ETV Bharat / sports

ಫೆಬ್ರವರಿ 20ರಿಂದ ಪಿಎಸ್​ಎಲ್​ ಆರಂಭ, ಮಾರ್ಚ್​ 22ರಂದು ಫೈನಲ್ : ಪಿಸಿಬಿ​

ಪಾಕಿಸ್ತಾನಕ್ಕೆ ಬಂದ ನಂತರ ವಿದೇಶಿಗರಿಗೆ 2 ಪಿಸಿಆರ್​ ಟೆಸ್ಟ್​ನಲ್ಲಿ ನೆಗೆಟಿವ್ ತೆಗೆದುಕೊಳ್ಳಬೇಕಿದೆ. ನಂತರ 5 ದಿನಗಳ ಕಾಲ ಐಸೊಲೇಶನ್​ನಲ್ಲಿರಬೇಕಿರುತ್ತದೆ. ಮೊದಲ ಮತ್ತು 4ನೇ ದಿನ ಆರ್​ಟಿ ಪಿಸಿಆರ್​ ಟೆಸ್ಟ್​ಗೆ ಒಳಗಾಗಬೇಕಿದೆ ಎಂದು ಪಿಸಿಬಿ ಹೇಳಿಕೆ ಬಿಡುಗಡೆ ಮಾಡಿದೆ.​.

ಪಾಕಿಸ್ತಾನ ಸೂಪರ್ ಲೀಗ್​
ಪಾಕಿಸ್ತಾನ ಸೂಪರ್ ಲೀಗ್​
author img

By

Published : Jan 9, 2021, 8:26 PM IST

ಲಾಹೋರ್​ : ಪಾಕಿಸ್ತಾನ ಸೂಪರ್ ಲೀಗ್​ನ 6ನೇ ಆವೃತ್ತಿ ಫೆಬ್ರವರಿ 20ರಿಂದ ಆರಂಭವಾಗಲಿದೆ. 6 ಫ್ರಾಂಚೈಸಿಗಳು ಭಾಗವಹಿಸುವ ಈ ಟೂರ್ನಿಯಲ್ಲಿ 34 ಪಂದ್ಯಗಳು 30 ದಿನಗಳ ಕಾಲ ನಡೆಯಲಿದೆ ಎಂದು ಪಿಸಿಬಿ ಶುಕ್ರವಾರ ತಿಳಿಸಿದೆ.

ಕಳೆದ ವರ್ಷ ಮುಲ್ತಾನ್ ಮತ್ತು ರಾವಲ್ಪಿಂಡಿಯಲ್ಲಿ ಟೂರ್ನಿ ನಡೆದಿತ್ತು. ಈ ಬಾರಿ ಕರಾಚಿ ಮತ್ತು ಲಾಹೋರ್​ನಲ್ಲಿ ಟೂರ್ನಿ ಆಯೋಜನೆಗೊಳ್ಳಲಿದೆ. ಫೈನಲ್ ಪಂದ್ಯ ಮಾರ್ಚ್ 22ರಂದು ನಡೆಯಲಿದೆ.

ಕೋವಿಡ್​-19 ಸಾಂಕ್ರಾಮಿಕದ ಮಧ್ಯೆ ಟೂರ್ನಮೆಂಟ್‌ನ ಸುರಕ್ಷಿತ ವಾತಾವರಣದಲ್ಲಿ ನಡೆಸಲು ಪಿಸಿಬಿ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಂಡಿದೆ. ಹಾಗಾಗಿ, ಲೀಗ್​ಗೆ ಆಗಮಿಸುವ ಎಲ್ಲಾ ವಿದೇಶಿ ಆಟಗಾರರು ಫೆಬ್ರವರಿ 15ರೊಳಗೆ ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರಗಳೊಂದಿಗೆ ಪಾಕಿಸ್ತಾನಕ್ಕೆ ಪ್ರವೇಶಿಸುವಂತೆ ಕೇಳಿ ಕೊಂಡಿದ್ದಾರೆ.

ಪಾಕಿಸ್ತಾನಕ್ಕೆ ಬಂದ ನಂತರ ವಿದೇಶಿಗರಿಗೆ 2 ಪಿಸಿಆರ್​ ಟೆಸ್ಟ್​ನಲ್ಲಿ ನೆಗೆಟಿವ್ ತೆಗೆದುಕೊಳ್ಳಬೇಕಿದೆ. ನಂತರ 5 ದಿನಗಳ ಕಾಲ ಐಸೊಲೇಶನ್​ನಲ್ಲಿರಬೇಕಿರುತ್ತದೆ. ಮೊದಲ ಮತ್ತು 4ನೇ ದಿನ ಆರ್​ಟಿ ಪಿಸಿಆರ್​ ಟೆಸ್ಟ್​ಗೆ ಒಳಗಾಗಬೇಕಿದೆ ಎಂದು ಪಿಸಿಬಿ ಹೇಳಿಕೆ ಬಿಡುಗಡೆ ಮಾಡಿದೆ.​

ಪಂದ್ಯ ಮೊದಲಾರ್ಧ ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ್ರೆ, ದ್ವಿತೀಯಾರ್ಧ ಮತ್ತು ಪ್ಲೇಆಫ್ ಪಂದ್ಯಗಳು ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಲೀಗ್​ಗೆ ಪ್ರೇಕ್ಷಕರ ವೀಕ್ಷಣೆಗೆ ಅವಕಾಶ ನೀಡಬೇಕೆ ಎಂಬುದನ್ನು ಟೂರ್ನಿ ಹತ್ತಿರವಾಗುತ್ತಿದ್ದಂತೆ ಮಾಹಿತಿ ನೀಡತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.