ETV Bharat / sports

ವರ್ಣಭೇದ ನೀತಿ: ಕೌಂಟಿಯಲ್ಲಿ ಆಡುವಾಗ ಪೂಜಾರರನ್ನು ಆಂಗ್ಲರು ಆ ಹೆಸರಿನಿಂದ ಕರೆಯುತ್ತಿದ್ರಂತೆ! - ಯಾರ್ಕ್​ಷೈರ್ ಕ್ರಿಕೆಟ್ ಕ್ಲಬ್​

ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ 2015 ಮತ್ತು 2018ರಲ್ಲಿ ಯಾರ್ಕ್​ಷೈರ್​ ತಂಡದ ಪರ ಕೌಂಟಿ ಕ್ರಿಕೆಟ್​ನಲ್ಲಿ ಆಡಿದ್ದರು. ಯಾರ್ಕ್​ಷೈರ್​ನಲ್ಲಿ ಆಡುವ ಸಂದರ್ಭದಲ್ಲಿ ಪೂಜಾರ ಕೂಡ ಜನಾಂಗೀಯ ನಿಂದನಗೆ ಒಳಗಾಗಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಭಟ್​ ಬಿಚ್ಚಿಟ್ಟಿದ್ದಾರೆ.

ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ
author img

By

Published : Dec 5, 2020, 8:19 PM IST

ನವದೆಹಲಿ: ಕಳೆದು ಕೆಲವು ತಿಂಗಳಿನಿಂದ ವಿಶ್ವದಲ್ಲೆ ಕೇಳಿ ಬರುತ್ತಿರುವ ವರ್ಣಭೇದ ನಿಂದನೆ ಕ್ರಿಕೆಟ್​ಗೂ ಅಂಟಿಕೊಂಡಿದ್ದು, ಆಂಗ್ಲರ ನಾಡಿನಲ್ಲಿ ಭಾರತೀಯ ಸ್ಟಾರ್​ ಬ್ಯಾಟ್ಸ್​ಮನ್ ಚೇತೇಶ್ವರ್ ಪೂಜಾರ ಕೂಡ ಜನಾಂಗೀಯ ನಿಂದನೆಗೆ ಒಳಗಾಗಿದ್ದರು ಎಂದು ಯಾರ್ಕ್​ಷೈರ್​ ಕ್ಲಬ್​ನಿಂದ ಹೊರಬಂದಿರುವ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಯಾರ್ಕ್​ಷೈರ್​ ಕ್ಲಬ್​ನಲ್ಲಿ ತಾವೂ ವರ್ಣಭೇದ ನಿಂದನೆಗೆ ಒಳಗಾಗಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಅಜೀಮ್​​ ರಫೀಕ್​​​ ಈ ಹೇಳಿಕೆ ನೀಡಿದ್ದಾರೆ. ಇವರ ಆರೋಪಕ್ಕೆ ಕೆಲವು ಸಿಬ್ಬಂದಿ ಹಾಗೂ ಮಾಜಿ ಕ್ರಿಕೆಟಿಗರೂ ಕೂಡ ಸಾಕ್ಷಿ ಒದಗಿಸಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ 2015 ಮತ್ತು 2018ರಲ್ಲಿ ಯಾರ್ಕ್​ಷೈರ್​ ತಂಡದ ಪರ ಕೌಂಟಿ ಕ್ರಿಕೆಟ್​ನಲ್ಲಿ ಆಡಿದ್ದರು. ಯಾರ್ಕ್​ಷೈರ್​ನಲ್ಲಿ ಆಡುವ ಸಂದರ್ಭದಲ್ಲಿ ಪೂಜಾರ ಕೂಡ ಜನಾಂಗೀಯ ನಿಂದನಗೆ ಒಳಗಾಗಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಯಾರ್ಕ್​ಷೈರ್​ ಮತ್ತೊಬ್ಬ ಉದ್ಯೋಗಿ ತಾಜ್​ ಭಟ್​ ಬಹಿರಂಗಪಡಿಸಿದ್ದಾರೆ.

" ಅಲ್ಲಿನ(ಯಾರ್ಕ್​ಷೈರ್​ ಕ್ಲಬ್​) ಟ್ಯಾಕ್ಸಿ ಚಾಲಕರು ಮತ್ತು ರಸ್ಟೋರೆಂಟ್​ ಕೆಲಸಗಾರರು ಏಷ್ಯಾದ ಸಮುದಾಯವನ್ನು ವರ್ಣದ ಆಧಾರದ ಮೇಲೆ 'ಸ್ಟೀವ್' ಎಂದು ಕರೆಯುತ್ತಿದ್ದರು. ಇದರಿಂದ ಸಾಗರೋತ್ತರ ವೃತ್ತಿಪರರಾಗಿ ಕ್ಲಬ್​ ಸೇರಿಕೊಂಡಿದ್ದ ಭಾರತದ ಚೇತೇಶ್ವರ್ ಪೂಜಾರರನ್ನು ಕೂಡ ಸ್ಟೀವ್ ಎಂದು ಕರೆಯಲಾಗಿತ್ತು. ಏಕೆಂದರೆ ಅವರ ಹೆಸರನ್ನು ಉಚ್ಚರಿಸಲು ಅವರಿಗೆ ಸಾಧ್ಯವಾಗಲಿಲ್ಲ" ಎಂದು ಯಾರ್ಕ್​ಷೈರ್​ ಕ್ಲಬ್​ನ ಉದ್ಯೋಗಿಗಳಲ್ಲಿ ಒಬ್ಬರಾದ ಭಟ್​, ಮಂಚೂಣಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಯಾರ್ಕ್​ಷೈರ್​ ಕ್ರಿಕೆಟ್​ ಸಂಸ್ಥೆಗೆ ಸೇರಿಕೊಂಡಿದ್ದ ಭಟ್​ ಕ್ಲಬ್​ನಲ್ಲಿ ತಮ್ಮನ್ನು ಕುರಿತು ಬಳಸುತ್ತಿದ್ದ ಭಾಷೆಗೆ ಬೇಸತ್ತು ಉದ್ಯೋಗಕ್ಕೆ ಸೇರಿದ 6 ವಾರಗಳಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಇನ್ನು ಭಟ್ ಮಾಡಿರುವ ಆರೋಪಕ್ಕೆ ಬೆಂಬಲ ಸೂಚಿಸಿರುವ ಅದೇ ಕ್ಲಬ್​ನಲ್ಲಿ ಆಡಿರುವ ವೆಸ್ಟ್​ ಇಂಡೀಸ್ ತಂಡದ ಮಾಜಿ ವೇಗಿ ಟಿನೋ ಬೆಸ್ಟ್​ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಾಣಾ ನವೀದ್ ಉಲ್ ಹಸನ್​ ಕೂಡ ಸಾಕ್ಷ್ಯ ನುಡಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.