ETV Bharat / sports

ಅಬುಧಾಬಿ ಟಿ-10 ಲೀಗ್: ಪದಾರ್ಪಣೆಗೆ ಸಜ್ಜಾದ ಪುಣೆ ಡೆವಿಲ್ಸ್​ - ಟಿ10 ಲೀಗ್​ನಲ್ಲಿ ಪುಣೆ ಡೆವಿಲ್ಸ್ ತಂಡ

ಐಸಿಸಿ ಅನುಮೋದನೆ ಮಾಡಿದ ಏಕೈಕ ಟಿ-10 ಕ್ರಿಕೆಟ್ ಪಂದ್ಯಾವಳಿಯ ನಾಲ್ಕನೇ ಆವೃತ್ತಿಯಲ್ಲಿ ಪುಣೆ ಡೆವಿಲ್ಸ್ ಪದಾರ್ಪಣೆ ಮಾಡಲು ಸಜ್ಜಾಗಿದೆ.

Pune Devils to debut in 2021 Abu Dhabi T10 league
ಅಬುಧಾಬಿ ಟಿ10 ಲೀಗ್
author img

By

Published : Dec 18, 2020, 3:12 PM IST

ದುಬೈ: ಅಬುಧಾಬಿಯಲ್ಲಿ 2021 ರ ಜನವರಿ 28 ರಿಂದ ಪ್ರಾರಂಭವಾಗಲಿರುವ ಅಬುಧಾಬಿ ಟಿ-10 ಲೀಗ್‌ನ ನಾಲ್ಕನೇ ಆವೃತ್ತಿಯಲ್ಲಿ ಪುಣೆ ಡೆವಿಲ್ಸ್ ಪದಾರ್ಪಣೆ ಮಾಡಲು ಸಜ್ಜಾಗಿದೆ.

ಅಬುಧಾಬಿ ಟಿ10, ಐಸಿಸಿ ಅನುಮೋದನೆ ಮಾಡಿದ ಏಕೈಕ ಟಿ-10 ಕ್ರಿಕೆಟ್ ಪಂದ್ಯಾವಳಿಯಾಗಿದೆ. ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಜಾಂಟಿ ರೋಡ್ಸ್, ಪುಣೆ ಡೆವಿಲ್ಸ್ ತಂಡ ಕೋಚ್ ಆಗಿದ್ದಾರೆ. ಶ್ರೀಲಂಕಾದ ಪ್ರಮುಖ ಆಲ್​ರೌಂಡರ್ ಆಟಗಾರ ತಿಸಾರ ಪೆರೆರಾ, ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಪುಣೆ ಡೆವಿಲ್ಸ್ ತಂಡದಲ್ಲಿದ್ದಾರೆ.

ತಮ್ಮ ಹೊಸ ಜವಾಬ್ದಾರಿಯ ಕುರಿತು ಮಾತನಾಡಿದ ರೋಡ್ಸ್, "ಪುಣೆ ಡೆವಿಲ್ಸ್‌ನ ಮುಖ್ಯ ತರಬೇತುದಾರನಾಗಿ ಆಯ್ಕೆಯಾಗಿದ್ದಕ್ಕೆ ನಿಜವಾಗಿಯೂ ಉತ್ಸುಕನಾಗಿದ್ದೇನೆ. ಮುಂಬರುವ ಉತ್ತಮ ಸೀಸನ್​ ಅನ್ನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

ಪುಣೆ ಡೆವಿಲ್ಸ್‌ಗೆ ಸೇರ್ಪಡೆಯಾದ ಪೆರೆರಾ, "ಅಬುಧಾಬಿಯಲ್ಲಿ ಮುಂಬರುವ ಟಿ-10 ಪಂದ್ಯಾವಳಿಯಲ್ಲಿ ಆಟವಾಡಲು ಉತ್ಸುಕನಾಗಿದ್ದು, ಪುಣೆ ಡೆವಿಲ್ಸ್‌ನ ಭಾಗವಾಗಲು ಎದುರು ನೋಡುತ್ತಿದ್ದೇನೆ"

ಪ್ರಕಟಣೆ ಕುರಿತು ಮಾತನಾಡಿದ ಪುಣೆ ಡೆವಿಲ್ಸ್‌ನ ಸಹ-ಮಾಲೀಕ ಕ್ರಿಶನ್ ಕುಮಾರ್ ಚೌಧರಿ, "ವಿಶ್ವದ ಕೆಲವು ದೊಡ್ಡ ಆಟಗಾರರು ಆಡುವ ತ್ವರಿತ ಮತ್ತು ರೋಚಕ ಕ್ರಿಕೆಟ್ ಪಂದ್ಯಾವಳಿಯ ಭಾಗವಾಗಿರುವುದಕ್ಕೆ ರೋಮಾಂಚನವಾಗಿದೆ. ನಮ್ಮ ಮುಖ್ಯ ತರಬೇತುದಾರರಾಗಿ ಜಾಂಟಿ ರೋಡ್ಸ್ ಅವರೊಂದಿಗೆ ತಿಸಾರ ಪರೆರಾ ಮತ್ತು ಅಮೀರ್ ಅವರಂತ ಉತ್ತಮ ಆಟಗಾರರನ್ನು ಹೊಂದಿದ್ದು, ಅಬುಧಾಬಿ ಟಿ-10 ಟೂರ್ನಿಯ ಹೊಸ ಸೀಸನ್​ಗಾಗಿ ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.

ಪುಣೆ ಡೆವಿಲ್ಸ್ ಭಾರತೀಯ ಚಲನಚಿತ್ರ ನಿರ್ಮಾಪಕರಾದ ಕ್ರಿಶನ್ ಕುಮಾರ್ ಚೌಧರಿ ಮತ್ತು ಪರಾಗ್ ಸಂಘ್ವಿ ಅವರ ಸಹ-ಒಡೆತನದಲ್ಲಿದೆ. ಟಿ-10 ಲೀಗ್​ನ ನಾಲ್ಕನೇ ಆವೃತ್ತಿ 2021ರ ಜನವರಿ 28 ರಿಂದ ಫೆಬ್ರವರಿ 6 ರವರೆಗೆ ಅಬುಧಾಬಿಯ ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.