 2020, 7:05 PM IST

ಮುಂಬೈ​: ರಣಜಿ ಕ್ರಿಕೆಟ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂಪೈರ್​ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್​ಎಸ್​) ಜಾರಿಗೆ ತರಲು ಬಿಸಿಸಿಐ ಗ್ರೀನ್​ ಸಿಗ್ನಲ್​ ನೀಡಿದೆ. ಆದರೆ ಅಲ್ಟ್ರಾ ಎಡ್ಜ್​ ಹಾಗೂ ಬಾಲ್ ಟ್ರ್ಯಾಕಿಂಗ್​ ಸೌಲಭ್ಯ ಮಾತ್ರ ಇರುವುದಿಲ್ಲ ಎಂದು ತಿಳಿಸಿದೆ.

ಕರ್ನಾಟಕ- ಬೆಂಗಾಲ್​, ಗುಜರಾತ್-ಸೌರಾಷ್ಟ್ರಗಳ ನಡುವೆ ಶನಿವಾರದಿಂದ ನಡೆಯಲಿರುವ ರಣಜಿ ಸೆಮಿಫೈನಲ್​ ಪಂದ್ಯಗಳಿಂದಲೇ ಡಿಆರ್​ಎಸ್​ ನಿಯಮ ಜಾರಿಗೆ ಬರಲಿದೆ.​

​ಒಂದೇ ಇನ್ನಿಂಗ್ಸ್​ನಲ್ಲಿ ಎರಡು ತಂಡಗಳಿಗೂ ತಲಾ ಎರಡು ರಿವ್ಯೂ​ ತೆಗೆದುಕೊಳ್ಳುವ ಅವಕಾಶವನ್ನು ಅಂತಾರಾಷ್ಟ್ರೀಯ ಟೆಸ್ಟ್​ನಲ್ಲಿ ನೀಡಲಾಗಿದೆ. ಆದರೆ ರಣಜಿಯಲ್ಲಿ 4 ರಿವ್ಯೂ​ ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ. ರಿವ್ಯೂ ಯಶಸ್ವಿಯಾದರೆ ಮತ್ತೆ ಬಳಸಿಕೊಳ್ಳಬಹುದಾಗಿದೆ.

DRS in  Ranji Trophy
ಎಂ.ಎಸ್.ಧೋನಿ

ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇರುವ ಬಾಲ್​ ಟ್ರ್ಯಾಕಿಂಗ್​, ಹಾಟ್​ಸ್ಪಾಟ್​, ನೋ ಸ್ನಿಕೋ ಸೌಲಭ್ಯಗಳಿರುವುದಿಲ್ಲ. ಹಾಗಾಗಿ ಮೈದಾನದ ಅಂಪೈರ್​ ತೀರ್ಪನ್ನು ಮೂರನೇ ಅಂಪೈರ್​ ಟಿವಿ ರಿಪ್ಲೇ ನೋಡಿ ತೀರ್ಪು ನೀಡಲಿದ್ದಾರೆ.

ರಣಜಿ, ವಿಜಯ್​ ಹಜಾರೆ, ಸಯ್ಯದ್​ ಮುಷ್ತಾಕ್ ಅಲಿ ಸೇರಿದಂತೆ ಪ್ರಮುಖ ಟೂರ್ನಿಗಳ ಸೆಮಿಫೈನಲ್​ ಹಾಗೂ ಫೈನಲ್​ ಪಂದ್ಯಗಳಿಗೆ ಡಿಆರ್​ಎಸ್​ ನಿಯಮ ಜಾರಿ ಬರಲಿದೆ.

ಕಳೆದ ರಣಜಿ ಸೆಮಿಫೈನಲ್​ನಲ್ಲಿ ಸೌರಾಷ್ಟ್ರ-ಕರ್ನಾಟಕ ಪಂದ್ಯದಲ್ಲಿ ಪೂಜಾರ ಮೂರು ಬಾರಿ ಕ್ಯಾಚ್​ ನೀಡಿದರೂ ಅಂಪೈರ್ ಔಟ್​ ನೀಡದಿದ್ದಕ್ಕೆ ಮೈದಾನದಿಂದ ಹೊರ ನಡೆದಿರಲಿಲ್ಲ. ಈ ಪಂದ್ಯದ ನಂತರ ದೇಶಿ ಟೂರ್ನಿಗಳಿಗೂ ಡಿಆರ್​ಎಸ್​ ಬೇಕು ಎಂಬ ಕೂಗು ಕೇಳಿ ಬಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.