ETV Bharat / sports

ಸಚಿನ್​ರಷ್ಟೇ ದ್ರಾವಿಡ್ ಕೂಡ ಮಹತ್ವದ ಆಟಗಾರ.. ಅವರಿಬ್ಬರೂ ಭಾರತದ ಬ್ಯಾಟಿಂಗ್‌ನ ಹೃದಯ : ಸ್ಟೀವ್​ ವಾ​ - ಸಚಿನ್​ ತೆಂಡೂಲ್ಕರ್​

ಭಾರತದ ಮಾಜಿ 3ನೇ ಕ್ರಮಾಂಕದ ಬ್ಯಾಟ್ಸ್​ಮನ್​ ರಾಹುಲ್ ದ್ರಾವಿಡ್ ಅವರನ್ನು ಶ್ಲಾಘಿಸಿರುವ ಸ್ಟೀವ್ ವಾ, ಅವರು ಅದ್ಭುತ ಏಕಾಗ್ರತೆ ಮತ್ತು ರಕ್ಷಣಾತ್ಮಕ ಆಟ ಹೊಂದಿದ್ದರು. ಅವರನ್ನು ಸ್ಲೆಡ್ಜ್ ಮಾಡಲು ಪ್ರಯತ್ನಿಸುವುದರಲ್ಲಿ ಅರ್ಥವಿರಲಿಲ್ಲ..

ರಾಹುಲ್​ ದ್ರಾವಿಡ್​ -ಸ್ಟೀವ್​ ವಾ
ರಾಹುಲ್​ ದ್ರಾವಿಡ್​ -ಸ್ಟೀವ್​ ವಾ
author img

By

Published : Jan 4, 2021, 5:04 PM IST

ಮೆಲ್ಬೋರ್ನ್ ​: ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್​ ವಾ, ತಮ್ಮ ಆಟದ ದಿನಗಳಲ್ಲಿ ಲೆಜೆಂಡರಿ ಬ್ಯಾಟ್ಸ್​ಮನ್​ ರಾಹುಲ್​ ದ್ರಾವಿಡ್​ ಭಾರತ ತಂಡಕ್ಕೆ ಸಚಿನ್​ಗಿದ್ದಷ್ಟೇ ಪ್ರಾಮುಖ್ಯತೆ ಇದೆ. ಅವರಿಬ್ಬರು ಭಾರತೀಯ ಬ್ಯಾಟಿಂಗ್​ ವಿಭಾಗದ ಹೃದಯ ಭಾಗವಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಭಾರತದ ಮಾಜಿ 3ನೇ ಕ್ರಮಾಂಕದ ಬ್ಯಾಟ್ಸ್​ಮನ್​ ರಾಹುಲ್ ದ್ರಾವಿಡ್ ಅವರನ್ನು ಶ್ಲಾಘಿಸಿರುವ ಸ್ಟೀವ್ ವಾ, ಅವರು ಅದ್ಭುತ ಏಕಾಗ್ರತೆ ಮತ್ತು ರಕ್ಷಣಾತ್ಮಕ ಆಟವನ್ನು ಹೊಂದಿದ್ದರು. ಅವರನ್ನು ಸ್ಲೆಡ್ಜ್ ಮಾಡಲು ಪ್ರಯತ್ನಿಸುವುದರಲ್ಲಿ ಅರ್ಥವಿರಲಿಲ್ಲ ಎಂದಿದ್ದಾರೆ.

ಅವರು ನಂಬಲಸಾಧ್ಯವಾದ ಉಗ್ರ ಏಕಾಗ್ರತೆಯಿಂದ ಕೂಡಿರುತ್ತಿದ್ದರು. ಅವರನ್ನು ಸ್ಲೆಡ್ಜ್​ ಮಾಡುವುದರಲ್ಲಿ ಯಾವುದೇ ಅರ್ಥವಿರಲಿಲ್ಲ. ಹಾಗೂ ಅದು ಸಾಧ್ಯವೂ ಇರಲಿಲ್ಲ. ಅವರು ಭಾರತ ತಂಡದ ಬ್ಯಾಂಕರ್​ ಮತ್ತು ಎಲ್ಲರನ್ನು ಒಟ್ಟಿಗೆ ಹಿಡಿದಿರುವ ಅಂಟಿನಂತಿದ್ದರು. ಅವರು ಕ್ರೀಸ್​ನ ಆಕ್ರಮಿಸಿಕೊಳ್ಳುತ್ತಾರೆಂಬುದು ರನ್​ಗಳಿಸಲಿದ್ದಾರೆ ಎಂದು ನನಗೆ ತಿಳಿದಿತ್ತು.

ಜೊತೆಗೆ ಅತ್ಯುತ್ತಮ ಗುಣಮಟ್ಟದ ಬೌಲಿಂಗ್​ ಗುಣಮಟ್ಟವನ್ನು ಹಿಮ್ಮೆಟ್ಟಿಸುವ ಮೌಲ್ಯಯುತ ಬ್ಯಾಟ್ಸ್​ಮನ್​ ಆಗಿದ್ದರು. ಆತ ಎಲ್ಲರಿಗಿಂತ ಅತ್ಯುತ್ತಮ ಹೊಡೆತಗಳನ್ನು ಆಡಬಲ್ಲ ಆಟಗಾರನಾಗಿದ್ದರು. ಅವರೊಬ್ಬರ ವಿಶ್ವದರ್ಜೆಯ ಬ್ಯಾಟ್ಸ್​ಮನ್​ ಆಗಿದ್ದು, ಸಚಿನ್​ ವಿರುದ್ಧ ಜಯಿಸಲು ಬೌಲರ್​ಗಳಿಗೆ ಎಷ್ಟು ಕಷ್ಟವೋ ಅಷ್ಟೇ ಕಷ್ಟವಾಗಿತ್ತು ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಕೋಲ್ಕತಾದಲ್ಲಿ 2001ರಲ್ಲಿ ರಾಹುಲ್​ ದ್ರಾವಿಡ್ ಲಕ್ಷ್ಮಣ್​ ಜೊತೆ ಸೇರಿ ಕಟ್ಟಿದ ಇನ್ನಿಂಗ್ಸ್​ ಅದ್ಭುತವಾದದ್ದು ಎಂದು ವಾ ಹೇಳಿದ್ದಾರೆ. ಆ ಪಂದ್ಯದಲ್ಲಿ ಲಕ್ಷ್ಮಣ್​ ಮತ್ತು ದ್ರಾವಿಡ್​ 376 ರನ್​ಗಳ ಜೊತೆಯಾಟ ನಡೆಸಿದ್ದರು. ಇದರಲ್ಲಿ ದ್ರಾವಿಡ್​ 180 ರನ್​ಗಳಿಸಿದ್ದರು. ಲಕ್ಷ್ಮಣ್​ 181 ರನ್​ಗಳಿಸಿದ್ದರು. ಈ ಪಂದ್ಯ ಕ್ರಿಕೆಟ್​ ಚರಿತ್ರಯಲ್ಲೇ ಅತ್ಯದ್ಭುತ ಪಂದ್ಯಗಳಲ್ಲಿ ಇಂದಿಗೂ ಒಂದಾಗಿದೆ.

ಇದನ್ನು ಓದಿ:ಬ್ರಿಸ್ಬೇನ್​ಗೆ ತೆರಳಲು ಭಾರತ ತಂಡ ಹಿಂದೇಟು ಹಾಕುತ್ತಿದೆ ಎಂಬುದು ಸುಳ್ಳು: ಸಿಎ ಬಾಸ್​ ನಿಕ್​ ಹಾಕ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.