ETV Bharat / sports

ತೆಂಡೂಲ್ಕರ್​ ಸಾರ್ವಕಾಲಿಕ ಟೆಸ್ಟ್ ರನ್​ ವಿಶ್ವದಾಖಲೆ ಮುರಿಯಲು ಈತನಿಂದ ಸಾಧ್ಯ: ಜೆಫ್ರಿ ಬಾಯ್ಕಾಟ್​​

"ರೂಟ್​ಗೆ ಕೇವಲ 30 ವರ್ಷ. ಅವರು ಈಗಾಗಲೆ 99 ಟೆಸ್ಟ್​ ಪಂದ್ಯಗಳಿಂದ 8249 ರನ್​ ಗಳಿಸಿದ್ದಾರೆ. ಅವರು ಗಂಭೀರವಾದ ಗಾಯಕ್ಕೆ ಒಳಗಾಗದಿದ್ದರೆ ಸಚಿನ್​ ತೆಂಡೂಲ್ಕರ್​ ಅವರ ಸಾರ್ವಕಾಲಿಕ ದಾಖಲೆಯಾಗಿರುವ 15,921 ರನ್​ಗಳನ್ನು ಮೀರಿಸದಿರಲು ಯಾವುದೇ ಕಾರಣವಿಲ್ಲ" ಎಂದು ಇಂಗ್ಲೆಂಡ್​ ಲೆಜೆಂಡ್​ ತಿಳಿಸಿದ್ದಾರೆ.

ಜೆಫ್ರಿ ಬಾಯ್ಕಾಟ್​​ ತೆಂಡೂಲ್ಕರ್
ಜೆಫ್ರಿ ಬಾಯ್ಕಾಟ್​​ ತೆಂಡೂಲ್ಕರ್
author img

By

Published : Jan 26, 2021, 3:53 PM IST

ಲಂಡನ್​: ಇಂಗ್ಲೆಂಡ್ ನಾಯಕ ಜೋ ರೂಟ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್​ ಅವರ ಸಾರ್ವಕಾಲಿಕ ಗರಿಷ್ಠ ರನ್​ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಇಂಗ್ಲೆಂಡ್​ ಲೆಜೆಂಡರಿ ಕ್ರಿಕೆಟಿಗ ಜೆಫ್ರಿ ಬಾಯ್ಕಾಟ್​​ ಅಭಿಪ್ರಾಯಪಟ್ಟಿದ್ದಾರೆ.

30 ವರ್ಷದ ರೂಟ್,​ ಶ್ರೀಲಂಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 106.50ರ ಸರಾಸರಿಯಲ್ಲಿ 2 ಭರ್ಜರಿ ಶತಕ ಸಹಿತ 426 ರನ್​ ಬಾರಿಸಿದ್ದರು. ಅದರಲ್ಲಿ ಒಂದು ಪಂದ್ಯದಲ್ಲಿ 228 ರನ್​ಗಳಿಸಿದ್ದರು. ಇವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ 2-0ಯಲ್ಲಿ ಟೆಸ್ಟ್​ ಸರಣಿಯನ್ನು ಕ್ಲೀನ್ ಸ್ವೀಪ್​ ಸಾಧಿಸಿತ್ತು.

"ರೂಟ್ ಅವರು ಡೇವಿಡ್ ಗೋವರ್, ಕೆವಿನ್ ಪೀಟರ್ಸನ್ ಮತ್ತು ನನಗಿಂತ ಇಂಗ್ಲೆಂಡ್ ಪರ ಹೆಚ್ಚು ಟೆಸ್ಟ್ ರನ್ ಗಳಿಸುವುದನ್ನು ಮರೆತುಬಿಡಿ. ಅವರಿಗೆ 200 ಟೆಸ್ಟ್​ ಪಂದ್ಯಗಳನ್ನು ಆಡುವ ಸಾಮರ್ಥ್ಯವಿದೆ ಮತ್ತು ಸಚಿನ್​ ತೆಂಡೂಲ್ಕರ್​ ಅವರಿಗಿಂದ ಹೆಚ್ಚು ರನ್ ​ಗಳಿಸಲಿದ್ದಾರೆ "ಎಂದು ಬಾಯ್ಕಾಟ್​ ಹೇಳಿದ್ದಾರೆ.

ಜೋ ರೂಟ್​
ಜೋ ರೂಟ್​

"ರೂಟ್​ಗೆ ಕೇವಲ 30 ವರ್ಷ. ಅವರು ಈಗಾಗಲೇ 99 ಟೆಸ್ಟ್​ ಪಂದ್ಯಗಳಿಂದ 8249 ರನ್​ ಗಳಿಸಿದ್ದಾರೆ. ಅವರು ಗಂಭೀರವಾದ ಗಾಯಕ್ಕೆ ಒಳಗಾಗದಿದ್ದರೆ ಸಚಿನ್​ ತೆಂಡೂಲ್ಕರ್​ ಅವರ ಸಾರ್ವಕಾಲಿಕ ದಾಖಲೆಯಾಗಿರುವ 15,921 ರನ್​ಗಳನ್ನು ಮೀರಿಸದಿರಲು ಯಾವುದೇ ಕಾರಣವಿಲ್ಲ" ಎಂದು ಇಂಗ್ಲೆಂಡ್​ ಲೆಜೆಂಡ್​ ತಿಳಿಸಿದ್ದಾರೆ.

ಆದರೂ ತಾವು ರೂಟ್​ರನ್ನು ಹಿಂದಿನ ಲೆಜೆಂಡರಿ ಕ್ರಿಕೆಟಿಗರೊಂದಿಗೆ ಹೋಲಿಸುವುದುಕ್ಕೆ ಬಯಸುವುದಿಲ್ಲ ಎಂದಿದ್ದಾರೆ. "ರೂಟ್​ ಅವರನ್ನು ಸಮಕಾಲೀನರಾದ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಅವರ ಜೊತೆಗೆ ಹೋಲಿಕೆ ಮಾಡಬಹುದು. ಏಕೆಂದರೆ ಅವರೆಲ್ಲರು ಉತ್ತಮ ಆಟಗಾರರು ಮತ್ತು ಹೆಚ್ಚು ರನ್ ಗಳಿಸಬಲ್ಲರು. ಆದರೆ ಹಿಂದಿನ ಕ್ರಿಕೆಟಿಗರೊಂದಿಗೆ ಹೋಲಿಕೆ ಮಾಡುವುದಕ್ಕಾಗುವುದಿಲ್ಲ. ಪ್ರತಿಯೊಬ್ಬ ಆಟಗಾರನು ಅವರ ಪರಿಸರದ ಒಂದು ಉತ್ಪನ್ನವಾಗಿರುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ:ಆಂಗ್ಲ ಸ್ಪಿನ್ನರ್ರ್ಸ್‌ ವಿರುದ್ಧ ಪೂಜಾರ ಪ್ರಾಬಲ್ಯ ಸಾಧಿಸಿದ್ರೆ, ಅರ್ಧಮೀಸೆ ಬೋಳಿಸುವೆ : ಆರ್‌. ಅಶ್ವಿನ್ ಸವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.