ETV Bharat / sports

ಸಂಜು ಬ್ಯಾಟಿಂಗ್​ ಅಬ್ಬರ, ತೆವಾಟಿಯ ಸ್ಪಿನ್​ ಮೋಡಿ: ಸಿಎಸ್​ಕೆ ವಿರುದ್ಧ ರಾಜಸ್ಥಾನ್​ಗೆ 16 ರನ್​ಗಳ ಜಯ

author img

By

Published : Sep 23, 2020, 12:02 AM IST

Updated : Sep 23, 2020, 10:29 AM IST

ರಾಜಸ್ಥಾನ್​ ನೀಡಿದ 217 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಎಂ.ಎಸ್.ಧೋನಿ ಪಡೆ ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ 16 ರನ್​ಗಳ ಸೋಲುಕಂಡಿದೆ.

ಸಿಎಸ್​ಕೆ ವಿರುದ್ಧ ರಾಜಸ್ಥಾನ್​ಗೆ 16 ರನ್​ಗಳ ಜಯ

ಶಾರ್ಜಾ: ಎಲ್ಲಾ ವಿಭಾಗದಲ್ಲೂ ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ್​ ರಾಯಲ್ಸ್ ತಂಡವು​ 3 ಬಾರಿಯ ಚಾಂಪಿಯನ್ಸ್​ ಚೆನ್ನೈ ಸೂಪರ್ ಕಿಂಗ್ಸ್​ಗೆ 16 ರನ್​ಗಳ ಸೋಲುಣಿಸಿದೆ.

ರಾಜಸ್ಥಾನ್​ ನೀಡಿದ 217 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಎಂ.ಎಸ್.ಧೋನಿ ಪಡೆ ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ವಿಫಲರಾದರು. ಆರಂಭಿಕರಾದ ವಾಟ್ಸನ್​ (33) ಹಾಗೂ ವಿಜಯ್ (21)​ 56 ರನ್​ಗಳ ಜೊತೆಯಾಟ ನೀಡುವ ಮೂಲಕ ರಾಜಸ್ಥಾನ್​ ತಂಡಕ್ಕೆ ತಿರುಗೇಟು ನೀಡುವ ಮುನ್ಸೂಚನೆ ಕಂಡುಬಂದಿತ್ತು. ಆದರೆ ಈ ವೇಳೆ ಬೌಲಿಂಗ್​ ದಾಳಿಗಿಳಿದ ರಾಹುಲ್ ತೆವಾಟಿಯಾ 21 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 1 ಬೌಂಡರಿ ಸಿಡಿಸಿದ್ದ ವಾಟ್ಸನ್​ ವಿಕೆಟ್​ ಪಡೆದು ಜೊತೆಯಾಟ ಬ್ರೇಕ್​ ಮಾಡಿದರು. ಇವರ ಬೆನ್ನಲ್ಲೇ ವಿಜಯ್ ಕೂಡ ಗೋಪಾಲ್​ ಬೌಲಿಂಗ್​ನಲ್ಲಿ ಟಾಮ್ ಕರನ್​ಗೆ ಕ್ಯಾಚ್​ ನೀಡಿ ಔಟಾದರು.

ನಂತರ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಸ್ಯಾಮ್​ ಕರನ್​ 6 ಎಸೆತಗಳಲ್ಲಿ 17 ರನ್​ ಗಳಿಸಿ ತೆವಾಟಿಯಾ ಬೌಲಿಂಗ್​ನಲ್ಲಿ ಸ್ಟಂಪ್​ ಔಟ್​​‌ ​ಆದರು. ಅದೇ ಓವರ್​ನಲ್ಲಿ ಇಂದೇ ಮೊದಲ ಪಂದ್ಯವನ್ನಾಡಿದ ಋತುರಾಜ್ ಗಾಯಕ್ವಾಡ್​ ಕೂಡ ಸ್ಟಂಪ್​ ಔಟ್ ಆದರು.

ಹೀಗೆ 77 ರನ್​ಗೆ 4 ವಿಕೆಟ್​ ಕಳೆದುಕೊಂಡಿದ್ದಾಗ ಪ್ಲೆಸಿಸ್​ ಜೊತೆಗೂಡಿದ ಕೇದಾರ್​ ಜಾಧವ್​ 5ನೇ ವಿಕೆಟ್​ಗೆ 37 ರನ್​ಗಳ ಸೇರಿಸಿದರು. ಈ ಸಂದರ್ಭದಲ್ಲಿ 22 ರನ್ ​ಗಳಿಸಿದ್ದ ಜಾಧವ್​ ಟಾಮ್​ ಕರನ್ ಬೌಲಿಂಗ್​ನಲ್ಲಿ ಸಾಮ್ಸನ್​ಗೆ ಕ್ಯಾಚ್​ ನೀಡಿ ಔಟಾದರು.

ಸಂಜು ಸಾಮ್ಸನ್​
ಸಂಜು ಸಾಮ್ಸನ್​

ನಿಧಾನಗತಿ ಆಟಕ್ಕೆ ಮೊರೆ ಹೋಗಿದ್ದ ಪ್ಲೆಸಿಸ್​ ನಂತರ ಗೇರ್​ ಬದಲಿಸಿದರಾದರೂ ಅಷ್ಟರಲ್ಲಿ ಪಂದ್ಯ ಕೈ ಜಾರಿ ಹೋಗಿತ್ತು. ಅವರು 37 ಎಸೆತಗಳಲ್ಲಿ 7 ಸಿಕ್ಸರ್​ ಹಾಗೂ ಒಂದು ಬೌಂಡರಿ ಸಹಿತ 72 ರನ್​ ಗಳಿಸಿ ಔಟಾದರು. ಧೋನಿ ಸೆಟ್ಲ್​ ಆಗಲು ಹೆಚ್ಚು ಎಸೆತಗಳನ್ನು ತೆಗೆದುಕೊಂಡಿದ್ದು ಸಹ ಚೆನ್ನೈ ಸೋಲಿಗೆ ಕಾರಣವಾಯಿತು. ಕೊನೆಯ ಓವರ್​ನಲ್ಲಿ 3 ಸಿಕ್ಸರ್​ ಸಿಡಿಸಿ, 17 ಎಸೆತಗಳಲ್ಲಿ 29 ರನ್​ ಬಾರಿಸಿದ ಎಂಎಸ್​ಡಿ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಒಟ್ಟಾರೆ 20 ಓವರ್​ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ 6 ವಿಕೆಟ್​ ಕಳೆದುಕೊಂಡು 200 ರನ್​ ಗಳಿಸಷ್ಟೇ ಶಕ್ತವಾಗಿ 16 ರನ್​ಗಳ ಸೋಲು ಕಂಡಿತು. ತೆವಾಟಿಯಾ 3, ಆರ್ಚರ್​, ಟಾಮ್ ಕರ್ರನ್​ ಹಾಗೂ ಶ್ರೇಯಸ್ ಗೋಪಾಲ್​ ತಲಾ ಒಂದು ವಿಕೆಟ್​ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್​ ನಡೆಸಿದ್ದ ರಾಜಸ್ಥಾನ್​ ರಾಯಲ್ಸ್​, ಸಂಜು ಸಾಮ್ಸನ್ 74 (32ಎಸೆತ), ಸ್ಟಿವ್ ಸ್ಮಿತ್​ 69 (47)​ ಹಾಗೂ ಆರ್ಚರ್ 27 (​8 ಎಸೆತ) ರನ್​ ನೆರವಿನಿಂದ 216 ರನ್​ ಪೇರಿಸಿತ್ತು.

Last Updated : Sep 23, 2020, 10:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.