ಬ್ರಿಸ್ಬೇನ್: 4ನೇ ಟೆಸ್ಟ್ಗಾಗಿ ಮತ್ತೊಮ್ಮೆ ಕ್ವಾರಂಟೈನ್ ಆಗುವುದು ಕಷ್ಟ, ಬೇಕಿದ್ದರೆ ಆಸ್ಟ್ರೇಲಿಯಾದ ಯಾವುದೇ ನೆಲದಲ್ಲಾದರೂ ಅಥವಾ ಒಂದೇ ಕ್ರೀಡಾಂಗಣದಲ್ಲಿ 2 ಪಂದ್ಯಗಳನ್ನು ಆಡಲು ನಾವು ಸಿದ್ಧರಿದ್ದೇವೆ ಎಂದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಬ್ರಿಸ್ಬೇನ್ ಟೆಸ್ಟ್ಗೂ ಮುನ್ನ ಕ್ವಾರಂಟೈನ್ ಆಗಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿತ್ತು.
ಭಾರತ ತಂಡ 3 ತಿಂಗಳಿನಿಂದ ಬಯೋ ಬಬಲ್ನಲ್ಲಿದೆ. ಮೊದಲು ಐಪಿಎಲ್ಗಾಗಿ ದುಬೈನಲ್ಲಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿದೆ. ಇದೀಗ 4ನೇ ಟೆಸ್ಟ್ಗಾಗಿ ಬ್ರಿಸ್ಬೇನ್ಗೆ ತೆರಳಬೇಕಿರುವ ಆಟಗಾರರಿಗೆ ಅಲ್ಲೂ ಕೂಡ 14 ದಿನಗಳ ಕ್ವಾರಂಟೈನ್ ಆಗಬೇಕೆಂದು ಅಲ್ಲಿನ ಸರ್ಕಾರ ಆದೇಶಿಸಿದೆ.
ಆದರೆ ಇದಕ್ಕೆ ಭಾರತ ತಂಡ ಒಪ್ಪದಿರುವುದಕ್ಕೆ ಕ್ವೀನ್ಸ್ಲ್ಯಾಂಡ್ ಸರ್ಕಾರ ನಿಯಮ ಪಾಲನೆ ಮಾಡದಿದ್ದರೆ ನೀವು ಬರುವುದೇ ಬೇಡ ಎಂದು ಟೀಂ ಇಂಡಿಯಾಗೆ ತಿರುಗೇಟು ನೀಡಿದೆ.
-
Today I was asked about reports the Indian Cricket Team wants quarantine restrictions eased just for them, ahead of the upcoming Gabba Test. My response 👇 #Cricket #IndiavsAustralia @ICC @CricketAus pic.twitter.com/MV7W0rIntM
— Ros Bates MP (@Ros_Bates_MP) January 3, 2021 " class="align-text-top noRightClick twitterSection" data="
">Today I was asked about reports the Indian Cricket Team wants quarantine restrictions eased just for them, ahead of the upcoming Gabba Test. My response 👇 #Cricket #IndiavsAustralia @ICC @CricketAus pic.twitter.com/MV7W0rIntM
— Ros Bates MP (@Ros_Bates_MP) January 3, 2021Today I was asked about reports the Indian Cricket Team wants quarantine restrictions eased just for them, ahead of the upcoming Gabba Test. My response 👇 #Cricket #IndiavsAustralia @ICC @CricketAus pic.twitter.com/MV7W0rIntM
— Ros Bates MP (@Ros_Bates_MP) January 3, 2021
"ಭಾರತೀಯರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡಲು ಸಿದ್ಧರಿರದಿದ್ದರೆ ಇಲ್ಲಿಗೆ ಬರುವುದೇ ಬೇಡ" ಎಂದು ಕ್ವೀನ್ಸ್ಲ್ಯಾಂಡ್ಸ್ನ ಆರೋಗ್ಯ ಸಚಿವೆ ರೀಸ್ ಬೇಟ್ಸ್ ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ಮೂರನೇ ಟೆಸ್ಟ್ ಜನವರಿ 7ರಿಂದ 11ರವರೆಗೆ ಸಿಡ್ನಿಯಲ್ಲಿ ನಡೆಯಲಿದೆ. 4ನೇ ಟೆಸ್ಟ್ ಜನವರಿ 15ರಿಂದ 19ರವರೆಗೆ ನಡೆಯಲಿದೆ. ಆದರೆ ಈ ಪಂದ್ಯ ಎಲ್ಲಿ ನಡೆಯಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಇದನ್ನೂ ಓದಿ: ನಾಲ್ಕನೇ ಪಂದ್ಯ ಸ್ಥಳಾಂತರ ಖಂಡಿಸಿದ ಮ್ಯಾಥ್ಯೂ ವೇಡ್