ಕೋಲ್ಕತ್ತಾ: ಬಂಗಾಳದ ಯುವ ಬೌಲರ್ ಇಶಾನ್ ಪೊರೆಲ್ ದಾಳಿಗೆ ಸಿಲುಕಿ ಕೇವಲ 122 ರನ್ಗಳಿಗೆ ಸರ್ವಪತನ ಕಂಡ ಕರ್ನಾಟಕ ತಂಡದ 8ನೇ ರಣಜಿ ಟ್ರೋಫಿ ಎತ್ತಿ ಹಿಡಿಯುವ ಕನಸು ನುಚ್ಚುನೂರಾಗಿದೆ.
ಕೋಲ್ಕತ್ತಾ ಈಡನ್ ಗಾರ್ಡನ್ನಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 122 ರನ್ಗಳಿಗೆ ಆಲೌಟ್ ಆಗುವ ಮೂಲಕ 190 ರನ್ಗಳ ಭಾರಿ ಹಿನ್ನಡೆ ಅನುಭವಿಸಿದೆ.
ಭಾರತ ತಂಡದ ಪರ ಅದ್ಭುತ ಪ್ರದರ್ಶನ ತೋರಿದ್ದ ರಾಹುಲ್, ಕರ್ನಾಟಕ ತಂಡ ಸೇರಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಯುವ ವೇಗಿ ಇಶಾನ್ ಪೊರೆಲ್ 5 ವಿಕೆಟ್ ಹಾಗೂ ಆಕಾಶ್ ದೀಪ್ 3 ಹಾಗೂ ಮುಖೇಶ್ ಕುಮಾರ್ 2 ವಿಕೆಟ್ ಪಡೆದು ಕರ್ನಾಟಕ ತಂಡವನ್ನು 122 ರನ್ಗಳಿಗೆ ಕಟ್ಟಿಹಾಕಿದ್ರು.
-
A five-wicket haul for Ishan Porel.👌👌
— BCCI Domestic (@BCCIdomestic) March 1, 2020 " class="align-text-top noRightClick twitterSection" data="
Bengal bowl out Karnataka for 122 in the @paytm #RanjiTrophy semifinal.
Follow the #BENvKAR game live 👇👇https://t.co/8vuWwOBGXI pic.twitter.com/hSB1hqnerm
">A five-wicket haul for Ishan Porel.👌👌
— BCCI Domestic (@BCCIdomestic) March 1, 2020
Bengal bowl out Karnataka for 122 in the @paytm #RanjiTrophy semifinal.
Follow the #BENvKAR game live 👇👇https://t.co/8vuWwOBGXI pic.twitter.com/hSB1hqnermA five-wicket haul for Ishan Porel.👌👌
— BCCI Domestic (@BCCIdomestic) March 1, 2020
Bengal bowl out Karnataka for 122 in the @paytm #RanjiTrophy semifinal.
Follow the #BENvKAR game live 👇👇https://t.co/8vuWwOBGXI pic.twitter.com/hSB1hqnerm
31 ರನ್ ಗಳಿಸಿದ ಕೆ ಗೌತಮ್ ತಂಡದ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು. ಅನುಭವಿಗಳಾದ ರಾಹುಲ್ (26), ಮನೀಷ್ ಪಾಂಡೆ(12) ಕರುಣ್ ನಾಯರ್(3), ಸಮರ್ಥ್(0), ಸಿದ್ಧಾರ್ಥ್ (14), ಯುವ ಬ್ಯಾಟ್ಸ್ಮನ್ಗಳಾದ ಪಡಿಕ್ಕಲ್ (4) ಶರತ್(1) ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ವಿಕೆಟ್ ಒಪ್ಪಿಸಿದರು.
ಗೌತಮ್(31) ಹಾಗೂ ಮಿಥುನ್(24) ಸ್ವಲ್ಪ ಸಮಯ ಅಬ್ಬರಿಸಿದ್ದರಿಂದ ಕರ್ನಾಟಕ ತಂಡ 100ರ ಗಡಿದಾಟಲು ಸಾಧ್ಯವಾಯಿತು.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ 21 ವರ್ಷದ ಇಶಾನ್ ಪೊರೆಲ್ 39 ರನ್ ನೀಡಿ 5 ವಿಕೆಟ್ ಪಡೆದು ಕರ್ನಾಟಕ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದರು.
190 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಶ್ಚಿಮ ಬಂಗಾಳ ತಂಡ ಈಗಾಗಲೇ 4 ವಿಕೆಟ್ ಕಳೆದುಕೊಂಡು 72 ರನ್ ಗಳಿಸಿ ಒಟ್ಟಾರೆ 262 ರನ್ಗಳ ಮುನ್ನಡೆ ಸಾಧಿಸಿದೆ. ಸುದೀಪ್ ಚಟರ್ಜಿ 40 ರನ್ ಹಾಗೂ ಮೊದಲ ಇನ್ನಿಂಗ್ಸ್ ಶತಕ ವೀರ ಅನುಸ್ತೂಪ್ ಮಜುಮ್ದಾರ್ 1 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಇನ್ನು ಮೂರು ದಿನಗಳ ಆಟ ಬಾಕಿಯಿದ್ದು ಮೂರನೇ ದಿನ ಬಂಗಾಳವನ್ನು ಆದಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದರೆ ಕರ್ನಾಟಕ ತಂಡಕ್ಕೆ ಗೆಲ್ಲುವ ಅವಕಾಶವಿದೆ.