ಮೆಲ್ಬೋರ್ನ್: ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಚೇತೇಶ್ವರ್ ಪೂಜಾರಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವುದು ತುಂಬಾ ಕಠಿಣ ಎಂದು ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.
ಮೂರನೇಯ ಕ್ರಮಾಂಕದಲ್ಲಿ ಪುಜಾರ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 2018-19ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ದಾಖಲಿಸಿತ್ತು.
ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಾವ ಬ್ಯಾಟ್ಸ್‌ಮನ್‌ಗೆ ಬೌಲಿಂಗ್ ಮಾಡಲು ಕಠಿಣವಾಗಿದೆ ಎಂದು ಕೇಳಿದಾಗ ಕಮ್ಮಿನ್ಸ್, ದುರದೃಷ್ಟವಶಾತ್ ಆ ಪಟ್ಟಿಯಲ್ಲಿ ಬಹಳಷ್ಟು ಮಂದಿ ಇದ್ದಾರೆ. ಆದರೆ ನಾನು ಬೇರೆಯವ ಹೆಸರು ತೆಗೆದುಕೋಳ್ಳುತ್ತೇನೆ. ಅವರೇ ಭಾರತದ ಆಟಗಾರ ಚೇತೇಶ್ವರ್ ಪೂಜಾರ. ಅವರು ನಮ್ಮ ತಂಡಕ್ಕೆ 'ಬೆನ್ನು ನೋವು' ಎಂದು ಕಮ್ಮಿನ್ಸ್ ಹೇಳಿದ್ದಾರೆ.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಲು ಭಾರತಕ್ಕೆ ನೆರವಾದ ಪೂಜಾರ ಅವರು ಮೂರು ಶತಕ ಮತ್ತು ಅರ್ಧಶತಕದೊಂದಿಗೆ 74ಕ್ಕಿಂತ ಹೆಚ್ಚು ಸರಾಸರಿಯಲ್ಲಿ 521 ರನ್ ಗಳಿಸಿದರು. ಪೂಜಾರರನ್ನು ಮೈದಾನದಿಂದ ಹೊರ ಹಾಕಲು ಆಸ್ಟ್ರೇಲಿಯಾ ಬೌಲರ್‌ಗಳು ಎದುರಿಸಿದ ಕಷ್ಟವನ್ನು ಕಮ್ಮಿನ್ಸ್ ನೆನಪಿಸಿಕೊಂಡರು.