ಬೆಂಗಳೂರು: ಕೆಎಲ್ ರಾಹುಲ್ ಶತಕ ಹಾಗೂ ಬೌಲರ್ಗಳ ಅದ್ಭುತ ಪ್ರದರ್ಶನದ ನೆರವಿನಿಂದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಕೇರಳ ತಂಡವನ್ನು 60 ರನ್ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಮುಂದುವರಿದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ 49.5 ಓವರ್ಗಳಲ್ಲಿ 294 ರನ್ಗಳಿಗೆ ಆಲೌಟ್ ಆಯಿತು. ರಾಷ್ಟ್ರೀಯ ತಂಡದಿಂದ ಹೊರಬಿದ್ದಿರುವ ಬೇಸರದಲ್ಲಿದ್ದ ರಾಹುಲ್ ಕೇರಳ ಬೌಲರ್ಗಳನ್ನು ಬೆಂಡೆತ್ತಿದ್ದರು. 108 ಎಸೆತಗಳಲ್ಲಿ ಶತಕ ಪೂರೈಸಿದ ಅವರು 122 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 10 ಬೌಂಡರಿ ನೆರವಿನಿಂದ 131 ರನ್ಗಳಿಸಿದರು. ರಾಹುಲ್ಗೆ ಸಾಥ್ ನೀಡಿದ ಮನೀಷ್ ಪಾಂಡೆ -50 ಗೋಪಾಲ್ -31 ರನ್ಗಳಿಸಿದರು.
ಕೇರಳ ಪರ ಸಂದೀಪ್ ವಾರಿಯರ್ 2, ಬಾಸಿಲ್ ತಂಪಿ 3, ಕೆಎಂ ಆಸಿಫ್ 3,ವಿನೂಪ್ ಮನೋಹರನ್ 2 ವಿಕೆಟ್ ಪಡೆದು ಮಿಂಚಿದರು.
295 ರನ್ಗಳ ಟಾರ್ಗೆಟ್ ಪಡೆದ ಕೇರಳ ಆರಂಭಿಕ ವಿಷ್ಣು ವಿನೋದ್ (104), ಸಂಜು ಸಾಮ್ಸನ್(67) ಅವರ ಉತ್ತಮ ಆಟದ ಹೊರೆತಾಗಿಯೂ 46.4 ಓವರ್ಗಳಲ್ಲಿ 234 ರನ್ಗಳಿಗೆ ಆಲೌಟ್ ಆಗುವ ಮೂಲಕ 60 ರನ್ಗಳಿಂದ ಸೋಲನುಭವಿಸಿತು.
ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಕರ್ನಾಟಕ ಬೌಲರ್ಸ್ಗಳಾದ ಅಭಿಮನ್ಯು ಮಿಥುನ್ 2, ಪ್ರಸಿಧ್ ಕೃಷ್ಣ 1, ರೋನಿತ್ ಮೋರೆ 3, ಶ್ರೇಯಸ್ ಗೋಪಾಲ್ ಹಾಗೂ ಪವನ್ ದೇಶಪಾಂಡೆ ತಲಾ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.