ETV Bharat / sports

ಸಮರ್ಥ್​, ಪಡಿಕ್ಕಲ್​ ಅರ್ಧಶತಕ ... ಸೌರಾಷ್ಟ್ರ ವಿರುದ್ಧ ಡ್ರಾ ಸಾಧಿಸಿದ ಕರ್ನಾಟಕ

410 ರನ್​ಗಳ ಬೃಹತ್​ ಮೊದಲ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಿಯೂ ಕರ್ನಾಟಕ ತಂಡ ಕೊನೆಯ ದಿನ ಯಶಸ್ವಿ ಬ್ಯಾಟಿಂಗ್ ನಡೆಸುವ ಮೂಲಕ ಇನ್ನಿಂಗ್ಸ್​ ಸೋಲಿನಿಂದ ಪಾರಾಗಿದೆ.

Karnataka wriggle out with a draw
Karnataka wriggle out with a draw
author img

By

Published : Jan 14, 2020, 7:25 PM IST

ರಾಜ್​ಕೋಟ್​: ಸೌರಾಷ್ಟ್ರ ವಿರುದ್ಧ ಫಾಲೋಆನ್​ಗೆ ತುತ್ತಾಗಿದ್ದ ಕರ್ನಾಟಕ ತಂಡ ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ ಹಾಗೂ ಆರ್​ ಸಮರ್ಥ್​ ಅವರ ಸಮಯೋಜಿತ ಬ್ಯಾಟಿಂಗ್​ ನೆರವಿನಿಂದ ಸೋಲುತಪ್ಪಿಕೊಂಡಿದೆ.

410 ರನ್​ಗಳ ಬೃಹತ್​ ಮೊದಲ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಿದ್ದ ಕರ್ನಾಟಕ ತಂಡ ಕೊನೆಯ ದಿನ ಯಶಸ್ವಿ ಬ್ಯಾಟಿಂಗ್ ನಡೆಸುವ ಮೂಲಕ ಇನ್ನಿಂಗ್ಸ್​ ಸೋಲಿನಿಂದ ಪಾರಾಗಿದೆ.

ಮೂರನೇ ದಿನ ವಿಕೆಟ್​ ನಷ್ಟವಿಲ್ಲದೆ 30 ರನ್ಗಳಸಿದ್ದ ಕರ್ನಾಟಕ ತಂಡ ಕೊನೆಯ ದಿನ 4 ಕಳೆದುಕೊಂಡು 22 ರನ್​ಗಳಿಸಿ ಡ್ರಾ ಸಾಧಿಸಿತು. ಆರಂಭಿಕ ಬ್ಯಾಟ್ಸ್​ಮನ್​ ರೋಹನ್​ ಕಡಮ್​ 132 ಎಸೆತಗಳಲ್ಲಿ 42 ರನ್​, ಸಮರ್ಥ್​ 159 ಎಸೆತಗಳಲ್ಲಿ74 ರನ್​ಗಳಿಸಿ ಔಟಾದರು.

ಸಮರ್ಥ್​ ಔಟಾದ ನಂತರ ಜವಾಬ್ದಾರಿಯುವ ಬ್ಯಾಟಿಂಗ್​ ನಡೆಸಿದ ದೇವದತ್​ ಪಡಿಕ್ಕಲ್​ ಬರೋಬ್ಬರಿ 133 ಎಸೆತಗಳೆನ್ನೆದುರಿಸಿ 53 ರನ್​ ಸಿಡಿಸಿ ಔಟಾಗದೆ ಉಳಿದರು. ಪಡಿಕ್ಕಲ್​ಗೆ ಸಾಥ್​ ನೀಡಿದ ನಾಯಕ ಶ್ರೇಯಸ್​ ಗೋಪಾಲ್​ 55 ಎಸೆತಗಳಲ್ಲಿ 13 ರನ್​ಗಳಿಸಿ ಪಂದ್ಯ ಡ್ರಾಗೊಳ್ಳುವಂತೆ ಮಾಡಿದರು. ಕೆ ಸಿದ್ದಾರ್ಥ್ 12, ಪವನ್​ ದೇಶಪಾಂಡೆ 12 ರನ್​ಗೆ ವಿಕೆಟ್ ಒಪ್ಪಿಸಿದ್ದರು.

ಸೌರಾಷ್ಟ್ರ ಪರ ದರ್ಮೇಂದ್ರ ಸಿನ್ಹ ಜಡೇಜಾ 2, ಉನಾದ್ಕಟ್​ ಹಾಗೂ ಕಮಲೇಶ್​ ಮಕ್ವಾನ ತಲಾ ಒಂದು ವಿಕೆಟ್ ಪಡೆದರು.

ಇನ್ನು ಸೌರಾಷ್ಟ್ರ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಪೂಜಾರ(248) ಅವರ ದ್ವಿಶತಕ ಹಾಗೂ ಶೆಲ್ಡಾನ್​ ಜಾಕ್ಸನ್​(161) ಶತಕದ ನೆರವಿನಿಂದ 582 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಕರ್ನಾಟಕ ತಂಡ ಕೇವಲ 171 ರನ್​ಗಳಿಗೆ ಆಲೌಟ್​ ಆಗಿತ್ತು.

ಪಂದ್ಯ ಡ್ರಾನಲ್ಲಿ ಆಂತ್ಯವಾದ್ದರಿಂದ ಮೊದಲ ಇನ್ನಿಂಗ್ಸ್​ ಮುನ್ನಡೆ ಆಧಾರದ ಮೇಲೆ ಸೌರಾಷ್ಟ್ರ 3 ಅಂಕ ಪಡೆದರೆ, ಕರ್ನಾಟಕ 1 ಅಂಕ ಪಡೆಯಿತು. ಅಲ್ಲದೆ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿಯಿತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.