ನವದೆಹಲಿ: ತಮ್ಮ ವೃತ್ತಿಜೀವನದ ಆರಂಭದಲ್ಲಿ ಬಹಳಷ್ಟು ಜನ ತನ್ನ ಅನಧಿಕೃತ ಶೈಲಿ ಬೌಲಿಂಗ್ ಸಾಮರ್ಥ್ಯದ ಮೇಲೆ ನಂಬಿಕೆಯಿರಲಿಲ್ಲ ಎಂದು ಏಕದಿನ ಕ್ರಿಕೆಟ್ನ ನಂಬರ್ ಒನ್ ಬೌಲರ್ ಆಗಿರುವ ಭಾರತದ ಜಸ್ಪ್ರೀತ್ ಬುಮ್ರಾ ಭಾನುವಾರ ಹೇಳಿದ್ದಾರೆ.
ಭಾರತದ ನಂಬರ್ ಒನ್ ವೇಗಿ ಬುಮ್ರಾ , ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ರೊಡನೆ ನಡೆಸಿದ ಇನ್ಸ್ಟಾಗ್ರಾಮ್ ಲೈವ್ ಸಂವಾದದ ವೇಳೆ ತಮ್ಮನ್ನು ಬಹಳಷ್ಟು ಜನರು ಇಷ್ಟರ ಮಟ್ಟಿಗೆ ಬೆಳೆಯುತ್ತಾರೆ ಎಂದು ನಂಬಿರಲಿಲ್ಲ ಎಂದು ತಿಳಿಸಿದ್ದಾರೆ.
ಯುವರಾಜ್ ಬೌಲಿಂಗ್ ಆ್ಯಕ್ಷನ್ ಬಗ್ಗೆ ಬುಮ್ರಾರನ್ನು ಕೇಳಿದಾಗ ಪ್ರತಿಕ್ರಿಯಿಸಿದ ವೇಗಿ, "ಬಹಳಷ್ಟು ಜನರು ನೀನು ಹೆಚ್ಚು ಸಮಯ ಆಡುವುದಿಲ್ಲ ಎಂದು ಹೇಳಿದ್ದರು. ಅವರೆಲ್ಲರ ಮನದೆಲ್ಲಿ ದೇಶಕ್ಕಾಗಿ ಆಡುವ ಕೊನೆಯ ವ್ಯಕ್ತಿ ಎಂಬ ನಿರೀಕ್ಷೆಯಿತ್ತು. ಅವರು ನನಗೆ ಕೇವಲ ರಣಜಿ ಮಾತ್ರ ಆಡುತ್ತೀಯ ಎಂದು ಹೇಳಿದ್ದರು. ಆದರೆ ನಾನು ನನ್ನ ಬೌಲಿಂಗ್ ಆಕ್ಷನ್ ಮುಂದುವರಿಸಿಕೊಂಡೆ ದಿನದಿಂದ ದಿನಕ್ಕೆ ಸುಧಾರಿತ್ತಲೇ ಬಂದೆ" ಎಂದು ತಿಳಿಸಿದ್ದಾರೆ.
ಇದೇ ವೇಳೆ ಯುವರಾಜ್ ಕೂಡ ಜಸ್ಪ್ರೀತ್ ಬುಮ್ರಾ ವಿಶ್ವದ ನಂಬರ್ ಒನ್ ಬೌಲರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದೆ ಎಂದ ಲೈವ್ನಲ್ಲಿ ಹೇಳಿಕೊಂಡಿದ್ದಾರೆ.
" 3 ವರ್ಷಗಳ ಹಿಂದೆಯೇ ನೀನು ವಿಶ್ವದ ನಂಬರ್ ಒನ್ ಬೌಲ್ ಆಗುತ್ತೀಯಾ ಎಂದು ಭವಿಷ್ಯ ನುಡಿದಿದ್ದೆ " ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಬುಮ್ರಾ ಕೊನೆಯ ಬಾರಿ ನ್ಯೂಜಿಲ್ಯಾಂಡ್ ವಿರುದ್ಧ ಕಣಕ್ಕಿಳಿದಿದ್ದರು. ಈ ಟೆಸ್ಟ್ ಸರಣಿಯಲ್ಲಿ 6 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು. ಆದರೂ ಭಾರತ 2-0ಯಲ್ಲಿ ಟೆಸ್ಟ್ ಸರಣಿ ಕಳೆದುಕೊಂಡಿತ್ತು.
ಬುಮ್ರಾ ಪ್ರಸ್ತುತ ಏಕದಿನ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಟೆಸ್ಟ್ನಲ್ಲಿ 7 ನೇ ಸ್ಥಾನದಲ್ಲಿದ್ದಾರೆ.