ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ಬಳಿಕ ಟೀಂ ಇಂಡಿಯಾ ತಂಡದಲ್ಲಿ ಆಡಿಲ್ಲ. ಬರುವ ದಿನಗಳಲ್ಲಿ ಅವರು ಮತ್ತೊಮ್ಮೆ ಅವಕಾಶ ಪಡೆದುಕೊಳ್ಳುವುದರ ಕುರಿತು ಈಗಾಗಲೇ ಅನೇಕರು ತಮ್ಮದೇ ವಿಚಾರವನ್ನು ವ್ಯಕ್ತಪಡಿಸಿದ್ದಾರೆ.
ಇಎಸ್‌ಪಿಎನ್ ಕ್ರಿಕ್ ಇನ್ಫೋ ವಿಡಿಯೋ ಚಾಟ್‌ನಲ್ಲಿ ಸಂಜಯ್ ಮಾಂಜ್ರೇಕರ್ ಜತೆ ಮಾತನಾಡುತ್ತಿದ್ದ ವೇಳೆ ಧೋನಿ ಬ್ಯಾಟಿಂಗ್ ವೈಖರಿ ಬಗ್ಗೆ ಅವರು ಮಾತನಾಡಿದರು.
ಈ ರೀತಿಯಾಗಿ ಅವರು ಬ್ಯಾಟಿಂಗ್ ಮಾಡುವುದು ನಿಜಕ್ಕೂ ಅದ್ಭುತ. ಮೈದಾನದಲ್ಲಿದ್ದ ಅನೇಕ ವೇಳೆ ಬೆಸ್ಟ್ ಫಿನಿಷರ್ ಆಗಿ ಹೊರಹೊಮ್ಮಿರುವ ಧೋನಿ, ಪಂದ್ಯದ ಫಲಿತಾಂಶವನ್ನೇ ಅನೇಕ ಸಲ ಬದಲಿಸಿದ್ದಾರೆ ಎಂದರು.
2004ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ್ದ ಎಂಎಸ್, ತದನಂತರ ದ್ರಾವಿಡ್ ನಾಯಕತ್ವದ ವೇಳೆ ಓರ್ವ ಬೆಸ್ಟ್ ಫಿನಿಷರ್ ಎಂಬ ಪಟ್ಟ ಕಟ್ಟಿಕೊಂಡಿದ್ದರು.
ಅವರು ಬ್ಯಾಟಿಂಗ್ ಮಾಡ್ತಿದ್ದ ವೇಳೆ ತಮಗಾಗಿ ಆಡುತ್ತಿದ್ದಾರೆಂದು ನಾವೆಲ್ಲ ಅನೇಕ ಸಲ ಅಂದುಕೊಂಡಿದ್ದೆವು. ಧೋನಿಯ ಈ ರೀತಿಯ ಆಟ ಎಲ್ಲರಿಗೂ ಅವಶ್ಯವಾಗಿತ್ತು. ಅದಕ್ಕಾಗಿ ವಿಶೇಷ ತರಬೇತಿ ಬೇಕಿದೆ ಎಂದಿರುವ ದ್ರಾವಿಡ್, ಧೋನಿಯಲ್ಲಿ ಈ ರೀತಿಯ ಬ್ಯಾಟಿಂಗ್ ಸಾಮರ್ಥ್ಯ ಎಲ್ಲಿಂದ ಬಂತೆಂಬುದೇ ತಿಳಿದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, 2006ರಲ್ಲಿ ಪಾಕ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಧೋನಿ ಅದ್ಭುತ ಪ್ರದರ್ಶನದಿಂದ ಟೀಂ ಇಂಡಿಯಾ 4-1 ಅಂತರದಿಂದ ಗೆಲುವು ಸಾಧಿಸುತ್ತದೆ. ಈ ಸರಣಿಯಲ್ಲಿ ಎಂ.ಎಸ್ ಅದ್ಭುತ ಪ್ರದರ್ಶನ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಅವರು ಹೇಳಿದರು.