ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​​​​: ಕನಿಷ್ಠ ವಯಸ್ಸಿನ ಮಿತಿ ಜಾರಿ ಮಾಡಿದ ಐಸಿಸಿ - ಪುರುಷರು ಹಾಗೂ ಮಹಿಳೆಯರ ಅಂಡರ್ 19 ಪಂದ್ಯಾವಳಿ

ಇನ್ಮುಂದೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಐಸಿಸಿ ವಯಸ್ಸಿನ ಮೀತಿ ಜಾರಿ ಮಾಡಿದೆ. ಈ ಮೂಲಕ ಆಟಗಾರರ ಸುರಕ್ಷತೆ ಕಡೆಗೆ ಇನ್ನೊಂದು ಕ್ರಮ ತೆಗೆದುಕೊಂಡಿದೆ. ಇದಕ್ಕೂ ಮೊದಲು ಅಂತಾರಾಷ್ಟ್ರೀಯ ಪಂದ್ಯವಾಡಲು ಯಾವುದೇ ವಯಸ್ಸಿನ ಮಿತಿ ನಿಗದಿ ಮಾಡಿರಲಿಲ್ಲ.

Player must be 15-year-old to play international cricket, says ICC
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು
author img

By

Published : Nov 20, 2020, 1:20 PM IST

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನಾಡಲು ಆಟಗಾರರಿಗೆ ಕನಿಷ್ಠ ವಯಸ್ಸಿನ ಮಿತಿ ಜಾರಿ ಮಾಡಿದೆ. ಇದರ ಅನುಸಾರ 15 ವರ್ಷಕ್ಕಿಂತ ಕೆಳಗಿನವರು ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವನ್ನು ಆಡುವಂತಿಲ್ಲ ಎಂದು ತಿಳಿಸಿದೆ.

ಅಲ್ಲದೇ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕನಿಷ್ಠ ವಯಸ್ಸಿನ ಮಿತಿ ಜಾರಿ ಮಾಡಲಾಗಿದ್ದು, ಐಸಿಸಿ ಆಯೋಜಿಸಲಿರುವ ದ್ವಿಪಕ್ಷೀಯ ಕ್ರಿಕೆಟ್ ಹಾಗೂ ಅಂಡರ್ 19, ಪುರುಷರು ಹಾಗೂ ಮಹಿಳೆಯರ ಅಂಡರ್ 19 ಪಂದ್ಯಾವಳಿಗೂ ಈ ನಿಯಮ ಅನ್ವಯ ಆಗಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದಾಗಿಯೂ ವಿಶೇಷ ಸಂದರ್ಭದಲ್ಲಿ 15 ವರ್ಷದೊಳಗಿನ ಆಟಗಾರರನ್ನು ಆಡಿಸಲು ಮಂಡಳಿಗೆ ಆಯಾ ಕ್ರಿಕೆಟ್ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಿಶೇಷ ಸಂದರ್ಭದಲ್ಲಿ 15 ವರ್ಷದೊಳಗಿನ ಆಟಗಾರನ ಆಡಿಸುವ ಕುರಿತಂತೆ ಆ ಆಟಗಾರ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢನಾಗಿರಬೇಕು. ಅಲ್ಲದೇ ಐಸಿಸಿಯ ಎಲ್ಲ ನಿಯಮಗಳ ಅನುಸಾರ ಅರ್ಹತೆ ಗಿಟ್ಟಿಸಿರಬೇಕು ಎಂಬ ನಿಯಮ ಮಾಡಿದೆ.

ಈ ಹಿಂದೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳ ಆಡಲು ಯಾವುದೇ ರೀತಿಯ ವಯಸ್ಸಿನ ಮಿತಿ ಇರಲಿಲ್ಲ. ಈಗ ಅದಕ್ಕೆ ಮಿತಿ ವಿಧಿಸಿ ಹೊಸ ನಿಯಮ ಜಾರಿಗೆ ತರಲಾಗಿದೆ.

ಇನ್ನು ಪಾಕಿಸ್ತಾನದ ಹಸನ್ ರಾಜಾ ತನ್ನ 14 ವರ್ಷ 227ನೇ ದಿನದಲ್ಲಿ ಏಕದಿನ ಪಂದ್ಯವಾಡಿದ್ದ 1996ರಿಂದ 2005ರ ನಡುವೆ 7ಟೆಸ್ಟ್ ಹಾಗೂ 16 ಏಕದಿನ ಪಂದ್ಯವಾಡಿದ್ದ, ಈತ ಅತಿ ಕಡಿಮೆ ವಯಸ್ಸಿನ ಐಸಿಸಿ ಆಟಗಾರ ಎಂಬ ಕೀರ್ತಿಗೆ ಪಾತ್ರವಾಗಿದ್ದಾನೆ.

ಇನ್ನೂ ಭಾರತದ ಪಾಲಿಗೆ ಸಚಿವ ತೆಂಡೂಲ್ಕರ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ಆಡಿದ ಆಟಗಾರ ಎನಿಸಿದ್ದಾರೆ, ಅವರು ತಮ್ಮ 16 ವರ್ಷ 205 ದಿನವಾಗಿದ್ದಾಗ ಭಾರತದ ಪರ ಬ್ಯಾಟ್ ಬೀಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.