ETV Bharat / sports

ಟಿ20 ಕ್ರಿಕೆಟ್​ನಲ್ಲಿ ಯಶಸ್ವಿಯಾಗಲು ದ್ರಾವಿಡ್​ ನೀಡಿದ್ದ ಸಲಹೆ ಬಹಿರಂಗ ಪಡಿಸಿದ ರಹಾನೆ

author img

By

Published : Jul 12, 2020, 5:17 PM IST

ರಹಾನೆ 2016ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಲೌಡರ್​ಹಿಲ್​ನಲ್ಲಿ ಕೊನೆಯ ಟಿ20 ಆಡಿದ್ದರು. ಅವರು ಚುಟುಕು ಕ್ರಿಕೆಟ್​ನಲ್ಲಿ ದೊಡ್ಡ ಹೊಡೆತಗಳಿಗಿಂತ ಸಾಂಪ್ರಾದಾಯಿಕ ಆಟಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆಂದು ಒಪ್ಪಿಕೊಂಡಿದ್ದಾರೆ..

ರಹಾನೆ-ದ್ರಾವಿಡ್​
ರಹಾನೆ-ದ್ರಾವಿಡ್​

ನವದೆಹಲಿ: ಭಾರತ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​ ಟಿ20 ಕ್ರಿಕೆಟ್​ನಲ್ಲಿ ಯಶಸ್ವಿಯಾಗಲು ತಮಗೆ ನೀಡಿದ ಸಲಹೆಯನ್ನು ಟೀಂ​ ಇಂಡಿಯಾದ ಟೆಸ್ಟ್​ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಬಹಿರಂಗಗೊಳಿಸಿದ್ದಾರೆ.

ಯಾವಾಗಲೂ ಹೊಡೆತದ ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ, ಹೊಡೆತದ ಪ್ರಭಾವದ ಮೇಲೆ ಮಾತ್ರ ಕೇಂದ್ರೀಕರಿಸಬೇಕು ಎಂದು ದ್ರಾವಿಡ್​ ಸಲಹೆ ನೀಡಿದ್ದರೆಂದು ರಹಾನೆ ಹೇಳಿದ್ದಾರೆ. ಕೆಲವೊಮ್ಮೆ ಟಿ20ಯಲ್ದಿ ನೀವು ಹೊಡೆಯುವ ಶಾಟ್​ ಉತ್ತಮವಾಗಿ ಕಾಣುವುದಿಲ್ಲ. ಮತ್ತು ನೀವು ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್​​ ಹೊಡೆದ ಎಂದು ಭಾವಿಸುತ್ತೀರಾ.. ಆದರೆ, ಟಿ20ಯಲ್ಲಿ ಶಾಟ್​ ಹೇಗೆ ಕಾಣುತ್ತವೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ರಾಹುಲ್​ ಬಾಯ್​ ಸಲಹೆ ನೀಡಿದ್ದರೆಂದು ವೆಬ್​ಸೈಟ್​ವೊಂದಕ್ಕೆ ರಹಾನೆ ತಿಳಿಸಿದ್ದಾರೆ.

'ಹೊಡೆತ ಕೆಟ್ಟದಾಗಿತ್ತು ಎಂಬುದು ಮುಖ್ಯವಲ್ಲ. ಟಿ20 ಕ್ರಿಕೆಟ್‌ನಲ್ಲಿ ಚೆಂಡನ್ನು ನೋಡುವ ಮೂಲಕ ಹೊಡೆಯಬೇಕು. ಆ ಹೊಡೆತ ಪರಿಣಾಮಕಾರಿ ಆಗಿರಬೇಕು ಅಷ್ಟೇ.. ಎಂದು ಅವರು ನನೆಗೆ ಹೇಳಿಕೊಟ್ಟಿದ್ದರು' ಅಂತಾ 32 ವರ್ಷದ ಆಟಗಾರ ಹೇಳಿದ್ದಾರೆ.

ರಹಾನೆ ಹಾಗೂ ದ್ರಾವಿಡ್​ ಇಬ್ಬರೂ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್​ ಪರ ಆಡಿದ್ದರು. ದ್ರಾವಿಡ್​ ನಾಯಕನಾಗಿ ಹಾಗೂ ನಂತರ ತಂಡದ ಮೆಂಟರ್​ ಆಗಿಯೂ ಕಾರ್ಯ ನಿರ್ವಹಿಸಿದ್ದರು.

ರಹಾನೆ-ದ್ರಾವಿಡ್​
ರಹಾನೆ-ದ್ರಾವಿಡ್​

ರಹಾನೆ 2016ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಲೌಡರ್​ಹಿಲ್​ನಲ್ಲಿ ಕೊನೆಯ ಟಿ20 ಆಡಿದ್ದರು. ಅವರು ಚುಟುಕು ಕ್ರಿಕೆಟ್​ನಲ್ಲಿ ದೊಡ್ಡ ಹೊಡೆತಗಳಿಗಿಂತ ಸಾಂಪ್ರಾದಾಯಿಕ ಆಟಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆಂದು ಒಪ್ಪಿಕೊಂಡಿದ್ದಾರೆ.

'ಟಿ20 ಕ್ರಿಕೆಟ್‌ನಲ್ಲಿ ನಾನು ಯಾರನ್ನು ನಕಲಿಸಲು ಪ್ರಯತ್ನಿಸುವುದಿಲ್ಲ. ನಾನು ಆಡುವ ಹೊಡೆತಗಳು ಬೌಲರ್​ ಮೇಲೆ ಇರುತ್ತವೆ. ಕವರ್ಸ್‌ ಫೀಲ್ಡರ್ ಮತ್ತು ಬೌಲರ್‌ನ ತಲೆ ಮೇಲೆ ಸಾಗುವಂತೆ ಹೊಡೆಯುವುದು ಕೆಲವು ಹೊಡೆತಗಳನ್ನು ನಾನೇ ಅಭಿವೃದ್ಧಿ ಪಡಿಸಿಕೊಂಡಿದ್ದೇನೆ. ನಿಮ್ಮ ಹೊಡೆತಗಳ ಬಗ್ಗೆ ನಿಮಗೆ ಖಚಿತವಿದ್ದರೆ ಅವುಗಳನ್ನು ಸಮರ್ಥಿಸಿಕೊಳ್ಳಬಹುದು' ಎಂದು ರಹಾನೆ ಹೇಳಿದ್ದಾರೆ.

ಮೊದಲ 6 ಓವರ್​ಗಳಲ್ಲಿ ನಾನು 18 ಎಸೆತಗಳನ್ನು ಎದುರಿಸಿದ್ರೆ ಯಾವಾಗಲು 150-160 ಸ್ಟ್ರೈಕ್​ರೇಟ್​ ಕಾಪಾಡಿಕೊಳ್ಳಲು ಬಯಸುತ್ತೇನೆ. ಇದು ಟಿ20 ಕ್ರಿಕೆಟ್​ನಲ್ಲಿ ನಿಮ್ಮ ಇನ್ನಿಂಗ್ಸ್​ ಆಡಬೇಕಾಗಿರುವುದು ಅಗತ್ಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.