ಲಾಹೋರ್: 2021ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ನ ಪ್ಲೇಯರ್ ಡ್ರಾಫ್ಟ್ ಪ್ರಕ್ರಿಯೆ ಭಾನುವಾರ ನಡೆಯಲಿದ್ದು, ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್, ಇಂಗ್ಲೆಂಡ್ನ ಡೇವಿಡ್ ಮಲನ್ ಸೇರಿದಂತೆ ಸುಮಾರು 400 ವಿದೇಶಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
10 ಕ್ರಿಕೆಟ್ ಆಡುವ ರಾಷ್ಟ್ರಗಳಿಂದ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಭಾನುವಾರ 2021ರ ಪ್ಲೇಯರ್ ಡ್ರಾಫ್ಟ್ ನಡೆಯಲಿದೆ. ಐಪಿಎಲ್ ನಂತರ ಹೆಚ್ಚು ಆಕರ್ಷಣೀಯವಾಗಿರುವ ಪಿಎಸ್ಎಲ್ನಲ್ಲಿ ಆಡುವುದಕ್ಕೆ ವೆಸ್ಟ್ ಇಂಡೀಸ್ನ ನೂರಾರು ಕ್ರಿಕೆಟಿಗರು ತಮ್ಮ ಹೆಸರನ್ನು ನೀಡಿದ್ದು, ಅದರಲ್ಲಿ ಯೂನಿವರ್ಸಲ್ ಬಾಸ್ ಖ್ಯಾತಿಯ 41 ವರ್ಷದ ಕ್ರಿಸ್ ಗೇಲ್ ಕೂಡ ಇದ್ದಾರೆ. ಗೇಲ್ ಕೊನೆಯ ಬಾರಿ ಕರಾಚಿ ಕಿಂಗ್ಸ್ ಪರ 2017ರಲ್ಲಿ ಆಡಿದ್ದರು.
ಕ್ರಿಸ್ ಗೇಲ್ ಹೊರೆತುಪಡಿಸಿದರೆ ಐಸಿಸಿ ಟಿ-20 ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಡೇವಿಡ್ ಮಲನ್, ಮೊಯಿನ್ ಅಲಿ, ಟಾಮ್ ಬಾಂಟಮ್, ಕ್ರಿಸ್ ಜೋರ್ಡನ್, ರವಿ ಬೊಪೆರಾ, ಲಿಯಾಮ್ ಪ್ಲಂಕೇಟ್, ಪೀಟರ್ ಸಾಲ್ಟ್, ಬೆನ್ ಡಕ್ಕೆಟ್, ಸಮಿತ್ ಪಟೇಲ್ ಕೂಡ ಲಿಸ್ಟ್ನಲ್ಲಿದ್ದಾರೆ. ಆದರೆ ಇದರಲ್ಲಿ ಕೆಲವರು ರಾಷ್ಟ್ರೀಯ ತಂಡದ ಪರ ಆಡಬೇಕಿರುವುದರಿಂದ ಇವರು ಪೂರ್ತಿ ಲೀಗ್ನಲ್ಲಿ ಆಡುವುದಿಲ್ಲ ಎಂದು ತಿಳಿದು ಬಂದಿದೆ.
ಅಫ್ಘಾನಿಸ್ತಾನದ ರಶೀದ್ ಖಾನ್, ಮುಜೀಬ್ ಸೇರಿದಂತೆ 38 ಮಂದಿ, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್, ಮಾರ್ನ್ ಮಾರ್ಕೆಲ್ ಹಾಗೂ ಡೇಲ್ ಸ್ಟೈನ್, ಬಾಂಗ್ಲಾದೇಶದ ಮೆಹೆದಿ ಹಸನ್, ಮೆಹೆದಿ ಹಸನ್ ಮಿರ್ಜಾ, ಮಹಮದುಲ್ಲಾ, ಮುಸ್ತಫಿಜುರ್ ರಹಮಾನ್, ತಸ್ಕಿನ್ ಅಹ್ಮದ್, ಆನಾಮುಲ್ ಹಕ್, ಆಸ್ಟ್ರೇಲಿಯಾದ ಕ್ರಿಸ್ ಗ್ರೀನ್, ಫವಾದ್ ಅಹ್ಮದ್, ಡೇನಿಯಲ್ ಕ್ರಿಶ್ವಿಯನ್, ಜೇಮ್ಸ್ ಫಾಕ್ನರ್ ಮತ್ತು ಕ್ರಿಸ್ ಲಿನ್ ಲಿಸ್ಟ್ನಲ್ಲಿ ಪ್ರಮುಖ ಕ್ರಿಕೆಟರ್ಗಳಾಗಿದ್ದಾರೆ.
ಇದನ್ನು ಓದಿ:ಫೆಬ್ರವರಿ 20ರಿಂದ ಪಿಎಸ್ಎಲ್ ಆರಂಭ, ಮಾರ್ಚ್ 22ರಂದು ಫೈನಲ್ : ಪಿಸಿಬಿ