ಮುಂಬೈ: ಭಾರತದ ಕ್ರಿಕೆಟ್ ತಂಡವನ್ನು ವಿಶ್ವದಲ್ಲಿ ಬಲಿಷ್ಠ ತಂಡ ಎನಿಸಿಕೊಳ್ಳುವಂತೆ ಮಾಡಿದ್ದ ಗಂಗೂಲಿ, ಕನ್ನಡಿಗ ದ್ರಾವಿಡ್ರನ್ನು ವಿಕೆಟ್ ಕೀಪಿಂಗ್ ಮಾಡುವಂತೆ ಹೇಳಿದ್ದಕ್ಕೆ ಇಷ್ಟವಿಲ್ಲದಿದ್ದರೂ ದಾದಾ ಹಾಗೂ ಟೀಂ ಇಂಡಿಯಾಗೋಸ್ಕರ ವಿಕೆಟ್ ಕೀಪಿಂಗ್ ಮಾಡಿದ್ದರಂತೆ ದ್ರಾವಿಡ್.
ಭಾರತ ತಂಡಕ್ಕೆ ಧೋನಿ ಸೇರುವ ಮೊದಲು 10 ವರ್ಷಗಳ ಕಾಲ ಬಿಸಿಸಿಐ ಸುಮಾರು10ಕ್ಕೂ ಹೆಚ್ಚು ವಿಕೆಟ್ ಕೀಪರ್ ಬದಲಾಯಿಸಿತ್ತು. 10 ವಿಕೆಟ್ ಕೀಪರ್ಗಳಲ್ಲಿ ಕನ್ನಡಿಗ ದ್ರಾವಿಡ್ ಕೂಡಾ ಒಬ್ಬರು. ಆದರೆ ದ್ರಾವಿಡ್ ವಿಕೆಟ್ ಕೀಪರ್ ಆಗಲು ಭಾರತ ತಂಡದ ಮಾಜಿ ನಾಯಕ ಗಂಗೂಲಿ ಪಾತ್ರ ಮಹತ್ವದ್ದಾಗಿದೆ.
ಕ್ರಿಕೆಟ್ ಡೈರೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದ್ರಾವಿಡ್, ತಾವು ವಿಕೆಟ್ ಕೀಪರ್ ಆಗಲು ಸೌರವ್ ಗಂಗೂಲಿ ಕಾರಣ ಎಂದು ಹೇಳಿದ್ದಾರೆ. 2002ರ ವೇಳೆಗಾಗಲೇ ದ್ರಾವಿಡ್ ಹಲವಾರು ಬಾರಿ ನಯನ್ ಮೋಂಗಿಯಾ ಗಾಯಾಳುವಾದಂತಹ ಸಂದರ್ಭದಲ್ಲಿ ವಿಕೆಟ್ ಕೀಪರ್ ಜವಾಬ್ಧಾರಿ ನಿರ್ವಹಿಸಿದ್ದರು.
- " class="align-text-top noRightClick twitterSection" data="">
ದ್ರಾವಿಡ್ 15 ವರ್ಷವಿದ್ದಾಗ ವಿಕೆಟ್ ಕೀಪರ್ ಆಗಿದ್ದರಂತೆ. ಕೀಪಿಂಗ್ ಜವಾಬ್ದಾರಿ ಇಷ್ಟವಾಗದ ಕಾರಣ ತ್ಯಜಿಸಿ ಬ್ಯಾಟಿಂಗ್ ಕಡೆ ಹೆಚ್ಚಿನ ಗಮನ ನೀಡಿದ್ದರು. ಆದರೆ ದಾದಾ ಒತ್ತಾಯದ ಮೇರೆಗೆ ದ್ರಾವಿಡ್ ಎರಡಕ್ಕೂ ಹೆಚ್ಚು ವರ್ಷಗಳ ಕಾಲ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು. 2003ರ ನ್ಯಾಟ್ವೆಸ್ಟ್ ಸರಣಿ ಹಾಗೂ ವಿಶ್ವಕಪ್ನಲ್ಲೂ ಗಂಗೂಲಿ, ದ್ರಾವಿಡ್ರನ್ನು ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಗಿ ತಂಡಕ್ಕೆ ಆಯ್ಕೆ ಮಾಡಿಸಿದ್ದರು.
ಆದರೆ ತಾವೊಬ್ಬ ಶ್ರೇಷ್ಠ ವಿಕೆಟ್ ಕೀಪರ್ ಆಗಿರಲಿಲ್ಲ. ನನಗೆ ಲೆಗ್ಸೈಡ್ನಲ್ಲಿ ಬಾಲ್ ಬಂದರೆ ಹಿಡಿಯಲಾಗುತ್ತಿರಲಿಲ್ಲ. ಜೊತೆಗೆ ನನ್ನ ಕಾಲಿನ ಚಲನೆ ವಿಕೆಟ್ ಕೀಪರ್ಗೆ ತಕ್ಕಂತೆ ಇರಲಿಲ್ಲ ಎಂಬುದನ್ನು ಸ್ವತಃ ದ್ರಾವಿಡ್ ಒಪ್ಪಿಕೊಂಡಿದ್ದಾರೆ.