ETV Bharat / sports

ಧೋನಿ ಸ್ಥಾನ ಮತ್ತೊಬ್ಬ ತುಂಬುವುದು ಅಸಾಧ್ಯ ಎಂಬ ನಂಬಿಕೆಯೇ ನನಗೆ ಒತ್ತಡ ತರುತ್ತಿದೆ: ಕೆ.ಎಲ್​ ರಾಹುಲ್​

"ನಾನು ಐಪಿಎಲ್​ನಲ್ಲಿ ಹಾಗೂ ಕರ್ನಾಟಕ ಪರ ಆಡುವಾಗ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸಿದ್ದೇನೆ. ಕೀಪಿಂಗ್​ ನನಗೆ ಹೊಸದೇನೆಲ್ಲ,ತಂಡಕ್ಕೆ ಅವಶ್ಯಕತೆಯಿದ್ದರೆ ಯಾವಾಗ ಬೇಕಾದರೂ ನಾನು ಆ ಜವಾಬ್ದಾರಿ ನಿರ್ವಹಿಸಲು ಸಿದ್ದನಿದ್ದೇನೆ" ಎಂದು ರಾಹುಲ್​, ದಿನೇಶ್​ ಕಾರ್ತಿಕ್​ರೊಡನೆ ನಡೆದ ಇನ್ಸ್ಟಾಗ್ರಾಮ್​ ಲೈವ್​ನಲ್ಲಿ ಹೇಳಿಕೊಂಡಿದ್ದಾರೆ.

ರಾಹುಲ್
ರಾಹುಲ್
author img

By

Published : Apr 28, 2020, 12:04 PM IST

Updated : Apr 28, 2020, 12:21 PM IST

ಮುಂಬೈ: ಭಾರತ ತಂಡದ ಅಭಿಮಾನಿಗಳು ಧೋನಿ ಜಾಗದಲ್ಲಿ ಬೇರೊಬ್ಬ ವಿಕೆಟ್​ ಕೀಪರ್​ನನ್ನು ನೋಡಲು ಬಯಸುತ್ತಿಲ್ಲ, ಈ ವೇಳೆ ಕೇವಲ ಒಂದು ಬಾಲನ್ನು ಬಿಟ್ಟರೂ ನಮ್ಮ ಮೇಲೆ ಒತ್ತಡ ಬರುತ್ತಿದೆ ಎಂದು ಕ್ರಿಕೆಟರ್​ ಕೆ.ಎಲ್​. ರಾಹುಲ್​ ಅಭಿಪ್ರಾಯಪಟ್ಟಿದ್ದಾರೆ.

ಸುದೀರ್ಘ 15 ವರ್ಷಗಳ ಕಾಲ ಧೋನಿ ಭಾರತ ತಂಡದ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸಿದ್ದರು, ಆದರೆ 2019ರ ವಿಶ್ವಕಪ್​ ಸೆಮಿಫೈನಲ್​ ನಂತರ ಧೋನಿ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ನಂತರ ಬಿಸಿಸಿಐ ಆಯ್ಕೆ ಸಮಿತಿ ಕೂಡ ಧೋನಿಯನ್ನು ಆಯ್ಕೆ ಮಾಡಲಿಲ್ಲ. ಹೀಗಾಗಿ ಅವರ ಜಾಗದಲ್ಲಿ ಪಂತ್​ ಹಾಗೂ ರಾಹುಲ್​ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸಿದರಾದರೂ ಅಭಿಮಾನಿಗಳು ಮಾತ್ರ ಧೋನಿ ಜಾಗದಲ್ಲಿ ಬೇರೊಬ್ಬ ವಿಕೆಟ್​ ಕೀಪರ್​ನನ್ನು ಒಪ್ಪಿಕೊಳ್ಳುತ್ತಿಲ್ಲ.

"ನಾನು ಭಾರತದ ಪರ ವಿಕೆಟ್​ ಕೀಪರ್ ಜವಾಬ್ದಾರಿ ನಿರ್ವಹಿಸುವ ವೇಳೆ ಒತ್ತಡಕ್ಕೊಳಗಾಗುತ್ತೇನೆ, ಏಕೆಂದರೆ ಒಂದು ಎಸೆತವನ್ನು ಬಿಟ್ಟರೆ ಧೋನಿ ಜಾಗವನ್ನು ತುಂಬಲು ಯಾರಿಂದ ಸಾಧ್ಯವಿಲ್ಲ ಎಂಬ ಭಾವನೆ ಜನರಲ್ಲಿದೆ. ಲೆಜೆಂಡ್​ ವಿಕೆಟ್​ ಕೀಪರ್​ ಧೋನಿ ಜಾಗವನ್ನು ತುಂಬುವುದು ಅಸಾಧ್ಯ, ಬೇರೊಬ್ಬ ವಿಕೆಟ್​ ಕೀಪರ್​ನನ್ನು ಜನರು ಒಪ್ಪಿಕೊಳ್ಳುತ್ತಿಲ್ಲ" ಎಂದು ರಾಹುಲ್​ ತಿಳಿಸಿದ್ದಾರೆ.

"ನಾನು ಐಪಿಎಲ್​ನಲ್ಲಿ ಹಾಗೂ ಕರ್ನಾಟಕ ಪರ ಆಡುವಾಗ ವಿಕೆಟ್​ ಕೀಪಿಂಗ್​ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಕೀಪಿಂಗ್​ ನನಗೆ ಹೊಸದೇನೆಲ್ಲ,ತಂಡಕ್ಕೆ ಅವಶ್ಯಕತೆಯಿದ್ದರೆ ಯಾವಾಗ ಬೇಕಾದರೂ ನಾನು ಆ ಜವಾಬ್ದಾರಿ ನಿರ್ವಹಿಸಲು ಸಿದ್ದನಿದ್ದೇನೆ" ಎಂದು ರಾಹುಲ್​, ದಿನೇಶ್​ ಕಾರ್ತಿಕ್​ರೊಡನೆ ನಡೆದ ಇನ್ಸ್ಟಾಗ್ರಾಮ್​ ಲೈವ್​ನಲ್ಲಿ ಹೇಳಿಕೊಂಡಿದ್ದಾರೆ.

Last Updated : Apr 28, 2020, 12:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.