ETV Bharat / sports

ಐಪಿಎಲ್​ನಲ್ಲಿ ಗರಿಷ್ಠ ವಿಕೆಟ್​: ಮೂರನೇ ಸ್ಥಾನಕ್ಕೇರಿದ ಪಿಯೂಷ್​ ಚಾವ್ಲಾ

author img

By

Published : Sep 20, 2020, 12:09 AM IST

ಈ ಹಿಂದೆ ಕಿಂಗ್ಸ್​ ಇಲೆವೆನ್​ ಪಂಜಾಬ್ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಪರ ಆಡಿದ್ದ ಪಿಯೂಷ್‌ ಚಾವ್ಲಾ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಪರ ಆಡಿದ ಮೊದಲ ಪಂದ್ಯದಲ್ಲಿ ಮಿಂಚು ಹರಿಸಿದ್ದಾರೆ. ಸ್ಪಿನ್ನರ್​ ಹರ್ಭಜನ್​ ಸಿಂಗ್​(150 ವಿಕೆಟ್​) ದಾಖಲೆ ಹಿಂದಿಕ್ಕಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಐಪಿಎಲ್​ನಲ್ಲಿ ಗರಿಷ್ಠ ವಿಕೆಟ್
ಐಪಿಎಲ್​ನಲ್ಲಿ ಗರಿಷ್ಠ ವಿಕೆಟ್

ಅಬುಧಾಬಿ: 13ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್ ಶರ್ಮಾ ವಿಕೆಟ್ ಪಡೆಯುವ ಮೂಲಕ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಖ್ಯಾತಿಗೆ ಪಿಯೂಷ್​ ಚಾವ್ಹಾ ಭಾಜನರಾಗಿದ್ದಾರೆ.

ಈ ಹಿಂದೆ ಕಿಂಗ್ಸ್​ ಇಲೆವೆನ್​ ಪಂಜಾಬ್ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಪರ ಆಡಿದ್ದ ಪಿಯೂಷ್‌ ಚಾವ್ಲಾ, ಇದೀಗ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಪರ ಆಡಿದ ಮೊದಲ ಪಂದ್ಯದಲ್ಲಿ ಸ್ಪಿನ್ನರ್​ ಹರ್ಭಜನ್​ ಸಿಂಗ್​(150 ವಿಕೆಟ್​​) ದಾಖಲೆ ಹಿಂದಿಕ್ಕಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದ್ದ ರೋಹಿತ್ ಶರ್ಮಾರನ್ನು ಸ್ಪಿನ್ ಬಲೆಗೆ ಬೀಳಿಸುವಲ್ಲಿ ಪಿಯೂಷ್‌ ಚಾವ್ಲಾ ಯಶಸ್ವಿಯಾದರು.

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಲಸಿತ್​ ಮಾಲಿಂಗ 170 ವಿಕೆಟ್ ಪಡೆದು ಗರಿಷ್ಠ ವಿಕೆಟ್​ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಅಮಿತ್ ಮಿಶ್ರಾ(157), 3ನೇ ಸ್ಥಾನದಲ್ಲಿ ಪಿಯೂಷ್ ಚಾವ್ಲಾ (151) ಹಾಗೂ ಹರ್ಭಜನ್​ ಸಿಂಗ್(150) ವಿಕೆಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.