ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಜನವರಿ 7ರಿಂದ ಟೀಂ ಇಂಡಿಯಾ 3ನೇ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಲು ತಯಾರಿ ನಡೆಸಿದ್ದು, ಇದರ ಮಧ್ಯೆ ರಹಾನೆ ಪಡೆಗೆ ಮತ್ತೊಂದು ಚಿಂತೆ ಎದುರಾಗಿದೆ.
ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರಾ ನೆಟ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.
ಈಗಾಗಲೇ ಟೀಂ ಇಂಡಿಯಾದ ವೇಗಿಗಳಾದ ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ಗಾಯಗೊಂಡು ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಇದರ ಮಧ್ಯೆ ಪೂಜಾರಾ ಗಾಯಗೊಂಡಿರುವುದು ತಂಡಕ್ಕೆ ಮತ್ತಷ್ಟು ತಲೆನೋವಾಗಿದೆ.
-
Pujara just copped a blow on his right hand in the nets and has now gone inside. #AUSvIND pic.twitter.com/PHoRAV4aIt
— Melinda Farrell (@melindafarrell) January 2, 2021 " class="align-text-top noRightClick twitterSection" data="
">Pujara just copped a blow on his right hand in the nets and has now gone inside. #AUSvIND pic.twitter.com/PHoRAV4aIt
— Melinda Farrell (@melindafarrell) January 2, 2021Pujara just copped a blow on his right hand in the nets and has now gone inside. #AUSvIND pic.twitter.com/PHoRAV4aIt
— Melinda Farrell (@melindafarrell) January 2, 2021
ಚೆಂಡು ಬಲಗೈಗೆ ಬಡಿದಿರುವ ಕಾರಣ ಅವರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಜತೆಗೆ ಅವರು ಅಭ್ಯಾಸ ಮೊಟಕುಗೊಳಿಸಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಟೀಂ ಇಂಡಿಯಾ ಅಭ್ಯಾಸ ನಡೆಸುತ್ತಿದ್ದ ವೇಳೆ ಆಸ್ಟ್ರೇಲಿಯಾದ ವರದಿಗಾರನೋರ್ವ ಚೇತೇಶ್ವರ್ ಪೂಜಾರಾ ಗಾಯಗೊಂಡಿರುವ ಸುದ್ದಿ ಬಗ್ಗೆ ಮಾಹಿತಿ ಶೇರ್ ಮಾಡಿದ್ದಾರೆ. ಹಿಂದಿನ ಎರಡು ಟೆಸ್ಟ್ ಪಂದ್ಯಗಳಿಂದ ಪೂಜಾರಾ ಕೇವಲ 63ರನ್ಗಳಿಕೆ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದಿರುವ ಎರಡು ಪಂದ್ಯಗಳಲ್ಲಿ ಈಗಾಗಲೇ ಉಭಯ ತಂಡಗಳು ತಲಾ 1-1ರಲ್ಲಿ ಗೆಲುವು ಸಾಧಿಸಿದ್ದು, ಸರಣಿ ಗೆಲುವ ಉದ್ದೇಶದಿಂದ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ತಂಡಗಳು ಸೆಣಸಾಟ ನಡೆಸಲಿವೆ.
ಓದಿ: ಸಿಡ್ನಿ ಟೆಸ್ಟ್: ಗಾಯಾಳು ಉಮೇಶ್ ಜಾಗಕ್ಕೆ ವೇಗಿ ನಟರಾಜನ್ ಆಯ್ಕೆ
ವೇಗಿ ಉಮೇಶ್ ಯಾದವ್ ಗಾಯಗೊಂಡಿರುವ ಕಾರಣ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಉದಯೋನ್ಮುಖ ವೇಗದ ಬೌಲರ್ ನಟರಾಜನ್ ಆಯ್ಕೆಯಾಗಿದ್ದಾರೆ.