ETV Bharat / sports

ನ್ಯೂಜಿಲ್ಯಾಂಡ್​ನಲ್ಲಿ 2020ರ ಟಿ -20 ವಿಶ್ವಕಪ್ ನಡೆಸಬಹುದೇ: ಡೀನ್ ಜೋನ್ಸ್ ಪ್ರಶ್ನೆ - ಡೀನ್ ಜೋನ್ಸ್ ಲೇಟೆಸ್ಟ್ ನ್ಯೂಸ್

ಲಾಕ್​ಡೌನ್​ ನಿಯಮಗಳು ಸಡಿಲವಾಗುತ್ತಿರುವ ನ್ಯೂಜಿಲ್ಯಾಂಡ್​ನಲ್ಲಿ ಟಿ - 20 ವಿಶ್ವಕಪ್ ಟೂರ್ನಿಯನ್ನು ನಡೆಸಬಹುದೇ ಎಂದು ಆಸೀಸ್ ತಂಡದ ಮಾಜಿ ಬ್ಯಾಟ್ಸ್‌ಮನ್ ಡೀನ್ ಜಾನ್ಸ್ ಪ್ರಶ್ನಿಸಿದ್ದಾರೆ.

Play the 2020 T20 World Cup in New Zealand
ನ್ಯೂಜಿಲ್ಯಾಂಡ್​ನಲ್ಲಿ 2020ರ ಟಿ-20 ವಿಶ್ವಕಪ್
author img

By

Published : Jun 3, 2020, 7:40 PM IST

ಹೈದರಾಬಾದ್: ನ್ಯೂಜಿಲ್ಯಾಂಡ್​ನಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಸಡಿಲಗೊಳಿಸುವ ಬಗ್ಗೆ ಪ್ರಧಾನಿ ಜಸಿಂಡಾ ಅರ್ಡೆರ್ನ್ ಮಾಹಿತಿ ನೀಡಿದ ನಂತರ ಟಿ-20 ವಿಶ್ವಕಪ್ ಸರಣಿ ನಡೆಸುವ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಡೀನ್ ಜಾನ್ಸ್ ಪ್ರಶ್ನೆ ಮಾಡಿದ್ದಾರೆ.

ಟಿ-20 ವಿಶ್ವಕಪ್ ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಕಾರಣದಿಂದಾಗಿ ಟೂರ್ನಿ ನಡೆಯುವುದು ಅನುಮಾನವಾಗಿದೆ.

Play the 2020 T20 World Cup in New Zealand
ನ್ಯೂಜಿಲ್ಯಾಂಡ್ ಕ್ರಿಕೆಟ್ ಮೈದಾನ

ಮುಂದಿನ ವಾರ ಮೊದಲನೇ ಹಂತದ ಅಲರ್ಟ್​ ನೀಡಬಹುದು ಎಂದು ಜಸಿಂಡಾ ಅರ್ಡೆರ್ನ್ ಹೇಳಿದ್ದಾರೆ. ಇದರರ್ಥ ಎಲ್ಲ ಸಾಮಾಜಿಕ ಅಂತರದ ಕ್ರಮಗಳು ಮತ್ತು ಸಾಮೂಹಿಕವಾಗಿ ಗುಂಪು ಸೇರುವುದರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ಅವರು ಹೇಳಿದ್ದಾರೆ.

  • Jacinda Ardern said NZ could move to alert level 1 next week, which means all social distancing measures and curbs on mass gatherings will be lifted, she said. Maybe play the T20 WC there? #justathought

    — Dean Jones AM (@ProfDeano) June 3, 2020 " class="align-text-top noRightClick twitterSection" data=" ">

ಜಸಿಂಡಾ ಅರ್ಡೆರ್ನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್​ ಮಾಡಿರುವ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಡೀನ್ ಜಾನ್ಸ್, ಬಹುಶಃ ನ್ಯೂಜಿಲ್ಯಾಂಡ್​ನಲ್ಲಿ ಟಿ-20 ವಿಶ್ವಕಪ್ ಆಡಬಹುದೇ? ಎಂದು ಪ್ರಶ್ನೆಮಾಡಿದ್ದಾರೆ. ನ್ಯೂಜಿಲ್ಯಾಂಡ್​​​ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಮೊದಲನೇ ಹಂತದ ಅಲರ್ಟ್​ ಅಡಿ ವಿಮಾನಗಳಲ್ಲಿ ಸಾಮಾಜಿಕ ಅಂತರದ ಅಗತ್ಯವಿಲ್ಲ ಎಂದು ಘೋಷಿಸಿದ್ದಾರೆ ಅಂತ ವೆಬ್​ಸೈಟ್​ವೊಂದು ವರದಿ ಮಾಡಿದೆ.

ಕಳೆದ ವಾರ ಸಭೆ ನಡೆಸಿದ್ದ ಐಸಿಸಿ ಟಿ-20 ವಿಶ್ವಕಪ್​ ಭವಿಷ್ಯದ ನಿರ್ಧಾರವನ್ನು ಜೂನ್ 10 ರವರೆಗೆ ಮುಂದೂಡಿದೆ. ಟಿ-20 ವಿಶ್ವಕಪ್ ಅನ್ನು ಮುಂದೂಡಲಾಗುವುದು ಎಂದು ಅನೇಕ ವರದಿಗಳು ಹೇಳಿವೆ. ಆದರೆ, ಈಗಿನವರೆಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.