ಪಂಜಾಬ್: ಟೀಂ ಇಂಡಿಯಾ ಕಂಡ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಯುವರಾಜ್ ಸಿಂಗ್ ಕೂಡ ಒಬ್ಬರು. ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿರುವ ಈ ಪ್ಲೇಯರ್ 2019ರಲ್ಲಿ ಎಲ್ಲ ಮಾದರಿ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಆದರೆ ಇದೀಗ ಪಂಜಾಬ್ ಕ್ರಿಕೆಟ್ ಮಂಡಳಿ ಅವರ ಬಳಿ ವಿಶೇಷ ಮನವಿ ಮಾಡಿಕೊಂಡಿದೆ.
ನೀವೂ ನೀಡಿರುವ ನಿವೃತ್ತಿ ಹಿಂಪಡೆದು, ರಾಜ್ಯ ತಂಡದ ಆಟಗಾರ ಹಾಗೂ ಮೆಂಟರ್ ಆಗಿ ಸೇವೆ ಸಲ್ಲಿಸುವಂತೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಅವರ ಬಳಿ ಮನವಿ ಮಾಡಿಕೊಂಡಿದೆ. ಆದರೆ ಇದಕ್ಕೆ ಯುವರಾಜ್ ಸಿಂಗ್ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವರ್ಷ ನಿವೃತ್ತಿ ಪಡೆದುಕೊಂಡಿರುವ ಸಿಕ್ಸರ್ ಕಿಂಗ್, ಈಗಾಗಲೇ ಶುಬ್ಮನ್ ಗಿಲ್ ಸೇರಿದಂತೆ ಕೆಲ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹೀಗಾಗಿ ಪಿಸಿಎ ಕಾರ್ಯದರ್ಶಿ ಪುನೀತ್ ಬಾಲಿ ಈ ವಿನಂತಿ ಮಾಡಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರು ಪುನೀತ್ ಬಾಲಿ, ಕಳೆದ ಐದು ದಿನಗಳ ಹಿಂದೆ ಯುವರಾಜ್ ಬಳಿ ನಾವು ಮನವಿ ಮಾಡಿಕೊಂಡಿದ್ದೇವೆ. ಸದ್ಯ ಅವರ ಪ್ರತಿಕ್ರಿಯೆಗೋಸ್ಕರ ಕಾಯುತ್ತಿದ್ದೇವೆ. ಅವರು ತಂಡದ ಪರ ಆಡಲು ಹಾಗೂ ಮಾರ್ಗದರ್ಶನ ನೀಡಲು ಮುಂದಾದರೆ ನಿಜಕ್ಕೂ ಪಂಜಾಬ್ ಕ್ರಿಕೆಟ್ಗೆ ಒಳ್ಳೆಯದಾಗಲಿದೆ ಎಂದಿದ್ದಾರೆ.
ಯುವರಾಜ್ ಸಿಂಗ್ ಕಳೆದ ವರ್ಷ ಗ್ಲೋಬಲ್ ಟಿ-20 ಹಾಗೂ ಅಬುಧಾಬಿಯಲ್ಲಿ ನಡೆದ ಟಿ-10 ಲೀಗ್ನಲ್ಲಿ ಆಡಿದ್ದಾರೆ. 2011ರ ವಿಶ್ವಕಪ್ ವಿಜೇತ ತಂಡದ ಪ್ರಮುಖ ಪ್ಲೇಯರ್ ಆಗಿದ್ದ ಯುವಿ, 2003 ಮತ್ತು 2017ರ ನಡುವೆ 40 ಟೆಸ್ಟ್ ಹಾಗೂ 304 ಏಕದಿನ ಪಂದ್ಯಗಳನ್ನಾಡಿದ್ದಾರೆ.