ಬೆಂಗಳೂರು: ಟೀಂ ಇಂಡಿಯಾ ಮಾಜಿ ಆಟಗಾರ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ರಾಜ್ಯಮಟ್ಟದ ಅಂಡರ್ 14 ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಧಾರವಾಡ ವಲಯ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವೈಸ್-ಪ್ರೆಸಿಡೆಂಟ್ ತಂಡದ ಪರ ಸಮಿತ್ ದ್ವಿಶತಕ ದಾಖಲಿಸಿದ್ದಾರೆ. ದ್ವಿತೀಯ ಇನ್ನಿಂಗ್ಸ್ನಲ್ಲಿ ಅಜೇಯ 94 ರನ್ ಸಿಡಿಸಿದ್ದಲ್ಲದೆ 3 ವಿಕೆಟ್ ಕಬಳಿಸಿ ಆಲ್ರೌಂಡ್ ಆಟ ಪ್ರದರ್ಶಿಸಿದ್ದಾರೆ.
-
#RahulDravid 's son #SamitDravid scores a double century in #KSCA 's Under-14 tournament in #Bengaluru pic.twitter.com/EOnNPv8R3g
— Ramesh Bala (@rameshlaus) December 19, 2019 " class="align-text-top noRightClick twitterSection" data="
">#RahulDravid 's son #SamitDravid scores a double century in #KSCA 's Under-14 tournament in #Bengaluru pic.twitter.com/EOnNPv8R3g
— Ramesh Bala (@rameshlaus) December 19, 2019#RahulDravid 's son #SamitDravid scores a double century in #KSCA 's Under-14 tournament in #Bengaluru pic.twitter.com/EOnNPv8R3g
— Ramesh Bala (@rameshlaus) December 19, 2019
256 ಚೆಂಡುಗಳನ್ನ ಎದುರಿಸಿದ ಸಮಿತ್ 22 ಬೌಂಡರಿ ಸಹಿತ 201 ರನ್ ಗಳಿಸಿದ್ದು, ಬೌಲಿಂಗ್ನಲ್ಲಿ 26 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಅಂಡರ್-12 ಕ್ರಿಕೆಟ್ ಪಂದ್ಯದಲ್ಲಿ ಸಮಿತ್ ಮೂರು ಅರ್ಧಶತಕ ಸಿಡಿಸಿ ಸುದ್ದಿಯಾಗಿದ್ದರು.