ಹೈದರಾಬಾದ್: ಪ್ರಧಾನಿ ಮೋದಿ ಇಂದಿನ ಮನ್ ಕಿ ಬಾತ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಭಾರತೀಯರು ತೋರಿದ ಸಂಘಟಿತ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ, ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಧನ್ಯವಾದ ತಿಳಿಸಿದ್ದಾರೆ.
ಭಾರತ ತಂಡ ಗಾಯ ಹಾಗೂ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿಯೂ ಮೊದಲ ಪಂದ್ಯದ ದಯನೀಯ ಸೋಲಿನ ಬಳಿಕ ಅದ್ಭುತವಾಗಿ ತಿರುಗಿಬಿದ್ದು, ಸರಣಿಯನ್ನು 2-1ರಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಶನಿವಾರ ಪ್ರಧಾನಿ ಮೋದಿ ಮನ್ ಕಿ ಬಾತ್ನಲ್ಲಿ ಭಾರತೀಯರ ಕಠಿಣ ಪರಿಶ್ರಮ ಸ್ಫೂರ್ತಿದಾಯಕವಾದದ್ದು ಎಂದು ವ್ಯಾಖ್ಯಾನಿಸಿದ್ದರು.
"ಈ ತಿಂಗಳು, ನಮಗೆ ಕ್ರಿಕೆಟ್ ಪಿಚ್‌ನಿಂದ ಒಳ್ಳೆಯ ಸುದ್ದಿ ಸಿಕ್ಕಿತು. ಆರಂಭಿಕ ಹಿನ್ನಡೆಯ ನಂತರ ಭಾರತ ತಂಡವು ವೈಭವಯುತವಾಗಿ ಪುಟಿದೇಳುವ ಮೂಲಕ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಿದೆ. ಈ ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ಸಂಘಟಿತ ಹೋರಾಟ ಸ್ಫೂರ್ತಿದಾಯಕವಾಗಿದೆ" ಎಂದು ಪಿಎಂ ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು.
-
Thank you, Sir. Your kind words will further strengthen #TeamIndia and 🇮🇳’s resolve to perform under pressure and in trying circumstances. Jai Hind ! https://t.co/yQQN9nh8Ab
— Ravi Shastri (@RaviShastriOfc) January 31, 2021 " class="align-text-top noRightClick twitterSection" data="
">Thank you, Sir. Your kind words will further strengthen #TeamIndia and 🇮🇳’s resolve to perform under pressure and in trying circumstances. Jai Hind ! https://t.co/yQQN9nh8Ab
— Ravi Shastri (@RaviShastriOfc) January 31, 2021Thank you, Sir. Your kind words will further strengthen #TeamIndia and 🇮🇳’s resolve to perform under pressure and in trying circumstances. Jai Hind ! https://t.co/yQQN9nh8Ab
— Ravi Shastri (@RaviShastriOfc) January 31, 2021
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ, " ಧನ್ಯವಾದಗಳು ಸರ್, ಈ ರೀತಿಯ ನಿಮ್ಮ ಮಾತುಗಳು ಭಾರತ ತಂಡಕ್ಕೆ ಒತ್ತಡದಲ್ಲಿ ಮತ್ತು ಗೆಲುವಿಗಾಗಿ ಪ್ರಯತ್ನಿಸುವ ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಜೈ ಹಿಂದ್" ಎಂದು ಟ್ವೀಟ್ ಮಾಡಿದ್ದಾರೆ.
-
Sincere thanks and gratitude to Honourable Prime minister for recognising the performance of the Indian cricket team in australia..
— Sourav Ganguly (@SGanguly99) January 31, 2021 " class="align-text-top noRightClick twitterSection" data="
">Sincere thanks and gratitude to Honourable Prime minister for recognising the performance of the Indian cricket team in australia..
— Sourav Ganguly (@SGanguly99) January 31, 2021Sincere thanks and gratitude to Honourable Prime minister for recognising the performance of the Indian cricket team in australia..
— Sourav Ganguly (@SGanguly99) January 31, 2021
ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಆಸ್ಟ್ರೇಲಿಯಾದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸಾಧನೆಯನ್ನು ಗುರುತಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
-
Thank you for your encouraging words, Hon’ble PM Shri @narendramodi Ji. This will boost the morale and energy level of entire Indian cricket for future challenges.🇮🇳 @imVkohli @ajinkyarahane88 @ImRo45 @RaviShastriOfc @RishabhPant17 @Jaspritbumrah93 @SGanguly99 @ThakurArunS https://t.co/ivgmDeweXR
— Jay Shah (@JayShah) January 31, 2021 " class="align-text-top noRightClick twitterSection" data="
">Thank you for your encouraging words, Hon’ble PM Shri @narendramodi Ji. This will boost the morale and energy level of entire Indian cricket for future challenges.🇮🇳 @imVkohli @ajinkyarahane88 @ImRo45 @RaviShastriOfc @RishabhPant17 @Jaspritbumrah93 @SGanguly99 @ThakurArunS https://t.co/ivgmDeweXR
— Jay Shah (@JayShah) January 31, 2021Thank you for your encouraging words, Hon’ble PM Shri @narendramodi Ji. This will boost the morale and energy level of entire Indian cricket for future challenges.🇮🇳 @imVkohli @ajinkyarahane88 @ImRo45 @RaviShastriOfc @RishabhPant17 @Jaspritbumrah93 @SGanguly99 @ThakurArunS https://t.co/ivgmDeweXR
— Jay Shah (@JayShah) January 31, 2021
ನಿಮ್ಮ ಈ ಉತ್ತೇಜಕ ಮಾತುಗಳಿಗೆ ಧನ್ಯವಾದಗಳು ಮೋದಿ ಜೀ, ಭವಿಷ್ಯದಲ್ಲಿ ಇಂತಹ ಸವಾಲುಗಳನ್ನು ಎದುರಿಸಲು ಭಾರತೀಯ ಕ್ರಿಕೆಟ್‌ಗೆ ಆತ್ಮಸ್ಥೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸಿದೆ ”ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.