ಮುಂಬೈ: ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದು, ಪುದುಚೇರಿ ವಿರುದ್ಧ ಅಜೇಯ ದ್ವಿಶತಕ (227*) ಬಾರಿಸಿ ದಾಖಲೆ ಬರೆದಿದ್ದಾರೆ.
ಈ ಸಾಧನೆ ಮೂಲಕ ಪೃಥ್ವಿ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ 8ನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಮುನ್ನ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, , ಮತ್ತು ಕರಣ್ ಕೌಶಲ್ ಈ ಸಾಧನೆ ಮಾಡಿದ್ದರು. 2019/20ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಯಶಸ್ವಿ ಜೈಸ್ವಾಲ್ ಜಾರ್ಖಂಡ್ ವಿರುದ್ಧ 203 ರನ್ ಗಳಿಸಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಇತಿಹಾಸ ಸೃಷ್ಟಿಸಿದ್ದರು.
ಇದನ್ನೂ ಓದಿ:'ಯಶ'ಸ್ವಿನಿ ವಿದ್ಯಾಭ್ಯಾಸಕ್ಕೆ ಮನೆಯಲ್ಲೇ ಪಾಠ: ಭರವಸೆ ನೀಡಿದ ಶಿಕ್ಷಣ ಸಚಿವರು
ಶಾ 45ನೇ ಓವರ್‌ನಲ್ಲಿ ಸಿಂಗಲ್ ಮೂಲಕ ತಮ್ಮ ಮೊದಲ ದ್ವಿಶತಕ ಪೂರ್ಣಗೊಳಿಸಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಈಗ 6 ಶತಕಗಳನ್ನು ಗಳಿಸಿರುವ ಪೃಥ್ವಿ ಶಾ, ನ್ಯೂಜಿಲ್ಯಾಂಡ್ ಎ ವಿರುದ್ಧ ಭಾರತ ಎ ಪರ 150 ರನ್ ಬಾರಿಸಿದ್ದರು.
-
End Innings: Mumbai - 457/4 in 50.0 overs (Shardul 6 off 4, Prithvi Shaw 227 off 152) #CAPvMUM @paytm #VijayHazareTrophy
— BCCI Domestic (@BCCIdomestic) February 25, 2021 " class="align-text-top noRightClick twitterSection" data="
">End Innings: Mumbai - 457/4 in 50.0 overs (Shardul 6 off 4, Prithvi Shaw 227 off 152) #CAPvMUM @paytm #VijayHazareTrophy
— BCCI Domestic (@BCCIdomestic) February 25, 2021End Innings: Mumbai - 457/4 in 50.0 overs (Shardul 6 off 4, Prithvi Shaw 227 off 152) #CAPvMUM @paytm #VijayHazareTrophy
— BCCI Domestic (@BCCIdomestic) February 25, 2021
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾದಲ್ಲಿದ್ದ ಪೃಥ್ವಿ ಶಾ ಅವರನ್ನು ಕಳಪೆ ಪ್ರದರ್ಶನ ಹಿನ್ನೆಲೆ, ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿಗೆ ತಂಡದಿಂದ ಕೈಬಿಡಲಾಗಿದೆ. ತಂಡಕ್ಕೆ ವಾಪಸ್ ಆಗಲು ಶ್ರಮಿಸುತ್ತಿರುವ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಶಾ ಈ ಹಿಂದಿನ ಪಂದ್ಯಗಳಲ್ಲಿ 105*, 34 ಮತ್ತು ಇದೀಗ ದ್ವಿಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಶಾ ಮುಂಬೈ ತಂಡ ಮುನ್ನಡೆಸುತ್ತಿದ್ದಾರೆ.
ಪೃಥ್ವಿ ಶಾ ದ್ವಿಶತಕ ಹಾಗೂ ಸೂರ್ಯಕುಮಾರ್ ಯಾದವ್ ಶತಕ (133) ನೆರವಿನಿಂದ ಮುಂಬೈ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 457 ರನ್ಗಳ ದಾಖಲೆಯ ಮೊತ್ತ ದಾಖಲಿಸಿದೆ. ಆದಿತ್ಯ ತಾರೆ 56 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ.