ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 7ವಿಕೆಟ್ಗಳ ಜಯ ಸಾಧಿಸುವ ಮೂಲಕ ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಂಡಿದೆ.
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ 50ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗಿದ್ದವು. ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 185 ರನ್ಗಳಿಕೆ ಮಾಡಿತು.
T20 ಕ್ರಿಕೆಟ್ನಲ್ಲಿ ಸಾವಿರ ಸಿಕ್ಸರ್: ಚುಟುಕು ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ಯೂನಿವರ್ಸಲ್ ಬಾಸ್!
ಆರಂಭಿಕ ಆಘಾತದ ನಡುವೆ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದ ಗೇಲ್ 63 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್ ನೆರವಿನಿಂದ 99ರನ್ಗಳಿಕೆ ಮಾಡಿದ್ರೆ, ಕೆಎಲ್ ರಾಹುಲ್ 46ರನ್ ಪೂರನ್ 22ರನ್ಗಳಿಕೆ ಮಾಡಿದರು. ರಾಜಸ್ಥಾನ ತಂಡದ ಪರ ಆರ್ಚರ್ ಹಾಗೂ ಸ್ಟೋಕ್ಸ್ ತಲಾ 2ವಿಕೆಟ್ ಪಡೆದುಕೊಂಡು ಮಿಂಚಿದರು.
186ರನ್ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ-ಸ್ಟೋಕ್ಸ್ ಜೋಡಿ ಮೊದಲ ವಿಕೆಟ್‌ಗೆ 60ರನ್ಗಳಿಕೆ ಮಾಡಿತು. ಪವರ್ ಪ್ಲೇನಲ್ಲಿ ಅಬ್ಬರಿಸಿದ ಸ್ಟೋಕ್ಸ್ ಕೇವಲ 24 ಎಸೆತಗಳಲ್ಲಿ 50ರನ್ಗಳಿಕೆ ಮಾಡಿ, ಜೋರ್ಡನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರಾಬಿನ್ ಉತ್ತಪ್ಪ 23 ಎಸೆತಗಳಲ್ಲಿ 30ರನ್ಗಳಿಕೆ ಮಾಡಿ ಔಟಾದರು.
ಇದಾದ ಬಳಿಕ ಕಣಕ್ಕಿಳಿದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಸ್ಫೋಟಕ (48ರನ್), ಸ್ಟೀವ್ ಸ್ಮಿತ್ ಅಜೇಯ (20 ಎಸೆತಗಳಲ್ಲಿ 31*) ಮತ್ತು ಜೋಸ್ ಬಟ್ಲರ್ ಅಜೇಯ (11 ಎಸೆತಗಳಲ್ಲಿ 22*) ರನ್ಗಳಿಕೆ ಮಾಡಿ 17.3 ಓವರ್‌ಗಳಲ್ಲಿ ಕೇವಲ 3ವಿಕೆಟ್ ಕಳೆದುಕೊಂಡು 186ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು.
-
It's getting a tad interesting here at the Points Table. What are your predictions for the playoffs?#Dream11IPL pic.twitter.com/xcXTYIpWdg
— IndianPremierLeague (@IPL) October 30, 2020 " class="align-text-top noRightClick twitterSection" data="
">It's getting a tad interesting here at the Points Table. What are your predictions for the playoffs?#Dream11IPL pic.twitter.com/xcXTYIpWdg
— IndianPremierLeague (@IPL) October 30, 2020It's getting a tad interesting here at the Points Table. What are your predictions for the playoffs?#Dream11IPL pic.twitter.com/xcXTYIpWdg
— IndianPremierLeague (@IPL) October 30, 2020
ಈ ಗೆಲುವಿನೊಂದಿಗೆ 12 ಅಂಕ ಗಳಿಕೆ ಮಾಡಿರುವ ರಾಜಸ್ಥಾನ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದು, ಇಷ್ಟೇ ಪಾಯಿಂಟ್ ಹೊಂದಿರುವ ಕಿಂಗ್ಸ್ ಇಲೆವೆನ್ ತಂಡ ನೆಟ್ ರನ್ರೇಟ್ನಡಿ 4ನೇ ಸ್ಥಾನ ಕಾಯ್ದುಕೊಂಡಿದೆ. ಇದರ ಜತೆಗೆ ಪ್ಲೇ-ಆಪ್ನ 4ಸ್ಥಾನಕ್ಕಾಗಿ ಇದೀಗ ಪಂಜಾಬ್, ರಾಜಸ್ಥಾನ್, ಕೋಲ್ಕತಾ ಮತ್ತು ಹೈದರಾಬಾದ್ ತಂಡಗಳ ನಡುವೆ ಮತ್ತಷ್ಟು ಪೈಪೋಟಿ ನಿರ್ಮಾಣಗೊಂಡಿದೆ.