ETV Bharat / sports

ರಹಾನೆ ನಾಯಕತ್ವದಲ್ಲಿ ಬೌಲರ್​ಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ: ಇಶಾಂತ್​ ಶರ್ಮಾ - ಬಾರ್ಡರ್​ ಗವಾಸ್ಕರ್​ ಸರಣಿ

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ವೇಳೆ ಇಶಾಂತ್ ಸೈಡ್​ ಸ್ಟ್ರೈನ್​ ಇಂಜುರಿಗೆ ತುತ್ತಾಗಿದ್ದರು. ನಂತರ ಐಪಿಎಲ್​ನಿಂದ ಹೊರಬಿದ್ದಿದ್ದ ಅವರು ಫಿಟ್​ನೆಸ್​ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಿಂದ ಕೂಡ ಹೊರಬಿದ್ದಿದ್ದರು.

ಇಶಾಂತ್​ ಶರ್ಮಾ- ರಹಾನೆ
ಇಶಾಂತ್​ ಶರ್ಮಾ- ರಹಾನೆ
author img

By

Published : Dec 23, 2020, 6:52 PM IST

ಮುಂಬೈ: ವಿರಾಟ್​ ಕೊಹ್ಲಿ ಪಿತೃತ್ವ ರಜೆ ಮೂಲಕ ಭಾರತಕ್ಕೆ ವಾಪಸ್​ ಬಂದಿರುವ ಕಾರಣ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಮೂರು ಟೆಸ್ಟ್ ಪಂದ್ಯಗಳಿಗೆ ಅಜಿಂಕ್ಯಾ ರಹಾನೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ಕಾರಣ ಆಸೀಸ್​ ಪ್ರವಾಸದಿಂದ ಹೊರಗುಳಿದಿರುವ ಇಶಾಂತ್​ ಶರ್ಮಾ ಇದಕ್ಕೆ ಖುಷಿ ವ್ಯಕ್ತಪಡಿಸಿದ್ದು, ರಹಾನೆ ಬೌಲರ್‌ಗಳ ನಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ವೇಳೆ ಇಶಾಂತ್ ಸೈಡ್​ ಸ್ಟ್ರೈನ್​ ಇಂಜುರಿಗೆ ತುತ್ತಾಗಿದ್ದರು. ನಂತರ ಐಪಿಎಲ್​ನಿಂದ ಹೊರಬಿದ್ದಿದ್ದ ಅವರು ಫಿಟ್​ನೆಸ್​ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಿಂದ ಕೂಡ ಹೊರಬಿದ್ದಿದ್ದರು.

ಅಜಿಂಕ್ಯ ರಹಾನೆ ಶಾಂತ ಮತ್ತು ಹೆಚ್ಚು ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಅವರೊಬ್ಬ ಬೌಲರ್‌ಗಳ ನಾಯಕ. ವಿರಾಟ್ ಕೊಹ್ಲಿ ಅಲಭ್ಯವಿರುವ ಸಂದರ್ಭದಲ್ಲಿ ನಾವಿಬ್ಬರು ಸಾಕಷ್ಟು ಸಂದರ್ಭಗಳಲ್ಲಿ ಜೊತೆಯಾಗಿ ಆಡಿದ್ದೇವೆ. ಆ ಪರಿಸ್ಥಿರಿಯಲ್ಲಿ ರಹಾನೆ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಅವರು ಬೌಲರ್​ಗಳಿಗೆ ಯಾವ ರೀತಿ ಫೀಲ್ಡಿಂಗ್ ಬೇಕು? ಯಾವ ರೀತಿ ಬೌಲಿಂಗ್ ಮಾಡಲು ಬಯಸುತ್ತೀರಾ ಎಂದು ನನ್ನನ್ನೇ ಕೇಳುತ್ತಿದ್ದರು ಎಂದು ರಹಾನೆ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಅವರು ತಮ್ಮ ನಾಯಕತ್ವದಲ್ಲಿ ಯಾವ ರೀತಿಯ ವ್ಯಕ್ತಿಯಾಗಿದ್ದಾರೆ ಎಂಬುದನ್ನು ನೀವು ನೋಡಬಹುದು. ಅವರು ತುಂಬಾ ಶಾಂತ ಮತ್ತು ಸಂಯೋಜನೆ ಹೊಂದಿದ್ದಾರೆ. ಅವರೂ ಯಾವಾಗಲೂ ಗಂಭೀರವಾಗಿರುತ್ತಾರೆ. ಅವರಿಗೆ ಹಾಸ್ಯಪ್ರಜ್ಞೆ ಇಲ್ಲ ಎಂದು ನಾನು ಹೇಳುವುದಿಲ್ಲ. ಏಕೆಂದರೆ ರಹಾನೆ ನಮ್ಮೊಂದಿಗೆ ತುಬಾ ಹಾಸ್ಯ ಮಾಡುತ್ತಾರೆ" ಎಂದು ಇಶಾಂತ್ ಹೇಳಿದರು.

ಈ ಹಿಂದೆ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡ ಎರಡು ಪಂದ್ಯಗಳಲ್ಲೂ ರಹಾನೆ ಭಾರತಕ್ಕೆ ಜಯ ತಂದುಕೊಟ್ಟಿದ್ದಾರೆ. ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ಡಿಸೆಂಬರ್​ 26ರಂದು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯವನ್ನಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.