ETV Bharat / sports

ಮಂಕಡ್​ ಬೇಡವೆಂದರೆ ಬೌಲರ್​ಗಳಿಗೆ 'ಫ್ರೀ ಬಾಲ್​' ಚಾನ್ಸ್​ ನೀಡಲು ಅಶ್ವಿನ್​ ಸಲಹೆ - Dinesh Karthik

ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿನೇಶ್​ ಕಾರ್ತಿಕ್​ ಮಂಕಡ್​ ನಿಯಮವಿದೆ ಎಂದಿದ್ದರು. ಅದನ್ನು ಬ್ರಾಡ್ಮನ್​ ಮತ್ತು ಸುನೀಲ್​ ಗವಾಸ್ಕರ್​ ಅಂತಹ ಮಹಾನ್​ ಕ್ರಿಕೆಟಿಗರೇ ಒಪ್ಪಿಕೊಂಡಿದ್ದಾರೆ. ಆದರೆ ಕೆಲವು ತಂಡಗಳು ಅದನ್ನು ನೆಗೆಟಿವ್​ ಆಗಿ ತೆಗೆದುಕೊಳ್ಳುತ್ತಿವೆ ಎಂದು ಉತ್ತರಿಸಿದ್ದರು.

ಮಂಕಡ್​​ ರನೌಟ್​
ರವಿ ಚಂದ್ರನ್​ ಅಶ್ವಿನ್​
author img

By

Published : Aug 24, 2020, 3:05 PM IST

ನವದೆಹಲಿ: ಮಂಕಡ್​ ಕುರಿತ ನಡೆದ ಚರ್ಚೆಯಲ್ಲಿ ಭಾರತ ತಂಡದ ಸ್ಪಿನ್ನರ್ ರವಿಚಂದ್ರನ್​ ಅಶ್ವಿನ್​, ಚೆಂಡು ಎಸೆಯುವ ಮುನ್ನವೇ ಬ್ಯಾಟ್ಸ್​ಮನ್​ಗಳು ಕ್ರೀಸ್​ ಬಿಟ್ಟು ಹೋದರೆ ಬೌಲರ್​ಗಳಿಗೆ 'ಫ್ರೀ ಬಾಲ್' ಅವಕಾಶ​ ನೀಡುವಂತೆ ಸಲಹೆ ನೀಡಿದ್ದಾರೆ.

ಈಗಾಗಲೇ ಬೌಲರ್​ಗಳು ನೋಬಾಲ್​ ಎಸೆದರೆ ನಂತರದ ಎಸೆತವನ್ನು ಫ್ರೀ ಹಿಟ್​ ಎಂದು ಪರಿಗಣಸಿ, ಆ ಎಸೆತದಲ್ಲಿ ಬ್ಯಾಟ್ಸ್​ಮನ್​ ರನ್​ ಔಟ್​ ಮಮತ್ತು ಸ್ಟಂಪ್​ ಔಟ್​ ಬಿಟ್ಟು ಬೇರೆ ಯಾವುದೇ ರೀತಿಯಲ್ಲಿ ಔಟಾದರು ಅದಕ್ಕೆ ನಾಟೌಟ್ ಎಂದು ತೀರ್ಮಾನಿಸಲಾಗಿದೆ. ಇದೀಗ ಮಂಕಡ್​​ ಮಾಡುವುದು ಬೇಡ ಎಂದಾದರೆ ಬೌಲರ್​ಗಳಿಗೂ ಫ್ರೀ ಬಾಲ್​ ಆಫರ್​ ನೀಡಬೇಕೆಂದು ಅಶ್ವಿನ್ ತಿಳಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿನೇಶ್​ ಕಾರ್ತಿಕ್​, ಮಂಕಡ್​ ನಿಯಮವಿದೆ ಎಂದಿದ್ದರು. ಅಲ್ಲದೆ ಅದನ್ನು ಬ್ರಾಡ್ಮನ್​ ಮತ್ತು ಸುನೀಲ್​ ಗವಾಸ್ಕರ್​ ಅಂತಹ ಮಹಾನ್​ ಕ್ರಿಕೆಟಿಗರೇ ಒಪ್ಪಿಕೊಂಡಿದ್ದಾರೆ. ಆದರೆ ಕೆಲವು ತಂಡಗಳು ಅದನ್ನು ನೆಗೆಟಿವ್​ ಆಗಿ ತೆಗೆದುಕೊಳ್ಳುತ್ತಿವೆ ಎಂದು ಉತ್ತರಿಸಿದ್ದರು.

  • Make it a free ball for the bowler. If the batsmen gets out of that ball, the batting team will be docked 5 runs. Free hit adds to the drama for a batter, let’s give a chance to the bowlers too. As of now everyone watches the game hoping that ‘the bowlers will get smacked today’ https://t.co/BxX8IsMgvF

    — Ashwin 🇮🇳 (@ashwinravi99) August 24, 2020 " class="align-text-top noRightClick twitterSection" data=" ">

ಅಲ್ಲದೆ, ಈ ವಿಚಾರವನ್ನು ಕಾರ್ತಿಕ್​ ತಮ್ಮ ಟ್ವಿಟ್ಟರ್​ನಲ್ಲಿ ಶೇರ್​ ಮಾಡಿಕೊಂಡು ಮಂಕಡ್​ ಬಗ್ಗೆ ತಮ್ಮ ಅಭಿಪ್ರಾಯ, ಆಲೋಚನೆಗಳನ್ನು ನೀಡಿ ಎಂದು ಅಶ್ವಿನ್​, ಹರ್ಷ ಬೊಗ್ಲೆ, ಮೆಕಲಮ್​, ಆಕಾಶ್​ ಚೋಪ್ರಾ ಸೇರಿದಂತೆ ಕೆಲವು ಕ್ರಿಕೆಟ್​ ತಜ್ಞರಿಗೆ ಟ್ಯಾಗ್​ ಮಾಡಿದ್ದರು.

ಇದಕ್ಕೆ ಉತ್ತರಿಸಿರುವ ಅಶ್ವಿನ್​, ಬ್ಯಾಟ್ಸ್​ಮನ್​ಗಳು ಕ್ರೀಸ್​ ಬಿಟ್ಟು ಹೋಗಿರುವುದು ಖಚಿತವಾದರೆ, ಅದನ್ನು ಫ್ರೀ ಬಾಲ್​ ಎಂದು ತೀರ್ಪು ನೀಡಲಿ, ಜೊತೆಗೆ ಆ ಎಸೆತದಲ್ಲಿ ಬ್ಯಾಟ್ಸ್​ಮನ್​ ಔಟಾದರೆ ತಂಡದಿಂದ 5 ರನ್​ ಕಡಿತಗೊಳಿಸಬೇಕು. ಫ್ರೀ ಹಿಟ್​ ಎಂಬುದು ಬ್ಯಾಟ್ಸ್​ಮನ್​ಗಳಿಗೂ ಅನುಕೂಲವಾಗುವ ಹಾಗೆ ಬೌಲರ್​ಗಳಿಗೂ ಅನುಕೂಲಕರವಾದ ಒಂದು ಅವಕಾಶ ಕೊಡಬಹುದು. ಏಕೆಂದರೆ ಕ್ರಿಕೆಟ್​ ನೋಡುವವರೆಲ್ಲಾ ಬೌಲರ್​ಗಳು ದಂಡನೆಗೊಳಗಾಗುತ್ತಾರೆ ಎಂಬ ಆಶಯದಲ್ಲಿರುತ್ತಾರೆ ಎಂದು ಅಶ್ವಿನ್​ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್​ ಕೋಚ್ ರಿಕಿ ಪಾಂಟಿಂಗ್​ ​ಕಳೆದ ವಾರ ಅಶ್ವಿನ್​ಗೆ ಮಂಕಡ್​ ಮಾಡದಂತೆ ಮಾತುಕತೆ ಮೂಲಕ ಸೂಚನೆ ನೀಡುತ್ತೇವೆ. ಅದು ಕ್ರೀಡಾ ಸ್ಫೂರ್ತಿಯಿಂದ ಒಳ್ಳೆಯದಲ್ಲ ಎಂದು ತಿಳಿಸಿದ ಬೆನ್ನಲ್ಲೇ ಈ ರೀತಿಯ ಚರ್ಚೆ ಶುರುವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.