ಮುಂಬೈ: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಎಂಟು ತಿಂಗಳ ನಿಷೇಧಕ್ಕೊಳಗಾಗಿದ್ದ ಟೀಂ ಇಂಡಿಯಾದ ಉದಯೋನ್ಮುಖ ಆಟಗಾರ ಪೃಥ್ವಿ ಶಾ ಇದೇ ತಿಂಗಳು ಮೈದಾನಕ್ಕಿಳಿಯುತ್ತಿದ್ದಾರೆ.
ಸದ್ಯ ನಡೆಯುತ್ತಿರುವ ಸೈಯದ್ ಅಲಿ ಮುಷ್ತಾಕ್ ಟೂರ್ನಿಯಲ್ಲಿ ಮುಂಬೈ ತಂಡದ ಪರ ಪೃಥ್ವಿ ಶಾ ಆಡಲಿದ್ದು, ನವೆಂಬರ್ 17ರಂದು ನಿಷೇಧದ ಬಳಿಕ ಪ್ರಥಮ ಪಂದ್ಯವನ್ನಾಡಲಿದ್ದಾರೆ. ನ.15ರಂದು ಪೃಥ್ವಿ ನಿಷೇಧ ಕೊನೆಗೊಳ್ಳಲಿದೆ.
ಮುಂಬೈ ತಂಡಕ್ಕೆ ಸೂಪರ್ ಲೀಗ್ ಹಂತದಲ್ಲಿ ಕೊನೆಯ ಎರಡು ಪಂದ್ಯಗಳು ಬಾಕಿ ಇದ್ದು, ನ.17ರ ಕೊನೆಯ ಲೀಗ್ ಪಂದ್ಯದಲ್ಲಿ ಪೃಥ್ವಿ ಶಾ ಬ್ಯಾಟ್ ಬೀಸಲಿದ್ದಾರೆ. ಕೊನೆಯ ಎರಡು ಲೀಗ್ ಪಂದ್ಯಕ್ಕೆ ಮುಂಬೈ ತಮ್ಮ ತಂಡ 15ರ ಬಳಗವನ್ನು ಘೋಷಿಸಿದ್ದು, ಪೃಥ್ವಿ ಶಾ ಹೆಸರಿದೆ.
ಅಸ್ಸೋಂ ವಿರುದ್ಧ ಮುಂಬೈ ತಂಡ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಕೊನೆಯ ಸೂಪರ್ ಲೀಗ್ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಪೃಥ್ವಿ ಶಾ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಈ ಟೂರ್ನಿಯಲ್ಲಿ ಮುಂಬೈ ತಂಡ ಸೋಲನ್ನೇ ಕಂಡಿಲ್ಲ ಎನ್ನುವುದು ವಿಶೇಷ.