ರಾಜ್ಕೋಟ್: ಮೊದಲ ಇನ್ನಿಂಗ್ಸ್ನಲ್ಲಿ 52 ರನ್ಗಳ ಹಿನ್ನಡೆಯನುಭಿವಿಸಿದರು ಎರಡನೇ ಇನ್ನಿಂಗ್ಸ್ನಲ್ಲಿ ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ಗುಜರಾತ್ ತಂಡ ಸೌರಾಷ್ಟ್ರ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೋಯ್ದಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಸೌರಾಷ್ಟ್ರ ತಂಡ ಶೆಲ್ಡಾನ್ ಜಾಕ್ಸನ್(103) ಅವರ ಶತಕದ ನೆರವಿನಿಂದ 304 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಗುಜರಾತ್ ತಂಡ 252 ರನ್ಗಳಿಗೆ ಆಲೌಟ್ ಆಗುವ ಮೂಲಕ 52 ರನ್ಗಳ ಹಿನ್ನಡೆ ಅನುಭವಿಸಿತ್ತು.
ಆದರೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಗುಜರಾತ್ ತಂಡಕ್ಕೆ ಚಿಂತನ್ ಗಜ ಭಾರಿ ಆಘಾತ ನೀಡಿದ್ದಾರೆ. ಕೇವಲ 15 ರನ್ 5 ವಿಕೆಟ್ ಪಡೆದ ಗಜ ಗುಜರಾತ್ ತಂಡಕ್ಕೆ ಫೈನಲ್ ಕನಸನ್ನು ಮತ್ತೆ ಚಿಗುರುವಂತೆ ಮಾಡಿದ್ದಾರೆ.
-
WATCH: 7-3-15-5! 👏👏
— BCCI Domestic (@BCCIdomestic) March 2, 2020 " class="align-text-top noRightClick twitterSection" data="
Chintan Gaja was the star with ball for Gujarat on Day 3 of the @paytm #RanjiTrophy semifinal against Saurashtra. 👌
Here's his 5⃣-wicket haul 👇https://t.co/SPfB85FaEy#GUJvSAU pic.twitter.com/1Ji2Fjy1SK
">WATCH: 7-3-15-5! 👏👏
— BCCI Domestic (@BCCIdomestic) March 2, 2020
Chintan Gaja was the star with ball for Gujarat on Day 3 of the @paytm #RanjiTrophy semifinal against Saurashtra. 👌
Here's his 5⃣-wicket haul 👇https://t.co/SPfB85FaEy#GUJvSAU pic.twitter.com/1Ji2Fjy1SKWATCH: 7-3-15-5! 👏👏
— BCCI Domestic (@BCCIdomestic) March 2, 2020
Chintan Gaja was the star with ball for Gujarat on Day 3 of the @paytm #RanjiTrophy semifinal against Saurashtra. 👌
Here's his 5⃣-wicket haul 👇https://t.co/SPfB85FaEy#GUJvSAU pic.twitter.com/1Ji2Fjy1SK
52 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಲು ಬಂದ ಆರಂಭಿಕರಾದ ಕಿಶನ್ ಕುಮಾರ್ಶ್ರ(0) ಹಾರ್ವಿಕ್ ದೇಸಾಯಿ(0)ಅವರನ್ನು ಖಾತೆ ತೆರೆಯುವ ಮುನ್ನವೇ ಚಿಂತನ್ ಪೆವಿಲಿಯನ್ಗಟ್ಟಿದರು. ನಂತರ ಬಂದ ಅವಿ ಬರೋತ್ 1 ರನ್ಗಳಿಸಿ ಅದೇ ಓವರ್ನ ಕೊನೆಯ ಎಸೆತದಲ್ಲಿ ಔಟಾದರು.
4 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದ ಸೌರಾಷ್ಟ್ರಕ್ಕೆ ಚೇತರಿಸಿಕೊಳ್ಳಲು ಅವಕಾಶ ನೀಡ ಚಿಂತನ್ ಮತ್ತೆ 15 ರನ್ಗಳಾಗುವಷ್ಟರಲ್ಲಿ ವಿಶ್ವರಾಜ್ ಜಡೇಜ(6) ಅವರನ್ನು ಹಾಗೂ ನಂತರದ ಎಸೆತದಲ್ಲಿ ಮೊದಲ ಇನ್ನಿಂಗ್ಸ್ನ ಶತಕವೀರ ಶೆಲ್ಡಾನ್ ಜಾಕ್ಸನ್(0) ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗಟ್ಟಿದರು.
ಇನ್ನು ಕೇವಲ 15ರನ್ಗೆ 5 ವಿಕೆಟ್ ಕಳೆದುಕೊಂಡು ಅಘಾತಕ್ಕೊಳಗಾಗಿದ್ದ ಸೌರಾಷ್ಟ್ರ ತಂಡಕ್ಕೆ ಚೇತನ್ ಸಕಾರಿಯಾ(32) ಹಾಗೂ ಅರ್ಪಿತ್ ವಾಸುದೇವ(23) 6ನೇ ವಿಕೆಟ್ 51 ರನ್ ಸೇರಿಸುವ ಮೂಲಕ ಚೇತರಿಕೆ ನೀಡಿದ್ದಾರೆ. ಇನ್ನು ಎರಡು ದಿನಗಳ ಆಟ ಬಾಕಿಯಿದ್ದು ಯಾವ ತಂಡ ಫೈನಲ್ ಪ್ರವೇಶಿಸಲಿದೆ ಎಂದು ಕಾದುನೋಡಬೇಕಿದೆ.