ಅಬುಧಾಬಿ: ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅರ್ಧಶತಕದ ಹೊರತಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 165 ರನ್ ಬೆನ್ನಟ್ಟಲಾಗದೆ 2 ರನ್ಗಳ ರೋಚಕ ಸೋಲು ಕಾಣುವ ಮೂಲಕ ನಿರಾಸೆಯನುಭವಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕಾರ್ತಿಕ್ (57) ಹಾಗೂ ಗಿಲ್ (57) ರನ್ಗಳ ನೆರವಿನಿಂದ ಪಂಜಾಬ್ಗೆ 165 ರನ್ಗಳ ಸಾಧಾರಣ ಗುರಿ ನೀಡಿತ್ತು.
ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗರಾಗ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ಗೆ 115 ರನ್ಗಳ ಜೊತೆಯಾಟ ನಡೆಸಿ ಭರ್ಜರಿ ಆರಂಭ ಒದಗಿಸಿದರು. ಅಗರ್ವಾಲ್ 39 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 56 ರನ್ಗಳಿಸಿ ಔಟಾದರು. ಈ ಜೋಡಿ 14.2 ಓವರ್ಗಳವರೆಗೆ ಜೊತೆಯಾಟ ನಡೆಸಿತ್ತು.
-
What a win this for @KKRiders. They win by 2 runs and register another win in #Dream11IPL #KXIPvKKR pic.twitter.com/hdNC5pHenc
— IndianPremierLeague (@IPL) October 10, 2020 " class="align-text-top noRightClick twitterSection" data="
">What a win this for @KKRiders. They win by 2 runs and register another win in #Dream11IPL #KXIPvKKR pic.twitter.com/hdNC5pHenc
— IndianPremierLeague (@IPL) October 10, 2020What a win this for @KKRiders. They win by 2 runs and register another win in #Dream11IPL #KXIPvKKR pic.twitter.com/hdNC5pHenc
— IndianPremierLeague (@IPL) October 10, 2020
2ನೇ ವಿಕೆಟ್ಗೆ ಜೊತೆಯಾದ ಪೂರನ್(16) ಹಾಗೂ ರಾಹುಲ್ 29 ರನ್ ಸೇರಿಸಿದರು. ಕೊನೆಯ 3 ಓವರ್ಗಳಲ್ಲಿ ಗೆಲುವಿಗೆ 22 ರನ್ಗಳ ಅಗತ್ಯವಿತ್ತು. ಇಲ್ಲಿಯವರೆಗೂ ಪಂಜಾಬ್ ಕೈಯಲ್ಲಿದ್ದ ಪಂದ್ಯ18 ಓವರ್ನಲ್ಲಿ ಕೋಲ್ಕತ್ತಾ ಕಡೆಗೆ ವಾಲಿತು. ಆ ಓವರ್ನಲ್ಲಿ ಸ್ಪಿನ್ ಲೆಜೆಂಡ್ ನರೈನ್ ಕೇವಲ 2 ರನ್ ನೀಡಿ ಪೂರನ್ ವಿಕೆಟ್ ಪಡೆದು ಪಂಜಾಬ್ಗೆ ದೊಡ್ಡ ಹೊಡೆತ ನೀಡಿ ಗೆಲುವನ್ನು ಕೆಕೆಆರ್ ಕಡೆಗೆ ತಿರುಗಿಸಿದರು.
ನಂತರ 19ನೇ ಓವರ್ನಲ್ಲಿ ಪ್ರಸಿದ್ ಕೃಷ್ಣ ಕೇವಲ 6 ರನ್ ನೀಡಿ ಯುವ ಬ್ಯಾಟ್ಸ್ಮನ್ ಸಿಮ್ರಾನ್ ಸಿಂಗ್ ಹಾಗೂ 58 ಎಸೆತಗಳಲ್ಲಿ 6 ಬೌಂಡರಿ ಸಹಿತ 74 ರನ್ಗಳಿಸಿದ್ದ ಕೆ.ಎಲ್ ರಾಹುಲ್ ವಿಕೆಟ್ ಪಡೆದು ಕೆಕೆಆರ್ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದರು. ಕೊನೆಯ ಓವರ್ನಲ್ಲಿ ಪಂಜಾಬ್ಗೆ ಗೆಲ್ಲಲು 14 ರನ್ಗಳ ಅವಶ್ಯಕತೆಯಿತ್ತು.
ನರೈನ್ 20ನೇ ಓವರ್ನ ಮೊದಲ ಎಸೆತದಲ್ಲಿ 2 ರನ್ ಗಳಿಸಿದ ಮ್ಯಾಕ್ಸ್ವೆಲ್, ನಂತರ ಡಾಟ್ ಮಾಡಿ 3ನೇ ಎಸೆತವನ್ನು ಬೌಂಡರಿಗಟ್ಟಿದರು. 4ನೇ ಎಸೆತದಲ್ಲಿ ಸಿಂಗಲ್ ಬಂದಿತು. 5ನೇ ಎಸೆತದಲ್ಲಿ ಮಂದೀಪ್ ಸಿಂಗ್ ಕ್ಯಾಚ್ ನೀಡಿ ಔಟಾದರು. ಕೊನೆಯ ಎಸೆತದಲ್ಲಿ ಪಂಜಾಬ್ಗೆ 7 ರನ್ಗಳ ಅಗತ್ಯವಿತ್ತು. ನರೈನ್ ಕೇವಲ 4 ರನ್ಗಳನ್ನು ಬಿಟ್ಟುಕೊಟ್ಟು ಕೆಕೆಆರ್ಗೆ 2 ರನ್ಗಳ ರೋಚಕ ಗೆಲುವು ತಂದುಕೊಟ್ಟರು.
ಕೆಕೆಆರ್ ಪರ ಪ್ರಸಿದ್ ಕೃಷ್ಣ 3 ವಿಕೆಟ್ ಹಾಗೂ ಸುನೀಲ್ ನರೈನ್ 2 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.