ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹರಾಜುಗೊಳ್ಳಲು ಸಜ್ಜುಗೊಳ್ಳುತ್ತಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಇದೀಗ ಪೊಲೀಸ್ ಶೀಲ್ಡ್ ಟೂರ್ನಿಯಲ್ಲಿ ಮಿಂಚು ಹರಿಸಿದ್ದಾರೆ.
73ನೇ ಪೊಲೀಸ್ ಆಹ್ವಾನ ಶೀಲ್ಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಲ್ರೌಂಡ್ ಆಟದ ಮೂಲಕ ಅರ್ಜುನ್ ತೆಂಡೂಲ್ಕರ್ ಗಮನ ಸೆಳೆದಿದ್ದಾರೆ. ಕೇವಲ 31 ಎಸೆತಗಳಲ್ಲಿ 77ರನ್ಗಳಿಕೆ ಮಾಡಿದ್ರೆ, 41ರನ್ ನೀಡಿ 3 ವಿಕೆಟ್ ಕಬಳಿಕೆ ಮಾಡಿದ್ದಾರೆ.
ಓದಿ: ಭಾರತದಲ್ಲಿ ನಮ್ಮ ತಂಡ ಸ್ಪಿನ್ ಬೌಲಿಂಗ್ ಸಮರ್ಥವಾಗಿ ಆಡುವುದನ್ನ ಕಲಿಯಬೇಕಿದೆ: ಮಿಸ್ಬಾ- ಉಲ್ - ಹಕ್
ಐದು ಫೋರ್ ಹಾಗೂ ಎಂಟು ಸಿಕ್ಸರ್ ಸಿಡಿಸಿದ ಅರ್ಜುನ್ ತೆಂಡೂಲ್ಕರ್ ಒಂದೇ ಓವರ್ನಲ್ಲಿ ಐದು ಸಿಕ್ಸರ್ ಸಿಡಿಸಿ, ಐಪಿಎಲ್ ಪ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಹಿರಿಯ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್, ಫೆ. 18ರಂದು ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.