ETV Bharat / state

ರೇಣುಕಾಸ್ವಾಮಿಯಿಂದ ಚಿನ್ನಾಭರಣ ಸುಲಿಗೆ ಮಾಡಿದ್ಧ ಆರೋಪಿ ರಾಘವೇಂದ್ರ & ಗ್ಯಾಂಗ್! - Renukaswamy murder case - RENUKASWAMY MURDER CASE

ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರುವಾಗ ಆರೋಪಿಗಳು ಆತನಿಂದ ಚಿನ್ನಾಭರಣ, ಹಣ ಸುಲಿಗೆ ಮಾಡಿರುವ ಬಗ್ಗೆ ಪೊಲೀಸರು ಚಾರ್ಚ್​ಶೀಟ್​ ಉಲ್ಲೇಖಿಸಿರುವುದು ಈಗ ಬಹಿರಂಗವಾಗಿದೆ.

ರೇಣುಕಾಸ್ವಾಮಿ
ರೇಣುಕಾಸ್ವಾಮಿ (ETV Bharat)
author img

By ETV Bharat Karnataka Team

Published : Sep 9, 2024, 7:04 PM IST

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಗೂ ಮುನ್ನ ಚಿತ್ರದುರ್ಗದಿಂದ ನಗರಕ್ಕೆ ಕರೆತರುವಾಗ ಆತ ಧರಿಸಿದ್ದ ಚಿನ್ನಾಭರಣ, ಹಣ ಸುಲಿಗೆ ಮಾಡಿ ಮಾರ್ಗ ಮಧ್ಯೆ, ಮದ್ಯದ ಪಾರ್ಟಿ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಸಂಬಂಧ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂರನೇ ಆರೋಪಿ ಪವನ್ ಸೂಚನೆ ಮೇರೆಗೆ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ, ಸ್ನೇಹಿತರಾದ ಜಗದೀಶ್, ಅನುಕುಮಾರ್ ಹಾಗೂ ರವಿ ಎಂಬುವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೇಣುಕಾಸ್ವಾಮಿಯನ್ನು ಅಪಹರಿಸಿದ್ದರು.

ಇಟಿಯೋಸ್ ಕಾರು ಚಾಲಕ ರವಿ ಮುಖಾಂತರ ನಗರಕ್ಕೆ ಬರುವ ಮಾರ್ಗ ಮಧ್ಯೆ ರೇಣುಕಾಸ್ವಾಮಿ ಧರಿಸಿದ್ದ ಚಿನ್ನದ ಸರ, ಉಂಗುರ, ವಾಚ್ ಹಾಗೂ ಬೆಳ್ಳಿಯ ಲಿಂಗ (ಕರಡಿಗೆ)ಯನ್ನು ಬೆದರಿಸಿ ಕಿತ್ತುಕೊಂಡಿದ್ದರು. ಬಳಿಕ ತುಮಕೂರಿನ ರಂಗಾಪುರದ ಬಾರ್​ವೊಂದಕ್ಕೆ ರೇಣುಕಾಸ್ವಾಮಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ ರಾಘವೇಂದ್ರ, ಜಗದೀಶ್ ಹಾಗೂ ಅನುಕುಮಾರ್ ಮದ್ಯ ಖರೀದಿಸಿ ಆತನಿಂದಲೇ ಹಣವನ್ನು ಫೋನ್​ ಪೇ ಮಾಡಿಸಿರುವುದನ್ನು ಪೊಲೀಸರು ಚಾರ್ಚ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಇದರ ಜೊತೆಗೆ ಬಾರ್​ಗೆ ಆರೋಪಿಗಳು ಹೋಗಿರುವ ಸಿಸಿಟಿವಿ ದೃಶ್ಯಾವಳಿಯನ್ನು ಚಾರ್ಚ್​ಶೀಟ್​ನಲ್ಲಿ ಪೊಲೀಸರು ಸೇರಿಸಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಚಾರ್ಜ್ ಶೀಟ್ ನಲ್ಲಿ ದರ್ಶನ್ ಸ್ವಇಚ್ಚಾ ಹೇಳಿಕೆ ರಿವೀಲ್: ಏನದು ಸತ್ಯ? - Darshan Statements

ETV Bharat Logo

Copyright © 2025 Ushodaya Enterprises Pvt. Ltd., All Rights Reserved.