ಕೋಲ್ಕತ್ತಾ: ಎಂಟು ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ ಈ ಸಲದ ರಣಜಿ ಟೂರ್ನಿಯ ಸೆಮಿಫೈನಲ್ನಲ್ಲಿ ಸೋಲು ಕಾಣುವ ಮೂಲಕ ಅಭಿಯಾನ ಅಂತ್ಯಗೊಳಿಸಿದ್ದು, ಬಂಗಾಳ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಬರೋಬ್ಬರಿ 174ರನ್ಗಳ ಸೋಲು ಕಂಡಿದೆ.
ಅನುಭವಿ ಬ್ಯಾಟ್ಸ್ಮನ್ ಮನೀಶ್ ಪಾಂಡೆ, ಕೆಎಲ್ ರಾಹುಲ್ರಂತಹ ದಿಗ್ಗಜ ಬ್ಯಾಟ್ಸ್ಮನ್ಗಳ ನಡುವೆ ಕೂಡ ಸಂಘಟಿತ ಪ್ರದರ್ಶನ ನೀಡಿರುವ ಬಂಗಾಳ್ ತಂಡ ಗೆಲುವು ಪಡೆದುಕೊಂಡು 13 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದೆ. ಕಳೆದ 30 ವರ್ಷಗಳಿಂದ ರಣಜಿ ಚಾಂಪಿಯನ್ ಟ್ರೋಪಿ ಗೆಲ್ಲಲ್ಲು ವಿಫಲಗೊಂಡಿರುವ ಬಂಗಾಳ್ ತಂಡ ಈ ಸಲ ಮಾಸ್ಟರ್ ಪ್ಲಾನ್ ಹಾಕಿಕೊಂಡು ಕಣಕ್ಕಿಳಿದಿದ್ದು, ಗುಜರಾತ್ ವಿರುದ್ಧ ಫೈನಲ್ನಲ್ಲಿ ಸೆಣಸಾಟ ನಡೆಸಲಿದೆ.
-
That winning feeling! 👏👏
— BCCI Domestic (@BCCIdomestic) March 3, 2020 " class="align-text-top noRightClick twitterSection" data="
Bengal beat Karnataka by 174 runs to seal a place in the @paytm #RanjiTrophy 2019-20 final. 👌👌
Scorecard 👉 https://t.co/8vuWwOBGXI#BENvKAR @CabCricket pic.twitter.com/etHvg7IHtn
">That winning feeling! 👏👏
— BCCI Domestic (@BCCIdomestic) March 3, 2020
Bengal beat Karnataka by 174 runs to seal a place in the @paytm #RanjiTrophy 2019-20 final. 👌👌
Scorecard 👉 https://t.co/8vuWwOBGXI#BENvKAR @CabCricket pic.twitter.com/etHvg7IHtnThat winning feeling! 👏👏
— BCCI Domestic (@BCCIdomestic) March 3, 2020
Bengal beat Karnataka by 174 runs to seal a place in the @paytm #RanjiTrophy 2019-20 final. 👌👌
Scorecard 👉 https://t.co/8vuWwOBGXI#BENvKAR @CabCricket pic.twitter.com/etHvg7IHtn
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಬಂಗಾಳ್ ತಂಡ ಮಜುಂದಾರ್ 149ರನ್ಗಳ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 312ರನ್ಗಳಿಕೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಕರ್ನಾಟಕ ತಂಡ ಕೇವಲ 122ರನ್ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಕರ್ನಾಟಕ ತಂಡ ಎದುರಾಳಿ ತಂಡವನ್ನ 161ರನ್ಗಳಿಗೆ ಆಲೌಟ್ಮಾಡುವ ಮೂಲಕ 352ರನ್ಗಳ ಗೆಲುವಿನ ಟಾರ್ಗೆಟ್ ಪಡೆದುಕೊಂಡಿತು.
ಎರಡನೇ ಇನ್ನಿಂಗ್ಸ್ನಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಕರ್ನಾಟಕ ತಂಡ ಕೇವಲ 177ರನ್ಗಳಿಗೆ ಆಲೌಟ್ ಆಗಿ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ತಂಡದಲ್ಲಿ ಮನೀಷ್ ಪಾಂಡೆ, ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ರಂತಹ ಪ್ರತಿಭಾವಂತ ಪ್ಲೇಯರ್ಸ್ಗಳಿದ್ದರೂ ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ. ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಚಾಂಪಿಯನ್ ಪ್ರಶಸ್ತಿ ಗೆದ್ದಿದ್ದ ಕರ್ನಾಟಕ ಇದೀಗ ಸೋಲು ಕಂಡಿದೆ.
ಸಂಕ್ಷಿಪ್ತ ಸ್ಕೋರ್ ಇಂತಿದೆ:
ಬಂಗಾಳ ಮೊದಲ ಇನ್ನಿಂಗ್ಸ್ 312
ಕರ್ನಾಟಕ ಮೊದಲ ಇನ್ನಿಂಗ್ಸ್ 122
ಬಂಗಾಳ ಎರಡನೇ ಇನ್ನಿಂಗ್ಸ್ 161
ಕರ್ನಾಟಕ ಎರಡನೇ ಇನ್ನಿಂಗ್ಸ್ 177