ETV Bharat / sports

ಕೆಕೆಆರ್ ವಿಕೆಟ್​ ಬೀಳುತ್ತಿದ್ದಂತೆ ಟ್ವಿಟರ್​ನಲ್ಲಿ ಸಂಭ್ರಮಿಸಿದ ಆ ಎರಡು ತಂಡಗಳು! - ರಾಜಸ್ಥಾನ್ ರಾಯಲ್ಸ್

ಮುಂಬೈ ಪ್ಲೇ ಆಫ್​ ಖಚಿತ ಪಡಿಸಿಕೊಂಡಿದೆ, 2 ಮತ್ತು 3ನೇ ಸ್ಥಾನದಲ್ಲಿ ಡೆಲ್ಲಿ ಹಾಗೂ ಬೆಂಗಳೂರು ತಂಡಗಳಿವೆ. ಡೆಲ್ಲಿ ಮತ್ತು ಬೆಂಗಳೂರು ಇನ್ನು ಒಂದು ಪಂದ್ಯ ಗೆದ್ದರೆ ಪ್ಲೇ ಆಫ್ ಖಚಿವಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್​
ಚೆನ್ನೈ ಸೂಪರ್ ಕಿಂಗ್ಸ್​
author img

By

Published : Oct 29, 2020, 8:59 PM IST

Updated : Oct 30, 2020, 12:02 AM IST

ದುಬೈ: ಗೆಲುವು ನಿರ್ಣಾಯಕವಾಗಿರುವ ಪಂದ್ಯದಲ್ಲಿ ಕೆಕೆಆರ್ ಒಂದೊಂದು ವಿಕೆಟ್​ ಬೀಳುತ್ತಿದ್ದರೆ ಅತ್ತ ರಾಜಸ್ಥಾನ್​ ರಾಯಲ್ಸ್​ ಹಾಗೂ ಸನ್​ರೈಸರ್ಸ್ ಹೈದರಾಬಾದ್​ ತಂಡಗಳು ಟ್ವಿಟರ್​ನಲ್ಲಿ ಸಿಎಸ್​ಕೆಗೆ ಬೆಂಬಲ ವ್ಯಕ್ತಪಡಿಸುತ್ತಾ ಸಂಭ್ರಮಿಸುತ್ತಿವೆ.

ರಾಜಸ್ಥಾನ್ ರಾಯಲ್ಸ್ ಟ್ವೀಟ್
ರಾಜಸ್ಥಾನ್ ರಾಯಲ್ಸ್ ಟ್ವೀಟ್

ಪ್ಲೇ ಆಫ್​ನ ನಾಲ್ಕನೇ ಸ್ಥಾನಕ್ಕಾಗಿ ಕೆಕೆಆರ್​, ಪಂಜಾಬ್, ಹೈದರಾಬಾದ್​ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇಂದಿನ ಪಂದ್ಯದಲ್ಲಿ ಕೆಕೆಆರ್​ ಟೂರ್ನಿಯಿಂದ ಹೊರಬಿದ್ದಿರುವ ಸಿಎಸ್​ಕೆ ತಂಡವನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಕೆಕೆಆರ್​ ​ಬ್ಯಾಟ್ಸ್​ಮನ್​ಗಳು ಔಟಾಗುತ್ತಿದ್ದಂತೆ ರಾಯಲ್ಸ್​ ಹಾಗೂ ಹೈದರಾಬಾದ್​ ಟ್ವಿಟರ್​ನಲ್ಲಿ​ ಸಂಭ್ರಮ ವ್ಯಕ್ತಪಡಿಸುತ್ತಿದೆ.

  • don't say it
    don't say it
    don't say it
    don't say it
    our mind every 5 mins: #WhistlePodu

    — Rajasthan Royals (@rajasthanroyals) October 29, 2020 " class="align-text-top noRightClick twitterSection" data=" ">

ಒಂದು ವೇಳೆ ಈ ಪಂದ್ಯವನ್ನು ಕೆಕೆಆರ್ ಸೋತರೆ ಅವರ ಪ್ಲೇ ಆಫ್ ಭವಿಷ್ಯ ತುಂಬಾ ಕಠಿಣವಾಗಲಿದೆ. ಏಕೆಂದರೆ ಈಗಾಗಲೆ ಪಂಜಾಬ್ ಕೂಡ 12 ಅಂಕ ಪಡೆದಿದ್ದು 4 ನೇ ಸ್ಥಾನದಲ್ಲಿದೆ, ಮುಂದಿನ ಪಂದ್ಯ ಗೆದ್ದರೆ ಪಂಜಾಬ್​ಗೆ ಅನುಕೂಲವಾಗಲಿದೆ. ಇದರ ಜೊತೆಗೆ ಸನ್​ರೈಸರ್ಸ್ ಹೈದರಾಬಾದ್​, ರಾಜಸ್ಥಾನ್ ರಾಯಲ್ಸ್​ಗೂ ಕೂಡ ಒಂದು ಅವಕಾಶ ಸಿಗಲಿದೆ.

ಇನ್ನು ಮುಂಬೈ ಪ್ಲೇ ಆಫ್​ ಖಚಿತ ಪಡಿಸಿಕೊಂಡಿದೆ, 2 ಮತ್ತು 3ನೇ ಸ್ಥಾನದಲ್ಲಿ ಡೆಲ್ಲಿ ಹಾಗೂ ಬೆಂಗಳೂರು ತಂಡಗಳಿವೆ. ಡೆಲ್ಲಿ ಮತ್ತು ಬೆಂಗಳೂರು ಇನ್ನು ಒಂದು ಪಂದ್ಯ ಗೆದ್ದರೆ ಪ್ಲೇ ಆಫ್ ಖಚಿತವಾಗಲಿದೆ.

Last Updated : Oct 30, 2020, 12:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.