ETV Bharat / sports

ಸ್ವತಂತ್ರರಾಗಿ ಆಡಿ, ಬದುಕುಳಿಯಬೇಕೆನ್ನುವ ಮನೋಭಾವದಿಂದಲ್ಲ: ತಂಡಕ್ಕೆ ಶ್ರೇಯಸ್ ಕಿವಿಮಾತು

author img

By

Published : Oct 24, 2020, 11:11 PM IST

ಪಂದ್ಯದಲ್ಲಿ ಕೆಕೆಆರ್ ನೀಡಿದ 195 ರನ್​ಗಳ ಗುರಿ ಬೆನ್ನತ್ತಿದ ಡೆಲ್ಲಿ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್​ಗಳಿಸಿ ಸೋಲು ಕಂಡಿತ್ತು. ಶ್ರೇಯಸ್ ಅಯ್ಯರ್ ಮಾತ್ರ 47 ರನ್​ಗಳಿಸಿ ಪ್ರತಿರೋಧ ತೋರಿದರೂ ಬೇರೆ ಆಟಗಾರರಿಂದ ಬೆಂಬಲ ಸಿಗದ ಕಾರಣ ಸೋಲು ಡೆಲ್ಲಿ ತಂಡ ಸೋಲನುಭಿವಿಸಿತ್ತು.

ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್

ಅಬುಧಾಬಿ: 2020 ರ ಐಪಿಎಲ್​ನಲ್ಲಿ ಉತ್ತಮವಾಗಿ ಆಡುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೇ ಮೊದಲ ಬಾರಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಕೆಕೆಆರ್ ವಿರುದ್ಧ 59 ರನ್​ಗಳ ಸೋಲು ಕಂಡಿದೆ. ಪಂದ್ಯದಲ್ಲಿ ಬ್ಯಾಟ್ಸ್​ಮನ್​ಗಳ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕೆ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ಪಂದ್ಯದಲ್ಲಿ ಕೆಕೆಆರ್ ನೀಡಿದ 195 ರನ್​ಗಳ ಗುರಿ ಬೆನ್ನತ್ತಿದ ಡೆಲ್ಲಿ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್​ಗಳಿಸಿ ಸೋಲು ಕಂಡಿತ್ತು. ಶ್ರೇಯಸ್ ಅಯ್ಯರ್ ಮಾತ್ರ 47 ರನ್​ಗಳಿಸಿ ಪ್ರತಿರೋಧ ತೋರಿದರೂ ಬೇರೆ ಆಟಗಾರರಿಂದ ಬೆಂಬಲ ಸಿಗದ ಕಾರಣ ಸೋಲು ಡೆಲ್ಲಿ ತಂಡ ಸೋಲನುಭವಿಸಿತ್ತು.

ಡೆಲ್ಲಿ vs ಕೋಲ್ಕತ್ತಾ
ಡೆಲ್ಲಿ vs ಕೋಲ್ಕತ್ತಾ

"ಆಟ ಆಡುವಾಗ ನಮ್ಮ ಮನಸ್ಸಿನಲ್ಲಿ ಬಲಿಷ್ಠರಾಗಿರಬೇಕು. ಸ್ವಾತಂತ್ರ್ಯದಿಂದ ಆಟವಾಡಬೇಕು. ಬದುಕುಳಿಯುವ ಮನಸ್ಸನ್ನು ಹೊಂದಿರಬಾರದೆಂದು" ಪಂದ್ಯದ ನಂತರ ಮಾತನಾಡಿದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ನಾವು ಅವರ ಮೇಲೆ ಇನ್ನು ಹೆಚ್ಚಿನ ಒತ್ತಡ ಹೇರಬಹುದಿತ್ತು. ಇನ್ನೂ ಹೆಚ್ಚಿನ ಆಕ್ರಮಣಕಾರಿಯಾಗಿ ಹೋಗಬೇಕಿತ್ತು. ಆದರೆ ಸುನೀಲ್ ನರೈನ್​ ಕೆಕೆಆರ್ ತಂಡದ ರನ್​ಗತಿಯನ್ನೇ ಬದಲಿಸಿದರು. ನನ್ನ ಪ್ರಕಾರ ಅದೇ ಪಂದ್ಯದ ಟರ್ನಿಂಗ್ ಪಾಯಿಂಟ್. ಆದರೆ ನಾವು ಉತ್ತಮ ಪ್ರದೇಶಗಳಲ್ಲಿ ಬೌಲಿಂಗ್ ಮಾಡಬಹುದಿತ್ತು. ಆದರೆ ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾದೆವು ಎಂದು ಅಯ್ಯರ್ ಹೇಳಿದ್ದಾರೆ.

195 ರನ್​ಗಳನ್ನು ಚೇಸ್ ಮಾಡುವಾಗ ಮೊದಲ 6 ಓವರ್​ಗಳಲ್ಲಿ 50 ರನ್​ಗಳಿಸಬೇಕಿತ್ತು. ಆದರೆ ನಾವು 2 ವಿಕೆಟ್ ಕಳೆದುಕೊಂಡೆವು. ಅದು ನಮ್ಮ ತಂಡದ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಉಂಟು ಮಾಡಿತು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.