ಮೆಲ್ಬೋರ್ನ್: ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡದ ಹಂಗಾಮಿ ನಾಯಕನಾಗಿರುವ ಅಜಿಂಕ್ಯ ರಹಾನೆ ಡ್ರೆಸ್ಸಿಂಗ್ ರೂಮ್ನಲ್ಲಿ ಶಾಂತಿಯ ವಾತಾವರಣ ತಂದಿದ್ದಾರೆ ಎಂದು ಸ್ಪಿನ್ನರ್ ಆರ್.ಅಶ್ವಿನ್ ಹೇಳಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ವಿಜಯದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಪಿಂಕ್ ಬಾಲ್ ಪಂದ್ಯದಲ್ಲಿ ದಾಖಲೆಯ 36 ರನ್ಗಳಿಗೆ ಕುಸಿದಿದ್ದ ಭಾರತ ತಂಡ 8 ವಿಕೆಟ್ಗಳ ಸೋಲು ಕಂಡಿತ್ತು. ನಂತರ ನಾಯಕ ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ನಾಯಕತ್ವದಲ್ಲಿ ಅಚ್ಚರಿಯ ಪ್ರದರ್ಶನ ತೋರಿ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.
"ಕೇವಲ 36 ರನ್ಗಳಿಗೆ ಆಲೌಟ್ ಆದ ನಂತರ ಮುಂದುವರಿಯುವುದು ಅಷ್ಟು ಸುಲಭವಲ್ಲ. ಆದರೆ ಸಂಪೂರ್ಣ ಕ್ರಿಕೆಟ್ ಆಡುವ ದೇಶ ಮತ್ತು ವಿರಾಟ್ ಅನುಪಸ್ಥಿತಿಲ್ಲಿ ಹಿನ್ನಡೆ ಅನುಭವಿಸಿದ್ದೆವು. ಆದರೆ ನಾವು ತಿರುಗಿ ಬೀಳುವ ಆಲೋಚನೆಗೆ ಅಂಟಿಕೊಂಡಿದ್ದೆವು. ಜಿಂಕ್ಸ್(ರಹಾನೆ) ಅವರ ಶಾಂತತೆ ಡ್ರೆಸ್ಸಿಂಗ್ ರೂಮ್ನಲ್ಲಿ ಮೈದಾನಕ್ಕೆ ಹೋಗಿ ಪಂದ್ಯದಲ್ಲಿ ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಸ್ಥಿರತೆಯನ್ನು ಒದಗಿಸಿಕೊಟ್ಟಿತು" ಎಂದು ಅಶ್ವಿನ್ ರಹಾನೆಯ ನಾಯತಕತ್ವವನ್ನು ಶ್ಲಾಘಿಸಿದ್ದಾರೆ.
-
Post win shenanigans: Reactions post #TeamIndia's series-leveling win at MCG#TeamIndia members speak about what makes the second Test win at the MCG so special - by @Moulinparikh
— BCCI (@BCCI) December 29, 2020 " class="align-text-top noRightClick twitterSection" data="
📹📹 https://t.co/eyFXTaeJXU #AUSvIND pic.twitter.com/V0YRwA2KuD
">Post win shenanigans: Reactions post #TeamIndia's series-leveling win at MCG#TeamIndia members speak about what makes the second Test win at the MCG so special - by @Moulinparikh
— BCCI (@BCCI) December 29, 2020
📹📹 https://t.co/eyFXTaeJXU #AUSvIND pic.twitter.com/V0YRwA2KuDPost win shenanigans: Reactions post #TeamIndia's series-leveling win at MCG#TeamIndia members speak about what makes the second Test win at the MCG so special - by @Moulinparikh
— BCCI (@BCCI) December 29, 2020
📹📹 https://t.co/eyFXTaeJXU #AUSvIND pic.twitter.com/V0YRwA2KuD
ರಹಾನೆ ಅವರ ನಾಯಕತ್ವ ಈ ಪಂದ್ಯದಲ್ಲಿ ಮೊದಲ ದಿನದಿಂದಲೇ ಅದ್ಭುತವಾಗಿತ್ತು. ಪಿಂಕ್ ಬಾಲ್ ಟೆಸ್ಟ್ನಲ್ಲಿ ಆಸೀಸ್ ಬ್ಯಾಟರ್ಗಳ ವಿರುದ್ಧ ಸ್ಪಿನ್ನರ್ಗಳು ಮೇಲುಗೈ ಸಾಧಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಕೇವಲ 11ನೇ ಓವರ್ನಲ್ಲೇ ಅಶ್ವಿನ್ರನ್ನು ಬೌಲಿಂಗ್ಗೆ ಇಳಿಸಿದ್ದರು. ಇದಕ್ಕೆ ತಕ್ಕಂತೆ ಅಶ್ವಿನ್ ಮೊದಲು ವೇಡ್ ನಂತರ ಸ್ಮಿತ್ ವಿಕೆಟ್ ಪಡೆದು ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟಿದ್ದರು.
ಈ ಕುರಿತು ಮಾತನಾಡಿದ ಅವರು, "ಆಸ್ಟ್ರೇಲಿಯಾದಲ್ಲಿ ಸ್ಟಿವ್ ಸ್ಮಿತ್ರನ್ನು ಔಟ್ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅದು ನಿಜಕ್ಕೂ ಕಠಿಣವಾದ ಟಾಸ್ಕ್. ಆದರೆ ಅವರನ್ನು ಔಟ್ ಮಾಡಲು ನಾವು ಯಾವಾಗಲೂ ಕೆಲಸ ಮಾಡುತ್ತಿರುತ್ತೇವೆ. ನಾವು ಯೋಜನೆಗಳನ್ನು ಒಟ್ಟುಗೂಡಿಸುತ್ತೇವೆ. ಆ ಯೋಜನೆಗಳೆಲ್ಲಾ ಒಟ್ಟಿಗೆ ಸೇರಿದಾಗ ಏನು ಬೇಕಾದರು ಆಗಲು ಸಾಧ್ಯ" ಎಂದು ಈ ಪಂದ್ಯದಲ್ಲಿ 5 ವಿಕೆಟ್ ಪಡೆದ ಅಶ್ವಿನ್ ಹೇಳಿದ್ದಾರೆ.
ಇದನ್ನು ಓದಿ:ಅಶ್ವಿನ್ ಸ್ಪಿನ್ ಮೋಡಿಗೆ ಮುರಿದು ಬಿತ್ತು ಮುರುಳೀಧರನ್ ದಾಖಲೆ