ETV Bharat / sports

ಮುಂದಿನ ಒಂದೆರೆಡು ವಾರಗಳಲ್ಲಿ ತರಬೇತಿ: ಕ್ರಿಕೆಟ್ ಆರಂಭದ​ ಸೂಚನೆ ನೀಡಿದ ಬಟ್ಲರ್​!

author img

By

Published : May 14, 2020, 10:24 AM IST

ಎಲ್ಲವೂ ಹತೋಟಿಗೆ ಬಂದರೆ ಮುಂದಿನ ಒಂದೆರೆಡು ತಿಂಗಳಲ್ಲಿ ಕ್ರಿಕೆಟ್​ ಪುನಾರಂಭಗೊಳ್ಳುವ ಎಲ್ಲ ಲಕ್ಷಣ ಗೋಚರಿಸುತ್ತಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್​ ತಂಡದ ವಿಕೆಟ್​ ಕೀಪರ್​ ಜೋಶ್​ ಬಟ್ಲರ್ ಮಾಹಿತಿ ನೀಡಿದ್ದಾರೆ.

Jos Buttler
Jos Buttler

ಇಂಗ್ಲೆಂಡ್​: ಡೆಡ್ಲಿ ವೈರಸ್​​ನಿಂದಾಗಿ ಕಳೆದ ಮಾರ್ಚ್​ ತಿಂಗಳಿಂದಲೂ ಕ್ರಿಕೆಟ್​ ಟೂರ್ನಿ ಅಮಾನತುಗೊಂಡಿದ್ದು, ಮುಂದಿನ ಎರಡು ತಿಂಗಳಲ್ಲಿ ಪುನಾರಂಭಗೊಳ್ಳುವ ಎಲ್ಲ ಲಕ್ಷಣ ಗೋಚರವಾಗುತ್ತಿವೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್​ ಕ್ರಿಕೆಟರ್​ ಜೋಶ್​ ಬಟ್ಲರ್​ ಮಾಹಿತಿ ನೀಡಿದ್ದಾರೆ.

ಮುಂದಿನ ಒಂದು ಅಥವಾ ಎರಡು ವಾರದಲ್ಲಿ ಕ್ರಿಕೆಟರ್​​ಗಳಿಗೆ ತರಬೇತಿ ಆರಂಭಗೊಳ್ಳುವ ಸಾಧ್ಯತೆ ಇದ್ದು, ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ವಾರದಲ್ಲಿ ಕ್ರಿಕೆಟ್​ ಪ್ಲೇಯರ್​​ಗಳಿಗೆ ಚಿಕ್ಕದಾಗಿ ತರಬೇತಿ ಆರಂಭಿಸಬಹುದು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಜತೆಗೆ ಕೋಚ್​ ಜತೆ ಮಾತ್ರ ಹೆಚ್ಚು ಸಮಯ ಕಳೆಯಲು ಅವಕಾಶ ನೀಡಲುಬಹುದಾಗಿದೆ ಎಂದಿದ್ದಾರೆ. ಆರಂಭದಲ್ಲಿ ನೆಟ್​ ಪ್ರ್ಯಾಕ್ಟೀಸ್​ ಮಾಡಲು ಅನುಮತಿ ನೀಡಬಹುದು ಎಂದಿದ್ದಾರೆ.

ಖಾಸಗಿ ಸುದ್ದಿವಾಹಿನಿವೊಂದಕ್ಕೆ ಸಂದರ್ಶನ ನೀಡಿರುವ ಸಂದರ್ಭದಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ ಆದಷ್ಟು ಬೇಗ ಕ್ರಿಕೆಟ್​ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ವೇಳೆ ಆಟಗಾರರು ಮತ್ತು ಕೋಚ್​ ಮಾತ್ರ ತರಬೇತಿಯಲ್ಲಿ ಭಾಗಿಯಾಗಲು ಅವಕಾಶ ನೀಡಬಹುದಾಗಿದೆ. ಕಳೆದ ತಿಂಗಳ ಆರಂಭಗೊಳ್ಳಬೇಕಾಗಿದ್ದ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ಕೊರೊನಾ ವೈರಸ್​ ಕಾರಣದಿಂದಾಗಿ ಮುಂದೂಡಿಕೆಯಾಗಿದೆ.

ಉಳಿದಂತೆ ಬೇರೆ ಬೇರೆ ದೇಶಗಳ ಮಧ್ಯೆ ನಡೆಯಬೇಕಾಗಿದ್ದ ಕ್ರಿಕೆಟ್​ ಟೂರ್ನಿ ಕೂಡ ಮುಂದೂಡಿಕೆಯಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಎಲ್ಲವೂ ಮೊದಲಿನಂತೆ ಆದರೆ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ.

2019ರ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿಕೆಟ್​ ಕೀಪರ್​ ಜೋಶ್​​ ಬಟ್ಲರ್​ ಧರಿಸಿದ್ದ ಜರ್ಸಿಯನ್ನ ಕೋವಿಡ್​-19 ವಿರುದ್ಧದ ಹೋರಾಟಕ್ಕಾಗಿ ಹರಾಜಿಗಿಟ್ಟಿದ್ದರು. ಅದರಿಂದ ಬಂದ ಬರೋಬ್ಬರಿ 80 ಸಾವಿರ ಡಾಲರ್​ಅನ್ನು ​(60.7 ಲಕ್ಷ ರೂ) ಕೊರೊನಾ ವೈರಸ್​ ವಿರುದ್ಧದ ಹೋರಾಟಕ್ಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.