ETV Bharat / sports

ಲುಂಗಿ ಎನ್​ಗಿಡಿ ಬಳಿಕ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಪತ್ರಕ್ಕೆ 30ಕ್ಕೂ ಹೆಚ್ಚು ಆಟಗಾರರ ಸಹಿ

ಲುಂಗಿ ಎನ್‌ಗಿಡಿ ಸಿಎಸ್‌ಎ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದ್ದರು. ಇದನ್ನು ಮಾಜಿ ಆಟಗಾರರಾದ ಪ್ಯಾಟ್ ಸಿಮ್‌ಕಾಕ್ಸ್, ಬೋಟಾ ಡಿಪ್ಪೆನಾರ್, ರೂಡಿ ಸ್ಟೇನ್ ಮತ್ತು ಬ್ರಿಯಾನ್ ಮೆಕ್‌ಮಿಲನ್ ಟೀಕಿಸಿದ್ದರು.

author img

By

Published : Jul 15, 2020, 1:42 PM IST

Racial divide' in SA cricket
ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಸಹಿ ಹಾಕಿದ ಲುಂಗಿಎನ್​ಗಿಡಿ

ಕೇಪ್​ಟೌನ್ : ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್​ಗಿಡಿ ಬ್ಲ್ಯಾಕ್​ ಲೈವ್ಸ್​ ಮ್ಯಾಟರ್​ ಆಂದೋಲನ ಬೆಂಬಲಿಸಿ ಸಹಿ ಮಾಡಿದ ಬಳಿಕ ಮಖಾಯ್ ಎನ್ಟಿನಿ, ಹರ್ಷಲ್ ಗಿಬ್ಸ್ ಮತ್ತು ವೆರ್ನಾನ್ ಫಿಲಾಂಡರ್ ಸೇರಿ 30ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ದಕ್ಷಿಣ ಆಫ್ರಿಕಾ ಆಟಗಾರರು ಅಭಿಯಾನ ಬೆಂಬಲಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಅಭಿಯಾನ ಹಾಗೂ ಲುಂಗಿಯನ್ನು ಬೆಂಬಲಿಸಿ ರಾಷ್ಟ್ರೀಯ ಫೀಲ್ಡಿಂಗ್ ತರಬೇತುದಾರ ಜಸ್ಟಿನ್ ಒಂಟಾಂಗ್ ಸೇರಿದಂತೆ ಐವರು ಹಾಲಿ ತರಬೇತುದಾರರು ಪತ್ರಕ್ಕೆ ಸಹಿ ಹಾಕಿದ್ದಾರೆ. ಕ್ರಿಕೆಟ್ ವೆಬ್‌ಸೈಟ್‌ ಒಂದರ ವರದಿ ಪ್ರಕಾರ, ಈ ಪತ್ರವು ಪ್ರಪಂಚದಾದ್ಯಂತ ವರ್ಣಭೇದ ನೀತಿ ವಿರೋಧಿ ಅಭಿಯಾನದ ಪರ ಒಗ್ಗಟ್ಟು ಪ್ರದರ್ಶಿಸುವ ಪ್ರಯತ್ನವಾಗಿದೆ. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಮತ್ತು ಬಿಳಿ ಕ್ರಿಕೆಟಿಗರು ತಮ್ಮ ಬೆಂಬಲ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಸಹಿ ಹಾಕಿದ್ದಕ್ಕಾಗಿ ಲುಂಗಿ ಎನ್​ಗಿಡಿಯನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂದು ಮಾಜಿ ಮತ್ತು ಹಾಲಿ ಆಟಗಾರರು ತಿಳಿಸಿದ್ದಾರೆ. ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ), ಲುಂಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದಕ್ಕಾಗಿ ನಾವು ಅವರನ್ನು ವಿರೋಧಿಸುವುದಿಲ್ಲ. ಸಿಎಸ್​ಎ ಜೊತೆ ಎಲ್ಲ ಮಾಜಿ ಮತ್ತು ಹಾಲಿ ಆಟಗಾರರು ಆಂದೋಲನವನ್ನು ಬೆಂಬಲಿಸುತ್ತಾರೆ ಎಂದು ಬಯಸಿದ್ಧೇವೆ ಎಂದು ಹೇಳಿದೆ.

ಈ ಹಿಂದೆ, ಲುಂಗಿ ಎನ್‌ಗಿಡಿ ಸಿಎಸ್‌ಎ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಬೇಕೆಂದು ಒತ್ತಾಯಿಸಿದ್ದರು. ಇದನ್ನು ಮಾಜಿ ಆಟಗಾರರಾದ ಪ್ಯಾಟ್ ಸಿಮ್‌ಕಾಕ್ಸ್, ಬೋಟಾ ಡಿಪ್ಪೆನಾರ್, ರೂಡಿ ಸ್ಟೇನ್ ಮತ್ತು ಬ್ರಿಯಾನ್ ಮೆಕ್‌ಮಿಲನ್ ಟೀಕಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.