ETV Bharat / sports

28 ಎಸೆತಗಳಲ್ಲಿ 78 ಬಾರಿಸಿ ಗೆಲುವು ಟಿಕೆಆರ್​ಗೆ ಸತತ 6ನೇ ಜಯ ತಂದುಕೊಟ್ಟ ಪೊಲಾರ್ಡ್​

ಈ ಗೆಲುವಿನ ಮೂಲಕ ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಲ್ಲೂ ಟಿಕೆಆರ್​ ಗೆಲುವು ಸಾಧಿಸಿದರೆ. ಬಾರ್ಬಡೊಸ್​ 6 ಪಂದ್ಯಗಳಲ್ಲಿ 4 ಸೋಲು 2 ಗೆಲುವಿನೊಂದಿಗೆ 4ನೇ ಸ್ಥಾನದ್ಲೇ ಉಳಿಯಿತು.

author img

By

Published : Aug 30, 2020, 2:05 PM IST

ಕೀರನ್​ ಪೊಲಾರ್ಡ್​
ಕೀರನ್​ ಪೊಲಾರ್ಡ್​

ಟ್ರಿನಿಡಾಡ್​: ಕೆರಿಬಿಯನ್​ ಲೀಗ್​ನ ಶನಿವಾರ ನಡೆದ ಬಾರ್ಬಡೊಸ್​ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಪೊಲಾರ್ಡ್​ ಕೇವಲ 28 ಎಸೆತಗಳಲ್ಲಿ 72 ರನ್​ ಚಚ್ಚುವ ಮೂಲಕ ಟ್ರಿಂಬಾಗೊ ನೈಟ್​ ರೈಡರ್ಸ್​ಗೆ ಸತತ 6ನೇ ಜಯ ತಂದುಕೊಟ್ಟರು.

ಶನಿವಾರ ನಡೆದ ಲೀಗ್​ನ 12 ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಹಾಲಿ ಚಾಂಪಿಯನ್ ಬಾರ್ಬಡೊಸ್​ಟ್ರಿಡೆಂಟ್ಸ್​ 20 ಓವರ್​ಗಳಲ್ಲಿ 148 ರನ್​ಗಳಿಸಿತ್ತು. ಜಾನ್ಸನ್​ ಚಾರ್ಲ್ಸ್​ 47, ಕೈಲ್​ ಮೇಯರ್ಸ್​ 42 ರನ್​ಗಳಿಸಿದರು.

ನೈಟ್​ರೈಡರ್ಸ್​ ಪರ ಅಕೀಲ್​ ಹುಸೇನ್​ ಜೇಡನ್​ ಸೀಲ್ಸ್​ ಹಾಗೂ ಸಿಕಂದರ್​ ರಾಜಾ ತಲಾ ಎರಡು ವಿಕೆಟ್ ಪಡೆದರು.

149 ರನ್​ಗಳ ಗುರಿ ಪಡೆದ ಟಿಕೆಆರ್ ನಿರಂತರವಾಗಿ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. ಕೇವಲ 6 ರನ್​ಗಳಾಗುವಷ್ಟರಲ್ಲಿ ಟಿಯೋನ್​ ವೆಬ್​ಸ್ಟರ್​(5), ಮನ್ರೊ (0) ವಿಕೆಟ್​ ಕಳೆದುಕೊಂಡಿತು. ನಂತರ ಬಂದ ಡರೇನ್​ ಬ್ರಾವೋ(6), ಟಿಮ್ ಸೀಫರ್ಟ್​(4) ಹಾಗೂ ಅಕೀಲ್​ ಹುಸೇನ್​(12) ಕೂಡಟ ಬಂದಷ್ಟೇ ವೇಗವಾಗಿ ವಿಕೆಟ್​ ಒಪ್ಪಿಸಿದರು.

ಈ ಹಂತದಲ್ಲಿ ಸಿಮನ್ಸ್​ ಜೊತೆಗೂಡಿದ ಪೊಲಾರ್ಡ್​ 6ನೇ ವಿಕೆಟ್ ಜೊತೆಯಾಟದಲ್ಲಿ 31 ರನ್​ ಸೇರಿಸಿ ತಂಡದ ಮೊತ್ತವನ್ನು 100ಗಡಿ ದಾಟಿಸಿದರು. 29 ಎಸೆತಗಳಲ್ಲಿ 3 ಸಿಕ್ಸರ್​ ಸಹಿತ 32 ರನ್​ಗಳಿಸಿದ್ದ ಸಿಮನ್ಸ್​ ಸ್ಟಂಪ್​ ಔಟ್​ ಆದರು. ಆದರೆ ಏಕಾಂಗಿಯಾಗಿ ಹೋರಾಡಿದ ಪೊಲಾರ್ಡ್​ 28 ಎಸೆತಗಳಲ್ಲಿ 9 ಸಿಕ್ಸರ್​ ಹಾಗೂ 2 ಬೌಂಡರಿ ಸಹಿತ 72 ರನ್​ಗಳಿಸಿ ಗೆಲುವಿಗೆ 4 ಎಸೆತಗಳಲ್ಲಿ 8 ರನ್​ ಅಗತ್ಯವಿದ್ದಾಗ ಔಟಾದರು. ಖಾರಿ ಪೆರ್ರಿ ಕೊನೆಯ ಓವರ್​ನಲ್ಲಿ ಸಿಕ್ಸರ್​ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಈ ಗೆಲುವಿನ ಮೂಲಕ ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಲ್ಲೂ ಟಿಕೆಆರ್​ ಗೆಲುವು ಸಾಧಿಸಿದರೆ. ಬಾರ್ಬಡೊಸ್​ 6 ಪಂದ್ಯಗಳಲ್ಲಿ 4 ಸೋಲು 2 ಗೆಲುವಿನೊಂದಿಗೆ 4ನೇ ಸ್ಥಾನದ್ಲೇ ಉಳಿಯಿತು.

ಮತ್ತೊಂದು ಪಂದ್ಯದಲ್ಲಿ ಜಮೈಕಾ ತಲವಾಸ್​ ಪೇಟ್ರಿಯೋಟ್ಸ್​ ವಿರುದ್ಧ 37 ರನ್​ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್​​ ನಡೆಸಿದ ಜಮೈಕಾ 147 ರನ್​ಗಳಿಸಿದರೆ, ಎಸ್​ಎನ್​ಪಿ 110 ರನ್​ಗಳಿಗೆ ಆಲೌಟ್​ ಆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.